ಕೈಗಾರಿಕಾ ಜಗತ್ತಿಗೆ ಕರೆದೊಯ್ಯಲಿದೆ ಮಣಿಪಾಲ MSDC ಯ ಕೈಗಾರಿಕಾ ತರಬೇತಿ, ಇಂಟರ್ನ್‌ಶಿಪ್ ಕಾರ್ಯಕ್ರಮ, ನೀವೂ ಭಾಗವಹಿಸಿ ಅದ್ಬುತ ಕೌಶಲ್ಯ ಪಡೆಯಿರಿ

ಮಣಿಪಾಲ: ಯುವ ಜನತೆಗೆ ಕೈಗಾರಿಕಾ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ವತಿಯಿಂದ CNC ಯಂತ್ರಗಳ ಕುರಿತ ಕೈಗಾರಿಕಾ ತರಬೇತಿ ಹಾಗೂ ಇಂಟರ್ನ್‌ಶಿಪ್ ಕಾರ್ಯಕ್ರಮವನ್ನು ಜೂನ್ 1 ರಿಂದ ಆಯೋಜಿಸಲಾಗಿದೆ.

ಈ ತರಬೇತಿ ಒಂದು ತಿಂಗಳ ಅವಧಿಯದ್ದಾಗಿದ್ದು, CNC ಟರ್ನಿಂಗ್ ಸೆಂಟರ್ ಮತ್ತು CNC ವರ್ಟಿಕಲ್ ಮಷೀನಿಂಗ್ ಸೆಂಟರ್‌ಗಳ ಪ್ರೋಗ್ರಾಮಿಂಗ್, ಸಿಮ್ಯುಲೇಷನ್ ಹಾಗೂ ಕಾರ್ಯಾಚರಣೆ ಕುರಿತು ಇಲ್ಲಿ ಸಮಗ್ರ ತರಬೇತಿ ನೀಡಲಾಗುತ್ತದೆ.ಈ ಕಾರ್ಯಕ್ರಮದಲ್ಲಿ FANUC ಕಂಟ್ರೋಲರ್ ಬಳಸಿ CNC ಯಂತ್ರಗಳ ಪ್ರೋಗ್ರಾಮಿಂಗ್ ತಂತ್ರಗಳು, FANUC ಸಿಮ್ಯುಲೇಷನ್ ಸಾಫ್ಟ್‌ವೇರ್ ಮೂಲಕ ಪ್ರೋಗ್ರಾಂಗಳ ಸಿಮ್ಯುಲೇಷನ್, ವರ್ಕ್ ಒರಿಜಿನ್ ಸೆಟ್ಟಿಂಗ್, ಟೂಲ್ ಆಫ್‌ಸೆಟ್ ಅಡ್ಜಸ್ಟ್‌ಮೆಂಟ್ ಹಾಗೂ CNC ಯಂತ್ರಗಳ ಕಾರ್ಯಾಚರಣೆಯ ಪ್ರಾಯೋಗಿಕ ತರಬೇತಿಯನ್ನು ನೀಡಲಾಗುತ್ತದೆ.

ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ CNC ಪ್ರೋಗ್ರಾಮಿಂಗ್ ಹಾಗೂ ಆಪರೇಷನ್‌ಗಳ ಬಲವಾದ ಅಡಿಪಾಯ ನಿರ್ಮಾಣವಾಗುವುದರ ಜೊತೆಗೆ ಆಧುನಿಕ ಸಾಫ್ಟ್‌ವೇರ್ ಮತ್ತು ಪ್ರಿಸಿಷನ್ ಯಂತ್ರಗಳೊಂದಿಗೆ ನೇರ ಅನುಭವ ದೊರೆಯಲಿದೆ. FANUC ಕಂಟ್ರೋಲರ್‌ನ ಇತ್ತೀಚಿನ ಆವೃತ್ತಿ ಹಾಗೂ ಸಿಮ್ಯುಲೇಷನ್ ಸಾಫ್ಟ್‌ವೇರ್ ಬಳಕೆಯಲ್ಲಿಯೂ ಪರಿಣತಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ.

ಒಂದು ತಿಂಗಳ ತರಬೇತಿಯ ಶುಲ್ಕ ₹8,000 ಆಗಿದ್ದು, ಆಸಕ್ತರು ಮಣಿಪಾಲದ ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಕ್ಯಾಂಪಸ್‌ನ MSDC ಕಚೇರಿಯನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ 8123165069 ಸಂಖ್ಯೆಗೆ ಕರೆ ಮಾಡಿ.