ಉಡುಪಿ: ವಿದ್ಯಾ ಟ್ಯುಟೋರಿಯಲ್’ನಲ್ಲಿ ಪ್ರವೇಶಾತಿ ಆರಂಭ.

ಉಡುಪಿ: ಉಡುಪಿಯ ಹೆಸರಾಂತ ವಿದ್ಯಾ ಟ್ಯುಟೋರಿಯಲ್ ಕಾಲೇಜ್ ನಲ್ಲಿ ವಿವಿಧ ತರಗತಿಗಳಿಗೆ ದಾಖಲಾತಿ ಆರಂಭಗೊಂಡಿದೆ. ಎಸ್.ಎಸ್.ಎಲ್.ಸಿ. ಪಾಸಾದವರು ಅಥವಾ ಪ್ರಥಮ ಪಿ.ಯು.ಸಿ ಫೇಲಾಧವರು ನೇರವಾಗಿ ದ್ವಿತೀಯ ಪಿ.ಯು.ಸಿ ಮಾಡಬಹುದು. 7,8 ಅಥವಾ 9 ನೇ ತರಗತಿ ಫೇಲಾದವರು ನೇರವಾಗಿ ಎಸ್.ಎಸ್.ಎಲ್.ಸಿ ಮಾಡಬಹುದು.ಇದಲ್ಲದೆ 8,9 ಮತ್ತು 10 ನೇ ತರಗತಿಯ ಎಲ್ಲಾ ವಿಷಯಗಳು, ಪಿ.ಯು.ಸಿ ಯ ಅಕೌಂಟೆನ್ಸಿ, ಸ್ಟ್ಯಾಟಿಸ್ಟಿಕ್ಸ್, ಬಿಸಿನೆಸ್ ಸ್ಟಡೀಸ್ ಹಾಗೂ ಕಂಪ್ಯೂಟರ್ ಸೈನ್ಸ್ ಮುಂತಾದ ವಿಷಯಗಳಿಗೆ ತರಬೇತಿ ನೀಡಲಾಗುವುದು. ಇಂದೇ ಭೇಟಿಯಾಗಿ ವಿದ್ಯಾ ಟ್ಯುಟೋರಿಯಲ್ ಕಾಲೇಜ್. […]
ಮಂಗಳೂರು ಕದ್ರಿ ಉದ್ಯಾನವನದಲ್ಲಿ ಮೇ 28ರಿಂದ ಮಾವು ಮೇಳ

ಮಂಗಳೂರು: ರಾಮನಗರ ಜಿಲ್ಲಾ ಮಾವು ಬೆಳೆಗಾರರ ಮಾರಾಟ ಸಂಘ ವತಿಯಿಂದ ತೋಟಗಾರಿಕಾ ಇಲಾಖೆಯ ಸಹಕಾರದೊಂದಿಗೆ ಮೇ 28ರಿಂದ 31ರವರೆಗೆ ಕದ್ರಿ ಉದ್ಯಾನವನದಲ್ಲಿKadri Park ನಲ್ಲಿ ಮಾವು ಮೇಳ ಆಯೋಜಿಸಲಾಗಿದೆ. ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ರಮೇಶ್ ಮಾತನಾಡಿ, ಮೇಳದಲ್ಲಿ ನೈಸರ್ಗಿಕವಾಗಿ ಮಾಗಿಸಲಾದ ವಿವಿಧ ತಳಿಯ ಮಾವಿನ ಹಣ್ಣುಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿರಲಿವೆ ಎಂದು ತಿಳಿಸಿದರು. ಆಲ್ಫಾನ್ಸೋ, ಬಾದಾಮಿ, ಮಲ್ಲಿಕ, ರಸಪುರಿ, ಮಲಗೋವಾ, ಸಿಂಧೂರ, ಕಾಲಪಾಡಿ, ತೋತಾಪುರಿ ಹಾಗೂ ಬೆಂಗನಪಳ್ಳಿ ಶುಗರ್ ಬೇಬಿ ಸೇರಿದಂತೆ ಹಲವು […]
ಮಣಿಪಾಲದ MSDC ಯಲ್ಲಿದೆ ಕಂಟೆಂಟ್ ಕ್ರಿಯೇಟರ್ ಇಂಟರ್ನ್ ಹುದ್ದೆ: ಆಸಕ್ತರು ಅರ್ಜಿ ಸಲ್ಲಿಸಿ

ಮಣಿಪಾಲ: ಮಣಿಪಾಲ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (MSDC) ನಲ್ಲಿ ಆನ್-ಕ್ಯಾಮೆರಾ ಕಂಟೆಂಟ್ ಕ್ರಿಯೇಟರ್ ಇಂಟರ್ನ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಸಾಮಾಜಿಕ ಜಾಲತಾಣಗಳಿಗಾಗಿ ರೀಲ್ಸ್ ನಿರ್ಮಾಣ, ಕ್ರಿಯೇಟಿವ್ ಕಂಟೆಂಟ್ ಐಡಿಯಾಗಳ ರೂಪಿಸುವುದು ಹಾಗೂ ಕ್ಯಾಮೆರಾ ಮುಂದೆ ನಿರೂಪಣೆ ಮಾಡುವ ಕೌಶಲ್ಯ ಹೊಂದಿರುವ ಯುವಜನರಿಗೆ ಇದು ಉತ್ತಮ ಅವಕಾಶವಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳು ಸೋಶಿಯಲ್ ಮೀಡಿಯಾ ಕಂಟೆಂಟ್ ತಯಾರಿ, ರೀಲ್ಸ್ ಕ್ರಿಯೇಷನ್ ಹಾಗೂ ಆನ್-ಕ್ಯಾಮೆರಾ ಪ್ರೆಸೆಂಟೇಶನ್ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಆಸಕ್ತ ಅಭ್ಯರ್ಥಿಗಳು ತಮ್ಮ ಸಿವಿ ಹಾಗೂ ಪೋರ್ಟ್‌ಫೋಲಿಯೊವನ್ನು [email protected] ಗೆ ಕಳುಹಿಸಬಹುದು.
ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಹಾಸನದ ಕೃಷಿಕನನ್ನು ರಕ್ಷಿಸಿದ ಮಂಗಳೂರು ಪೊಲೀಸರು

ಮಂಗಳೂರು: ನಗರದ ಹೊರವಲಯದ ಕೂಳೂರು ಸೇತುವೆ Kuloor Bridge ಸಮೀಪದ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಹಾಸನ ಜಿಲ್ಲೆಯ Hassan District ಜಿಲ್ಲೆಯ ಕೃಷಿಕನನ್ನು ಪಣಂಬೂರು ಪೊಲೀಸರು ಸಮಯಪ್ರಜ್ಞೆಯಿಂದ ರಕ್ಷಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಸಮೀಪದ ಹಳ್ಳಿಯ ನಿವಾಸಿಯಾಗಿರುವ ಕೃಷಿಕ ಆರೋಗ್ಯ ಹಾಗೂ ಹಣಕಾಸಿನ ಸಮಸ್ಯೆಯಿಂದ ಮನನೊಂದು ಶುಕ್ರವಾರ ಬೆಳಗ್ಗೆ ಮನೆಯಿಂದ ಯಾರಿಗೂ ತಿಳಿಸದೆ ಹೊರಟಿದ್ದರು. ಮೊಬೈಲ್‌ಫೋನ್ ಆನ್‌ನಲ್ಲಿದ್ದ ಕಾರಣ ಮನೆಯವರು ನಿರಂತರ ಕರೆ ಮಾಡಿ ಮನೆಗೆ ಮರಳುವಂತೆ ಮನವಿ […]
ಚಾರಣಿಗರಿಗೆ ಸಿಹಿಸುದ್ದಿ: ಜೂನ್ 1ರಿಂದ ಈ ಎಲ್ಲಾ ಟ್ರೆಕ್ಕಿಂಗ್ ಗಳಿಗೆ ಗ್ರೀನ್ ಸಿಗ್ನಲ್

ಬೆಳ್ತಂಗಡಿ: ತಾಲೂಕಿನ ಪ್ರಕೃತಿ ಪ್ರಿಯರು ಮತ್ತು ಚಾರಣಿಗರಿಗೆ ಸಂತಸದ ಸುದ್ದಿ ಸಿಕ್ಕಿದೆ. ಮಳೆಗಾಲ ಆರಂಭದ ಹೊತ್ತಿಗೆ ಪಶ್ಚಿಮ ಘಟ್ಟದ ಹಸಿರು ಮರುಕಳಿಸಿದ್ದು, ಪ್ರಮುಖ ಚಾರಣ ಸ್ಥಳಗಳು ಹಾಗೂ ಜಲಪಾತಗಳು ಮತ್ತೆ ಪ್ರವಾಸಿಗರನ್ನು ಆಕರ್ಷಿಸಲು ಸಜ್ಜಾಗಿವೆ. ಜೂನ್ 1ರಿಂದ ನೇತ್ರಾವತಿ ಪೀಕ್, ಬಂಡಾಜೆ ಫಾಲ್ಸ್, ಗಡಾಯಿಕಲ್ಲು ಸೇರಿದಂತೆ ಹಲವು ಪ್ರವಾಸಿ ತಾಣಗಳು ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗುತ್ತಿದೆ. ಕಳೆದ ಜನವರಿಯಲ್ಲಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗವು ಕಾಡಿಚ್ಚಿನ ಭೀತಿ ಮತ್ತು ಅರಣ್ಯ ಸಂರಕ್ಷಣೆ ದೃಷ್ಟಿಯಿಂದ ಈ ಪ್ರದೇಶಗಳಿಗೆ ಪ್ರವೇಶ ನಿಷೇಧ […]