ಬೆಳಗಾವಿಯಲ್ಲಿ ಮಿಂಚಿದ ಅಕ್ಕ ಪಡೆ: ಕುತೂಹಲದಿಂದ ಕಾರ್ಯಕ್ರಮಕ್ಕೆ ಹೋದ್ರೆ ಶಾಕ್

ಬೆಳಗಾವಿ: ನಗರದಲ್ಲಿ ಅಕ್ಕ ಪಡೆ ನಡೆಸಿದ ತ್ವರಿತ ಕಾರ್ಯಾಚರಣೆಯಿಂದ ಕೇವಲ ಎರಡು ದಿನಗಳಲ್ಲಿ ಎರಡು ಬಾಲ್ಯ ವಿವಾಹಗಳನ್ನು ಯಶಸ್ವಿಯಾಗಿ ತಡೆದು ಇಬ್ಬರು ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಲಾಗಿದೆ. ಈ ಕಾರ್ಯಕ್ಕೆ ಪೊಲೀಸ್ ಅಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಬಾಲ್ಯ ವಿವಾಹ ಕಾನೂನುಬಾಹಿರವೆಂದು ತಿಳಿದಿದ್ದರೂ ಪೋಷಕರು ಮುಂದುವರಿದಿದ್ದ ಎರಡು ವಿಭಿನ್ನ ಘಟನೆಗಳಲ್ಲಿ ಅಕ್ಕ ಪಡೆ ತಕ್ಷಣ ಮಧ್ಯಪ್ರವೇಶ ಮಾಡಿ ವಿವಾಹಗಳನ್ನು ನಿಲ್ಲಿಸಿದೆ. ರಕ್ಷಿಸಲಾದ ಬಾಲಕಿಯರು 13 ಮತ್ತು 17 ವರ್ಷದವರು ಎಂದು ತಿಳಿದುಬಂದಿದೆ. ಬೆಳಗಾವಿಯ ವಂಟಮೂರಿ ಕಾಲೋನಿಯಲ್ಲಿ ಏನೋ ಕಾರ್ಯಕ್ರಮ ನಡೆಯುತ್ತಿರುವುದು […]
ಕೃಷಿ ಭೂಮಿಯಲ್ಲಿ ಮನೆ ಕಟ್ಟೋ ಪ್ಲಾನ್ ನಿಮಗಿದ್ಯಾ? ಹಾಗಾದ್ರೆ ಈ ನಿಯಮ ನಿಮಗೆ ತಿಳಿದಿರ್ಲೇಬೇಕು

ಒಂದು ಸಣ್ಣದಾದರೂ ತೋಟ, ಜಮೀನು ಖರೀದಿಸುವುದು, ಅಲ್ಲೊಂದು ಪುಟ್ಟದಾದರೂ ಮನೆ ಕಟ್ಟಿ ನೆಮ್ಮದಿಯಿಂದ ಜೀವನ ನಡೆಸೋದು ಪ್ರತಿಯೊಬ್ಬರ ಕನಸು. ಭೂಮಿ ಖರೀದಿ ಅಥವಾ ಮನೆ ನಿರ್ಮಾಣ ಮಾಡುವ ಮುನ್ನ ಬಹುತೇಕ ಜನರಿಗೆ ಎದುರಾಗುವ ಸಾಮಾನ್ಯ ಪ್ರಶ್ನೆಗಳಲ್ಲಿಕೃಷಿ ಭೂಮಿಯಲ್ಲಿ ಮನೆ ಕಟ್ಟಬಹುದೇ? ಎಂಬುದೂ ಒಂದು. ಇದರ ಉತ್ತರ ಸರಳವಾಗಿಲ್ಲ. ಕೆಲವು ಕಾನೂನು ಕ್ರಮಗಳನ್ನು ಪಾಲಿಸಿದರೆ ಮಾತ್ರ ಮನೆ ನಿರ್ಮಾಣ ಸಾಧ್ಯ. ಕೃಷಿ ಭೂಮಿ ಎಂದರೇನು? ಕೃಷಿ ಭೂಮಿ ಎಂದರೆ ಬೆಳೆ ಬೆಳೆಸಲು, ಹಣ್ಣು-ತರಕಾರಿಗಳು ಬೆಳೆಯಲು, ಹೈನುಗಾರಿಕೆ ಅಥವಾ ಕೋಳಿ […]
ಉಡುಪಿ: ಬಿಲ್ಲಿಂಗ್ ಜೊತೆ ಅಕೌಂಟ್ಸ್ ನೋಡಿಕೊಳ್ಳಲು ಯುವಕರು ಬೇಕಾಗಿದ್ದಾರೆ

ಉಡುಪಿ: ಉಡುಪಿಯಲ್ಲಿರುವ ಪ್ರತಿಷ್ಠಿತ ಸಂಸ್ಥೆಯಲ್ಲಿ ಬಿಲ್ಲಿಂಗ್ ಜೊತೆ ಅಕೌಂಟ್ಸ್ ನೋಡಿಕೊಳ್ಳಲು ಯುವಕರು ಬೇಕಾಗಿದ್ದಾರೆ. ಪದವಿ ಶಿಕ್ಷಣವನ್ನು ಹೊಂದಿರಬೇಕು. ಎರಡು ವರ್ಷ ಅನುಭವ /ಹೊಸಬರಿಗೆ ಅವಕಾಶ ನೀಡಲಾಗಿದೆ. ಆಸಕ್ತರು ಸಂಪರ್ಕಿಸಿ: 9880705942
ಮಂಗಳೂರಿನ ಪಿಲಿಕುಳದಲ್ಲಿ ವಿಶೇಷ ವ್ಯವಸ್ಥೆ: ಪ್ರಾಣಿಗಳೆಲ್ಲಾ ಇದೀಗ ತಂಪು ತಂಪು ಕೂಲ್ ಕೂಲ್

ಮಂಗಳೂರು: ಬೇಸಿಗೆಯ ಬಿಸಿ ಹವೆ ಬುದ್ಧಿ ಜೀವಿಯಾದ ಮನುಷ್ಯರಿಗೇ ಸಹಿಸಲಸಾಧ್ಯ. ಇಂತಹಾ ಸಂದರ್ಭದಲ್ಲಿ ಮೂಕಪ್ರಾಣಿಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ವನ್ಯಜೀವಿಗಳ ರಕ್ಷಣೆಗೆ ಅಧಿಕಾರಿಗಳು ವಿಶೇಷ ಕ್ರಮಗಳನ್ನು ಕೈಗೊಂಡಿದ್ದಾರೆ. ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ವ್ಯಾಪ್ತಿಯಲ್ಲಿರುವ ಈ ಮೃಗಾಲಯವು ಹಲವು ಪ್ರಾಣಿ-ಪಕ್ಷಿಗಳಿಗೆ ಆಶ್ರಯವಾಗಿದ್ದು, ಉಷ್ಣಾಂಶದ ಏರಿಕೆಯಿಂದಾಗಿ ಪ್ರಾಣಿಗಳಲ್ಲಿ ಶಾಖದ ಒತ್ತಡ ಕಾಣಿಸಿಕೊಂಡಿದೆ. ಇದನ್ನು ಪರಿಹರಿಸಲು ‘ಬೇಸಿಗೆ ನಿರ್ವಹಣಾ ಯೋಜನೆ’ಯನ್ನು ಜಾರಿಗೆ ಬಂದಿದೆ. ಈ ಯೋಜನೆಯಡಿ ಪ್ರಾಣಿಗಳ ಆವರಣಗಳಲ್ಲಿ […]
ಬೆಂಗಳೂರು ಐಪಿಎಲ್ ಅಭಿಮಾನಿಗಳಿಗೆ ಸಖತ್ ನಿರಾಶೆ: ಐಪಿಎಲ್ ಫೈನಲ್ ಪಂದ್ಯ ಬೆಂಗಳೂರಿನಿಂದ ಗುಜರಾತ್ ಗೆ ದಿಢೀರ್ ಶಿಫ್ಟ್!