ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರ ಪ್ರವಾಸ ಕಾರ್ಯಕ್ರಮ

ಉಡುಪಿ: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಾ. ರಾಮಪ್ಪ ಎಂ ಅವರು ಮೇ 28 ರಿಂದ 30 ರ ವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಮೇ 28 ರಂದು ರಾತ್ರಿ ಉಡುಪಿಗೆ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ. ಮೇ 29 ರಂದು ಬೆಳಗ್ಗೆ 8 ಗಂಟೆಗೆ ಶ್ರೀ ಕೃಷ್ಣ ದೇವಸ್ಥಾನಕ್ಕೆ ಭೇಟಿ, 11 ಗಂಟೆಗೆ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಿಗಮದ ಪ್ರಗತಿ ಪರಿಶೀಲನಾ ಸಭೆ, ಮಧ್ಯಾಹ್ನ 2 ಗಂಟೆಗೆ ಸಾಯಬ್ರಕಟ್ಟೆ ಯಡ್ತಾಡಿ ಗ್ರಾಮದ […]
ಆಂತರಿಕ ದೂರು ಸಮಿತಿಗಳು ಕಡ್ಡಾಯವಾಗಿ ರಚಿಸಿ, ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸಿ: ಡಾ. ನಾಗಲಕ್ಷ್ಮಿ ಚೌಧರಿ

ಉಡುಪಿ: ಮಹಿಳೆಯರು ಕೆಲಸ ನಿರ್ವಹಿಸುತ್ತಿರುವ ಸಂಸ್ಥೆ, ಕಚೇರಿಗಳಲ್ಲಿ ಲೈಂಗಿಕ ದೌರ್ಜನ್ಯ ಕ್ಕೆ ಒಳಗಾದಲ್ಲಿ ದೂರು ಸಲ್ಲಿಸಲು ಅನುಕೂಲವಾಗುವಂತೆ ಆಂತರಿಕ ದೂರು ಸಮಿತಿಯನ್ನು ರಚಿಸಿ, ದೂರುಗಳು ಬಂದಾಗ ಸಕ್ರಿಯವಾಗಿ ಕಾರ್ಯನಿರ್ವಹಿಸಿ, ಮಹಿಳೆಯರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರಕ್ಷಕ […]
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಗೆ ಸುತ್ತಿಕೊಂಡ ಮತ್ತೊಂದು ವಿವಾದ: ಮಾಜಿ ರೌಡಿಶೀಟರ್‌ಗೆ ಆಶೀರ್ವಾದಿಸಿದ ಡಾ. ನಾಗಲಕ್ಷ್ಮೀ ಚೌಧರಿ!

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಹಮ್ಮಿಕೊಂಡಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿಗೆ ಮತ್ತೊಂದು ವಿವಾದ ಸುತ್ತಿಕೊಂಡಿದೆ. ಚೌಧರಿ ಮಾಜಿ ರೌಡಿಶೀಟರ್‌ಗೆ ಆಶೀರ್ವಾದ ಮಾಡುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇತ್ತೀಚೆಗಷ್ಟೇ ಡಾ. ನಾಗಲಕ್ಷ್ಮೀ ಚೌಧರಿ ರೌಡಿ ಶೀಟರ್ ಪುನೀತ್ ಕೇರೇಹಳ್ಳಿಗೆ ಶುಭ ಹಾರೈಸಿದ್ದ ವಿಡಿಯೋ ಸಾಕಷ್ಟು ವೈರಲ್ ಆಗಿ ವಿವಾದ ಸೃಷ್ಟಿಸಿತ್ತು. ಇದೀಗ ಉಡುಪಿ ಜಿಲ್ಲೆಯ ಪ್ರವಾಸದ ಸಂದರ್ಭದಲ್ಲಿ ಅವರೊಂದಿಗೆ ಇದ್ದ ಮಾಜಿ ರೌಡಿ ಶೀಟರ್ ಸೋನು ಸುಧೀರ್‌ಗೆ ಕಾರಿನಲ್ಲಿ […]
“ನಿತ್ಯಾನಂದ ಕೆಮ್ಮಣ್ಣು ಅವರ 5 ನೇ ವರ್ಷದ ಪುಣ್ಯ ಸ್ಮರಣೆ ಹಾಗು ರಕ್ತದಾನ ಶಿಬಿರ ಕಾರ್ಯಕ್ರಮ”

ಕೆಮ್ಮಣ್ಣಿನ ಲಿಟಲ್ ಫ್ಲವರ್ ಹಾಲ್ ನಲ್ಲಿ 24 ನೇ ತಾರೀಕು ಭಾನುವಾರ ಜರಗಿತು ಈ ಕಾರ್ಯಕ್ರಮ. ನಿತ್ಯಾನಂದ ಅಭಿಮಾನಿ ಬಳಗ ಗ್ರಾಮೀಣ ಕಾಂಗ್ರೆಸ್ ಕೆಮ್ಮಣ್ಣು ICYM. ಕೆಮ್ಮಣ್ಣು ಉಡುಪಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘ ಶ್ರೀ ಗಜಾನನ ಬಿಲ್ಲವರ ಸೇವಾ ಸಂಘ ಹೂಡೆ ತೋನ್ಸೆ ಫ್ರೆಂಡ್ಸ್ ಹೂಡೆ ಹಾಗು ಉಡುಪಿ ಜಿಲ್ಲಾ ಸರಕಾರಿ ರಕ್ತ ನೀದಿ. ವಿಭಾಗ ಆಸ್ಪತ್ರೆ ಅಜ್ಜರಕಾಡ್ ನ ಸಂಯುಕ್ತ ಆಶ್ರಯ ದಲ್ಲಿ ಜರಗಿತು…ಈ ಕಾರ್ಯಕ್ರಮ ದಲ್ಲಿ ಅಥಿತಿ ಯಾಗಿ ಕೆಮ್ಮಣ್ಣು ಚರ್ಚ್ ನ ಧರ್ಮ ಗುರುಗಳು ನಗರಾಭಿವೃದ್ಧಿ […]
ಸಮುದ್ರದಲ್ಲಿ ಬಿದ್ದು ವ್ಯಕ್ತಿ ನಾಪತ್ತೆ

ಉಡುಪಿ: ಮಲ್ಪೆ ಬಂದರಿನಲ್ಲಿ ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದ ಶಂಕರಗೌಡ ಶಿವಪ್ಪ ಆಡೂರ (26) ಎಂಬ ವ್ಯಕ್ತಿಯು ಮೇ.17ರಂದು ಸಮುದ್ರದಲ್ಲಿ ಮೀನುಗಾರಿಕಾ ಬಲೆಯನ್ನು ಎಳೆಯುತ್ತಿದ್ದ ಸಂದರ್ಭದಲ್ಲಿ ಬೋಟು ಅಲುಗಾಡಿದ ಪರಿಣಾಮ ಕಾಲು ಜಾರಿ ಸಮುದ್ರದ ನೀರಿಗೆ ಬಿದ್ದು ಕಾಣೆಯಾಗಿರುತ್ತಾರೆ. 5 ಅಡಿ 3 ಇಂಚು ಎತ್ತರ, ಎಣ್ಣೆಗಪ್ಪು ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಲ್ಪೆ ಪೊಲೀಸ್ ಠಾಣೆ ದೂ.ಸಂ: 0820-2537999, ಮಲ್ಪೆ ಪಿ.ಎಸ್.ಐ ಸಂಖ್ಯೆ: 9480805447, ಮಲ್ಪೆ ವೃತ್ತ ನಿರೀಕ್ಷಕರ ಸಂಖ್ಯೆ: 9480805430 […]