ಉಡುಪಿ: ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ (UPMC)ಕಾಲೇಜಿನಲ್ಲಿ ವಿದ್ಯಾರ್ಥಿಗಳೇ ಐಪಿಎಲ್ ಮಾದರಿಯಲ್ಲಿ ಹರಾಜು ಪ್ರಕ್ರಿಯೆ ನಡೆಸಿ ಪ್ರತಿ ವರ್ಷದಂತೆ ಆಯೋಜಿಸಿಕೊಂಡು ಬರುತ್ತಿರುವ ಯುಪಿಎಂಸಿ ಟ್ರೋಫಿ 2026 ಯುಪಿಎಂಸಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಮತ್ತು ಥ್ರೋ ಬಾಲ್ ಪಂದ್ಯಾಟವನ್ನು ಅದಿತಿ ಬಿಲ್ಡರ್ಸ್ ಮಾಲಕರಾದ ಶ್ರೀ ರಂಜನ್ ಪೂಜಾರಿ ಉದ್ಘಾಟಿಸಿದರು.
ಅವರು ವಿದ್ಯಾರ್ಥಿಗಳು ಕಲಿಕೆಯ ಜೊತೆಯಲ್ಲಿ ಕ್ರೀಡೆಯನ್ನು ಹವ್ಯಾಸವಾಗಿ ಅಳವಡಿಸಿಕೊಂಡು ಆಸಕ್ತಿ ತೋರಬೇಕು, ಇದರಿಂದ ಜೀವನದಲ್ಲಿ ಯಶಸ್ಸು ದೊರಕುತ್ತದೆ ಎಂದರು.

ಮತ್ತೋರ್ವ ಅತಿಥಿಗಳಾದ ಕಾವೇರಿ ಟಿಂಬರ್ಸ್ ನ ಮಾಲಕರಾದ ಶ್ರೀ ಸೂರಜ್ ಪಟೇಲ್ ಹಾಗೂ ಶ್ರೀ ಸತೀಶ್ ಅಲೆವೂರು ಕ್ರೀಡಾ ಜರ್ಸಿ ಅನಾವರಣಗೊಳಿಸಿದರು. ಯುಪಿಎಂಸಿ ನಿರ್ದೇಶಕಿ ಪ್ರೊ. ಆಶಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು.
ಉದ್ಯೋಗ ಹಾಗೂ ಪ್ರವೇಶಾತಿಯ ನಿರ್ದೇಶಕರಾದ ಡಾ. ಪದ್ಮಲತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆಯೋಜನೆಯ ನೇತೃತ್ವ ವಹಿಸಿದ್ದ ವಿದ್ಯಾರ್ಥಿ ಮುಖಂಡರುಗಳಾದ ಹರಿಕಿಶನ್, ಮುಜಾಫ್ ಮಿರ್ಜಾ, ಶಿವಾನಿ ಕೋಟ್ಯಾನ್, ಕೃತಿಕಾ, ಹರಿಕಿಶನ್, ಸಾಹಿಲ್, ಆಯುಷ್, ರುಮಾನ, ಅಮೀನ್, ಶಾದಾಬ್ ಉಪಸ್ಥಿತರಿದ್ದರು.
ತೀರ್ಪುಗಾರರಾಗಿ ಶ್ರೀ ರಾಹೀಲ್ ಹಾಗೂ ಶ್ರೀ ಬಿಲಾಲ್ ಆಗಮಿಸಿದ್ದರು. ಶ್ರೀ ಸುಹಾನ್ ಕಾರ್ಯಕ್ರಮ ನಿರೂಪಿಸಿದರು.

















