ಪುತ್ತೂರು: ಲಾರಿ–ಬೈಕ್ ಅಪಘಾತ; ವಿದ್ಯಾರ್ಥಿ ಸಾವು, ಯುವತಿಗೆ ಗಂಭೀರ ಗಾಯ

ಪುತ್ತೂರು: ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ನೀರಕಟ್ಟೆ ಬಳಿ ಬುಧವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್‌ನ ಹಿಂಬದಿ ಸವಾರಿಯಾಗಿದ್ದ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಕಾರ್ತಿಕ್ (23) ಎಂದು ಗುರುತಿಸಲಾಗಿದೆ. ಗಾಯಗೊಂಡ ನೇಹಾ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಮದುವೆ ಕಾರ್ಯಕ್ರಮವೊಂದನ್ನು ಮುಗಿಸಿ ದ್ವಿಚಕ್ರ ವಾಹನಗಳಲ್ಲಿ ಹಿಂದಿರುಗುತ್ತಿದ್ದ ವಿದ್ಯಾರ್ಥಿಗಳ ತಂಡದ ಮೇಲೆ ಲಾರಿ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಕಾರ್ತಿಕ್ ರಸ್ತೆಗೆ ಎಸೆಯಲ್ಪಟ್ಟು ತೀವ್ರ ರಕ್ತಸ್ರಾವದಿಂದ […]

“ರಿಸೆಪ್ಷನಿಸ್ಟ್ ಕೆಲಸ ಹುಡುಕುತ್ತಿದ್ದೀರಾ”ಪುರುಷ ಅಭ್ಯರ್ಥಿಗಳಿಗೆ ಇಲ್ಲಿದೆ ಅವಕಾಶ

ಉಡುಪಿಯ ಶಾರದ ಇಂಟರ್ನ್ಯಾಷನಲ್ ಹೋಟೆಲಿಗೆ ರಿಸೆಪ್ಷನಿಸ್ಟ್ ಬೇಕಾಗಿದ್ದಾರೆ. ಪುರುಷರಿಗೆ ಅವಕಾಶ. ಆಸಕ್ತಿಯುಳ್ಳ ಅಭ್ಯರ್ಥಿಗಳು ಕೂಡಲೇ ಸಂಪರ್ಕಿಸಿ. M:8453391650

ಉಡುಪಿ: 35 ಆಳದ ಬಾವಿಯೊಳಗೆ ಇಳಿದಿದ್ದ ವ್ಯಕ್ತಿಯ ರಕ್ಷಣೆ

ಉಡುಪಿ: ಇಲ್ಲಿನ ಕೊರಂಗ್ರಪಾಡಿ ಎಂಬಲ್ಲಿ ಮನೆ ಸಮೀಪದ ಬಾವಿ ಸ್ವಚ್ಚತೆಗೆ ಇಳಿದ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದ ವ್ಯಕ್ತಿಯೊಬ್ಬರನ್ನು ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ರಕ್ಷಿಸಿದ್ದಾರೆ. ಕೊರಂಗ್ರಪಾಡಿಯ ಬಲ್ಲಾಳ್ ಕಂಪೌಂಡ್ ನಿವಾಸಿ ಶ್ರೀಶ ಬಲ್ಲಾಳ್‌ (60) ರಕ್ಷಿಸಲ್ಪಟ್ಟವರು. ಶ್ರೀಶ ಅವರು ಇಂದು ಬೆಳಗ್ಗೆ ಮನೆ ಸಮೀಪದ ಸುಮಾರು 35 ಅಡಿ ಆಳದ ಬಾವಿಗೆ ಸ್ವಚ್ಚತೆಗೆಂದು ಇಳಿದಿದ್ದರು. ಈ ವೇಳೆ ಬಾವಿಯಿಂದ ಮೇಲೆ ಬರುವಾಗ ಕಾಲುಜಾರಿ ಬಾವಿಯೊಳಗೆ ಬಿದ್ದಿದ್ದರು. ಮನೆ ಮಂದಿ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಉಡುಪಿ […]

ಐ.ಟಿ.ಐ ಪ್ರವೇಶಾತಿ: ಅರ್ಜಿ ಆಹ್ವಾನ

ಉಡುಪಿ: ಉಡುಪಿಯ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ (ಐ.ಟಿ.ಐ) ವಿವಿಧ ತಾಂತ್ರಿಕ ಕೋರ್ಸುಗಳ ಪ್ರವೇಶಾತಿಗಾಗಿ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಹಾಗೂ ಪಿ.ಯು.ಸಿ ಅನುತ್ತೀರ್ಣರಾದ ಅರ್ಹ ಅಭ್ಯರ್ಥಿಗಳಿಂದ ಇಲಾಖೆಯ ವೆಬ್‌ಸೈಟ್ www.cite.karnataka.gov.inನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮೇ 8 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಪ್ರಗತಿನಗರ, ಮಣಿಪಾಲ, ಉಡುಪಿ ಇಲ್ಲಿ ಖುದ್ದಾಗಿ ಅಥವಾ ದೂ.ಸಂಖ್ಯೆ: 9900329668, 8762798115, 9902001790, 7975141464, 8722453232 ಹಾಗೂ 9738439619 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ […]

ಉಡುಪಿ: ಆರೋಗ್ಯ ಇಲಾಖೆಗೆ ವಾಹನ ಹಸ್ತಾಂತರ

ಉಡುಪಿ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಇವರ ಮೂಲಕ ಎಮ್.ಆರ್.ಪಿ.ಎಲ್ ಮತ್ತು ಕರ್ನಾಟಕ ಬ್ಯಾಂಕ್ ವತಿಯಿಂದ ಪ್ರಸಕ್ತ ಸಾಲಿನ ಸಿ.ಎಸ್.ಆರ್ ಅನುದಾನದಡಿ ಏಪ್ರಿಲ್ 24 ರಂದು ಮಣಿಪಾಲದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮೂರು ವಾಹನಗಳನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಬ್ಯಾಂಕ್‌ನ ಎ.ಜಿ.ಎಮ್ ರಮೇಶ್ ವೈದ್ಯರನ್ನು ಕೃತಜ್ಞತಾ ಪೂರ್ವಕವಾಗಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ […]