ಹಿರಿಯಡ್ಕ ಶ್ರೀ ವೀರಭದ್ರ ದೇವಸ್ಥಾನ ರಥೋತ್ಸವ ಪ್ರಯುಕ್ತ ಮೇ 4 ರಂದು ವಾಹನ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ

ಉಡುಪಿ ಏಪ್ರಿಲ್ 30: ಹಿರಿಯಡ್ಕ ಶ್ರೀ ವೀರಭದ್ರ ದೇವಸ್ಥಾನದಲ್ಲಿ ನಡೆಯಲಿರುವ ರಥೋತ್ಸವದ ಪ್ರಯುಕ್ತ ಮೇ 4 ರಂದು ಸಂಜೆ 4 ಗಂಟೆಯಿoದ ರಾತ್ರಿ 10 ಗಂಟೆಯವರೆಗೆ ಹಿರಿಯಡ್ಕ – ಕಾರ್ಕಳ ರಾಜ್ಯ ಹೆದ್ದಾರಿಯ ಹಿರಿಯಡ್ಕ ಜಂಕ್ಷನ್‌ನಿoದ ಕೋಟ್ನಕಟ್ಟೆ ಜಂಕ್ಷನ್ ವರೆಗೆ ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನ ನಿಯಮ 1989 ರ ನಿಯಮ 221 5(ಎ) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಮೇಲ್ಕಂಡ ಮಾರ್ಗದಲ್ಲಿ ವಾಹನ ಸಂಚಾರ ತಾತ್ಕಾಲಿವಾಗಿ […]
ಮಣಿಪಾಲ: ಮಹಿಳೆಯ ಕೊಲೆಗೆ ಯತ್ನ- ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ: ಮಹಿಳೆಯ ಉಸಿರುಗಟ್ಟಿಸಿ ಸೂಟ್‌ಕೇಸ್‌ನಲ್ಲಿ ಹಾಕಿ ಸಾಗಿಸಲು ಯತ್ನಿಸಿದ್ದ ಆರೋಪಿಗಳು!

ಉಡುಪಿ: ನಾಲ್ಕು ವರ್ಷಗಳ ಹಿಂದೆ ಮಂಚಿಕುಮೇರಿಯಲ್ಲಿ ನಡೆದ ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.ಬೆಳ್ತಂಗಡಿ ನಿವಾಸಿ ಮಿಥುನ್ ಹಾಗೂ ನಾಗೇಶ್ ಪೂಜಾರಿ ಶಿಕ್ಷೆಗೆ ಗುರಿಯಾದ ಆರೋಪಿಗಳು.ಘಟನೆ ವಿವರ:2022ರ ಫೆಬ್ರವರಿ 18ರಂದು ಮಂಚಿಕುಮೇರಿ ನಿವಾಸಿ ರಮಾನಾಥ ರೈ ಅವರ ಪತ್ನಿ ಸುಮತಿ ಮನೆಯಲ್ಲಿ ಒಬ್ಬರೇ ಇದ್ದಾಗ ಅವರ ಅಕ್ಕನ ಮಗ ಮಿಥುನ್ ಹಾಗೂ ಅವನ ಸ್ನೇಹಿತ ನಾಗೇಶ್ […]
ಪಂಚರಾಜ್ಯಗಳ ಎಕ್ಸಿಟ್ ಪೋಲ್ ಫಲಿತಾಂಶ ಔಟ್: ಬಂಗಾಳದಲ್ಲಿ ಮತ್ತೆ ದೀದಿ, ತಮಿಳುನಾಡಿನಲ್ಲಿ ಸ್ಟಾಲಿನ್, ಇನ್ನೂ ಏನೇನಿದೆ ಎಕ್ಸಿಟ್ ಪೋಲ್ ಭವಿಷ್ಯ?

ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಎಕ್ಸಿಟ್ ಪೋಲ್ ಫಲಿತಾಂಶಗಳು ಪ್ರಕಟವಾಗಿದ್ದು, ಹಲವು ರಾಜ್ಯಗಳ ರಾಜಕೀಯ ಸಮೀಕರಣಗಳನ್ನು ಬದಲಾಯಿಸುವ ಸೂಚನೆ ನೀಡಿವೆ. ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಆಡಳಿತ ಅಥವಾ ಪ್ರಮುಖ ಪಕ್ಷಗಳಿಗೆ ಮುನ್ನಡೆ ಸಿಗುವ ಸಾಧ್ಯತೆ ವ್ಯಕ್ತವಾಗಿದ್ದು, ಅಸ್ಸಾಂನಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗುವ ಅಂದಾಜು ವ್ಯಕ್ತವಾಗಿದೆ. ಪುದುಚೇರಿಯಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಅಧಿಕಾರದ ದಾರಿ ಸುಗಮವಾಗುವ ಲಕ್ಷಣಗಳು ಕಾಣಿಸುತ್ತಿವೆ. ತಮಿಳುನಾಡಿನಲ್ಲಿ ಡಿಎಂಕೆಗೆ ಸ್ಪಷ್ಟ ಮುನ್ನಡೆ234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದೆ. ವಿವಿಧ ಎಕ್ಸಿಟ್ […]
ಡೇಟಿಂಗ್ ಹೋಗುವಾಗ ಇಬ್ಬರೂ ಲವ್ ಬರ್ಡ್ಸ್, ಹೊಟೇಲ್ ಬಿಲ್ ಹಂಚಿ ಕೊಳ್ಳುವ ಎಂದದ್ದಕ್ಕೆ ಬ್ರೇಕಪ್: ವೈರಲ್ ಆದ ಬಿಲ್ ಪ್ರೇಮ ಕಹಾನಿ!

ಮುಂಬೈನಂತಹ ಮೆಟ್ರೋ ನಗರಗಳಲ್ಲಿ ಡೇಟಿಂಗ್ ಎಂದರೆ ಕೇವಲ ಕಾಫಿ, ಡಿನ್ನರ್ ಅಥವಾ ಔಟಿಂಗ್ ಮಾತ್ರವಲ್ಲ, ಅದು ಈಗ ಸಂಬಂಧಗಳ ಮನಸ್ಥಿತಿ ಪರೀಕ್ಷೆಯಂತಾಗಿದೆ. ಇತ್ತೀಚೆಗೆ ಮುಂಬೈನ ಹೈ-ಪ್ರೊಫೈಲ್ ಮಹಿಳೆಯೊಬ್ಬರ ಡೇಟಿಂಗ್ ಅನುಭವ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆಯವರೆಗೆ ಸಾಗಬಹುದೆಂದುಕೊಂಡಿದ್ದ ಸಂಬಂಧ ಕೇವಲ ₹2,500 ಕಾರಣಕ್ಕೆ ಮುರಿದಿದ್ದು ಎಲ್ಲರ ಗಮನ ಸೆಳೆದಿದೆ. ಮುಂಬೈನಲ್ಲಿ ವಾಸಿಸುವ 36 ವರ್ಷದ ಮಹಿಳೆ ವರ್ಷಕ್ಕೆ ಸುಮಾರು ₹80 ಲಕ್ಷ ಆದಾಯ ಹೊಂದಿದ್ದಾರೆ ಎನ್ನಲಾಗಿದೆ. ಮ್ಯಾಚ್‌ಮೇಕಿಂಗ್ ಸೇವೆಯ ಮೂಲಕ ಅವರು ಒಬ್ಬ ಯುವಕನನ್ನು […]
ಟ್ಯಾಕ್ಸಿ, ಸರಕು ವಾಹನ, ಆಟೋರಿಕ್ಷಾ ಖರೀದಿಗೆ ಸಿಗಲಿದೆ 2.5 ಲಕ್ಷ ರೂ. ಸಬ್ಸಿಡಿ; ಯಾರಿಗಿದೆ ಅರ್ಹತೆ?

ಕರ್ನಾಟಕದಲ್ಲಿ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದವರಿಗೆ ಸ್ವಯಂ ಉದ್ಯೋಗ ಆರಂಭಿಸಲು ಉತ್ತಮ ಅವಕಾಶ ಒದಗಿಸುವ ಉದ್ದೇಶದಿಂದ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (KMDC) ವಿಶೇಷ ವಾಹನ ಖರೀದಿ ಸಹಾಯಧನ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ಟ್ಯಾಕ್ಸಿ, ಪ್ರಯಾಣಿಕ ಆಟೋರಿಕ್ಷಾ ಹಾಗೂ ಸರಕು ವಾಹನಗಳನ್ನು ಖರೀದಿಸಲು ಸರ್ಕಾರದಿಂದ ಆರ್ಥಿಕ ನೆರವು ನೀಡಲಾಗುತ್ತದೆ. ಯೋಜನೆ ಕುರಿತು ಒಂದಿಷ್ಟು ಈ ಯೋಜನೆ KMDC ಹಾಗೂ ರಾಷ್ಟ್ರೀಕೃತ/ಅನುಸೂಚಿತ ಬ್ಯಾಂಕ್‌ಗಳ ಸಹಯೋಗದಲ್ಲಿ ಜಾರಿಯಲ್ಲಿದೆ. ಅರ್ಹ ಫಲಾನುಭವಿಗಳು ಬ್ಯಾಂಕ್ ಮೂಲಕ ಸಾಲ ಪಡೆಯುವಾಗ, ಸರ್ಕಾರದಿಂದ ಸಹಾಯಧನ ನೀಡಲಾಗುತ್ತದೆ. […]