ಮಣಿಪಾಲ: ಮಣಿಪಾಲ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (MSDC) ನಲ್ಲಿ ಆನ್-ಕ್ಯಾಮೆರಾ ಕಂಟೆಂಟ್ ಕ್ರಿಯೇಟರ್ ಇಂಟರ್ನ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಸಾಮಾಜಿಕ ಜಾಲತಾಣಗಳಿಗಾಗಿ ರೀಲ್ಸ್ ನಿರ್ಮಾಣ, ಕ್ರಿಯೇಟಿವ್ ಕಂಟೆಂಟ್ ಐಡಿಯಾಗಳ ರೂಪಿಸುವುದು ಹಾಗೂ ಕ್ಯಾಮೆರಾ ಮುಂದೆ ನಿರೂಪಣೆ ಮಾಡುವ ಕೌಶಲ್ಯ ಹೊಂದಿರುವ ಯುವಜನರಿಗೆ ಇದು ಉತ್ತಮ ಅವಕಾಶವಾಗಿದೆ.
ಆಯ್ಕೆಯಾಗುವ ಅಭ್ಯರ್ಥಿಗಳು ಸೋಶಿಯಲ್ ಮೀಡಿಯಾ ಕಂಟೆಂಟ್ ತಯಾರಿ, ರೀಲ್ಸ್ ಕ್ರಿಯೇಷನ್ ಹಾಗೂ ಆನ್-ಕ್ಯಾಮೆರಾ ಪ್ರೆಸೆಂಟೇಶನ್ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಆಸಕ್ತ ಅಭ್ಯರ್ಥಿಗಳು ತಮ್ಮ ಸಿವಿ ಹಾಗೂ ಪೋರ್ಟ್‌ಫೋಲಿಯೊವನ್ನು [email protected] ಗೆ ಕಳುಹಿಸಬಹುದು.

















