ದೋಸೆ ಹಿಟ್ಟು ಮಾಡಿ ಫ್ರಿಡ್ಜ್‌ನಲ್ಲಿ ಕೆಲವು ದಿನ ಇಟ್ಟು ತಿನ್ನುವ ಅಭ್ಯಾಸ ನಿಮಗಿದ್ಯಾ? ಅದೆಷ್ಟು ಡೇಂಜರ್ ನೋಡಿ

ಬೆಳಗಿನ ಉಪಹಾರದಲ್ಲಿ ದೋಸೆ ಬಹುತೇಕರ ಫೇವರಿಟ್ ಹಾಗೂ ಸುಲಭದ ತಿಂಡಿ. ಆದರೆ ಕೆಲಸದ ಒತ್ತಡದಿಂದ ಹಲವರು ವಾರಕ್ಕೆ ಸಾಕಾಗುವಷ್ಟು ಹಿಟ್ಟನ್ನು ಒಂದೇ ಬಾರಿ ತಯಾರಿಸಿ ಫ್ರಿಡ್ಜ್‌ನಲ್ಲಿ ಇಟ್ಟು ಬಳಸುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಇದೇ ಅಭ್ಯಾಸ ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಎಷ್ಟು ದಿನ ಸುರಕ್ಷಿತ?

ಸಾಮಾನ್ಯವಾಗಿ ದೋಸೆ ಹಿಟ್ಟನ್ನು ಫ್ರಿಡ್ಜ್‌ನಲ್ಲಿ ಇಟ್ಟರೆ 3 ರಿಂದ 4 ದಿನಗಳವರೆಗೆ ಬಳಸಬಹುದು. ಆದರೆ ಅದಕ್ಕಿಂತ ಹೆಚ್ಚು ದಿನ ಇಟ್ಟರೆ ಹಿಟ್ಟಿನಲ್ಲಿ ಬ್ಯಾಕ್ಟೀರಿಯಾಗಳ ಪ್ರಮಾಣ ಹೆಚ್ಚಾಗಿ ಆಹಾರದ ಗುಣಮಟ್ಟ ಹಾಳಾಗುತ್ತದೆ.

ಹುದುಗುವಿಕೆ ಮಿತಿ ಮೀರಿದರೆ ಅಪಾಯ

ಹಿಟ್ಟು ಹುದುಗುವಿಕೆ (Fermentation) ಪ್ರಕ್ರಿಯೆಯು ನೈಸರ್ಗಿಕವಾಗಿದ್ದರೂ, ಅದು ಮಿತಿ ಮೀರಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಹಿಟ್ಟು 5 ದಿನ ಮೀರಿದ ನಂತರ ಅದರಲ್ಲಿನ ಲ್ಯಾಕ್ಟಿಕ್ ಆಸಿಡ್ ಪ್ರಮಾಣ ಹೆಚ್ಚಾಗಿ ಅದು ಅತಿಯಾದ ಹುಳಿಯಾಗುತ್ತದೆ. ಹಿಟ್ಟಿನ ಮೇಲೆ ಕಪ್ಪು ಅಥವಾ ಬೂದು ಪದರ ಕಾಣಿಸಿಕೊಂಡರೆ ಅಥವಾ ಕೆಟ್ಟ ವಾಸನೆ ಬಂದರೆ ಅದನ್ನು ಬಳಸಬಾರದು.

ಯಾವ ಸಮಸ್ಯೆಗಳು ಬರುತ್ತವೆ?

ಹಳೆಯ ಹಿಟ್ಟಿನಿಂದ ಮಾಡಿದ ದೋಸೆ ತಿಂದರೆ

  • ವಾಂತಿ, ಭೇದಿ
  • ಹೊಟ್ಟೆ ನೋವು
  • ಗ್ಯಾಸ್ಟ್ರಿಕ್ ಸಮಸ್ಯೆ
  • ಮಕ್ಕಳಲ್ಲಿ, ಹಿರಿಯರಲ್ಲಿ ಡಿಹೈಡ್ರೇಶನ್
  • ಫುಡ್ ಪಾಯಿಸನಿಂಗ್ ಅಪಾಯವೂ ಹೆಚ್ಚಿರುತ್ತದೆ.

ಫಂಗಸ್ ಅಪಾಯವೂ ಇದೆ

ಫ್ರಿಡ್ಜ್‌ನಲ್ಲಿ ಇಟ್ಟರೂ ಗಾಳಿಯ ಸಂಪರ್ಕದಿಂದ ಫಂಗಸ್ ಬೆಳೆಯಬಹುದು. ಕಣ್ಣಿಗೆ ಕಾಣದ ಈ ಸೂಕ್ಷ್ಮಜೀವಿಗಳು ದೇಹಕ್ಕೆ ಹಾನಿ ಉಂಟುಮಾಡಬಹುದು.

ಸರಿಯಾದ ಬಳಕೆ ಹೇಗೆ?

  • ಹಿಟ್ಟು 8–12 ಗಂಟೆಗಳ ಹುದುಗುವಿಕೆ ಸಾಕು
  • 3 ದಿನ ಒಳಗೆ ಬಳಸುವುದು ಉತ್ತಮ
  • ಸ್ಟೀಲ್ ಅಥವಾ ಗಾಜಿನ ಪಾತ್ರೆಯಲ್ಲಿ ಇಡಿ
  • ಪ್ರತಿ ಬಾರಿ ಹೊಸ ಚಮಚ ಬಳಸಿ

ತಜ್ಞರ ಸಲಹೆ

ವಾರಗಟ್ಟಲೆ ಹಿಟ್ಟು ಇಡುವ ಬದಲು 2 ದಿನಕ್ಕೊಮ್ಮೆ ತಾಜಾ ಹಿಟ್ಟು ತಯಾರಿಸಿಕೊಳ್ಳುವುದು ಉತ್ತಮ. ಸ್ವಲ್ಪ ಹುಳಿಯಾದ ಹಿಟ್ಟಿಗೆ ಸೋಡಾ ಹಾಕಿ ಬಳಸುವ ಅಭ್ಯಾಸವನ್ನು ತಪ್ಪಿಸಬೇಕು. ಒಟ್ಟಿನಲ್ಲಿ ಹಳೆಯ ಹಿಟ್ಟನ್ನು ಬಳಸಿ ಆರೋಗ್ಯ ಹಾಳುಮಾಡಿಕೊಳ್ಳುವುದಕ್ಕಿಂತ, ತಾಜಾ ಆಹಾರ ಸೇವನೆ ಉತ್ತಮ. ಪ್ರಿಡ್ಜ್ ನಲ್ಲಿ ಇಟ್ಟು ತಿನ್ನುವ ಆಹಾರ ಯಾವತ್ತಿಗೂ ಆರೋಗ್ಯಕ್ಕೆ ಒಳ್ಳೆಯದಲ್ಲ.