RCB vs DC ಪಂದ್ಯ: ಇಂದು ಮೊದಲ ಬಾಲ್ ನಲ್ಲೇ ದಾಖಲೆ ಬರೆಯಲಿದೆ ಆರ್ ಸಿ ಬಿ, ಆರ್ ಸಿ ಬಿ ಗೆ ನಿಜಕ್ಕೂ ಇವತ್ತು ಸ್ಮರಣೀಯ ದಿನ! ಏನ್ ಸ್ಪೆಷಲ್?

ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಕ್ಕೆ ಇಂದು ನಿಜಕ್ಕೂ ಸ್ಪೆಷಲ್ ಡೇ ಮತ್ತು ಸ್ಮರಣೀಯ ದಿನ. ಹೌದು ಐಪಿಎಲ್ ಇತಿಹಾಸದಲ್ಲಿ ತನ್ನ ತವರು ನೆಲವಾದ ಚಿನ್ನಸ್ವಾಮೀ ಸ್ಟೇಡಿಯಂನಲ್ಲಿ 100 ಪಂದ್ಯಗಳನ್ನು ಆಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಆರ್ ಸಿ ಬಿ ಇವತ್ತು ಪಾತ್ರವಾಗಲಿದೆ. Indian Premier League ಆರಂಭವಾಗಿ 19 ವರ್ಷಗಳು ಪೂರ್ಣಗೊಳ್ಳುತ್ತಿರುವ ಈ ದಿನವೇ ಈ ಸಾಧನೆ ಮಾಡಿರುವುದು ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ಮೂಡಿಸಿದೆ. ಇದೇ ಸಂದರ್ಭದಲ್ಲಿ ಇಂದು ನಡೆಯಲಿರುವ ಪಂದ್ಯದಲ್ಲಿ Delhi Capitals ವಿರುದ್ಧ […]
ಮಾರುಕಟ್ಟೆ ಆಳುತ್ತಿದೆ ಕೆಮಿಕಲ್ ಮಿಶ್ರಿತ ಮಾವಿನಹಣ್ಣು: ಕೃತಕ ಬಣ್ಣದ ಮಾವಿನ ಮೇಲೆ ಕೇಂದ್ರ ಆಹಾರ ಇಲಾಖೆ ಹದ್ದಿನ ಕಣ್ಣು

ನವದೆಹಲಿ: Food Safety and Standards Authority of India (FSSAI) ದೇಶದ ಎಲ್ಲಾ ರಾಜ್ಯಗಳಿಗೆ ತುರ್ತು ಎಚ್ಚರಿಕೆ ನೀಡಿದ್ದು, ಹಣ್ಣುಗಳನ್ನು ಮಾಗಿಸಲು ನಿಷೇಧಿತ ಹಾಗೂ ಅಪಾಯಕಾರಿ ರಾಸಾಯನಿಕಗಳ ಬಳಕೆ ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ರಾಜ್ಯಗಳ ಆಹಾರ ಆಯುಕ್ತರಿಗೆ ಕಳುಹಿಸಿರುವ ಪತ್ರದಲ್ಲಿ, ಹಣ್ಣು ಮಾರುಕಟ್ಟೆಗಳು ಮತ್ತು ಮಾಗಿಸುವ ಗೋದಾಮುಗಳ ಮೇಲೆ ಕಡ್ಡಾಯವಾಗಿ ಕಟ್ಟುನಿಟ್ಟಿನ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ. ವಿಶೇಷವಾಗಿ ಕ್ಯಾಲ್ಸಿಯಮ್ ಕಾರ್ಬೈಡ್ ಬಳಕೆ ಪ್ರಕರಣಗಳು ಹೆಚ್ಚುತ್ತಿರುವುದು ಗಮನಕ್ಕೆ ಬಂದಿದ್ದು, ಮಾವು, ಬಾಳೆ, ಪಪ್ಪಾಯ ಹಣ್ಣುಗಳನ್ನು ಬೇಗ […]
ಮಣಿಪಾಲ MSDC ಯಲ್ಲಿ ಕಾಸ್ಮೆಟಾಲಜಿ ಪದವಿಗೆ ಪ್ರವೇಶಾತಿ ಶುರು: ಒಳ್ಳೆಯ ಉದ್ಯೋಗ ಪಡೆಯಲು ಇದು ಬೆಸ್ಟ್ ಡಿಗ್ರಿ ಕೋರ್ಸ್

ಉಡುಪಿ: ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ಮತ್ತು ಓರೇನ್ ಇಂಟರ್‌ನ್ಯಾಷನಲ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಾಸ್ಮೆಟಾಲಜಿ ಕ್ಷೇತ್ರದಲ್ಲಿ ಬ್ಯಾಚುಲರ್ ಪದವಿ ಕೋರ್ಸ್‌ಗಳಿಗೆ 2026–27ನೇ ಸಾಲಿನ ಪ್ರವೇಶಾತಿ ಆರಂಭಗೊಂಡಿವೆ. ಸೌಂದರ್ಯ ವೃತ್ತಿಪರರ ಮುಂದಿನ ಪೀಳಿಗೆಯನ್ನು ಸಬಲಗೊಳಿಸುವ ಉದ್ದೇಶದಿಂದ ರೂಪಿಸಲಾದ ಈ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ತರಬೇತಿ ನೀಡಲಾಗುತ್ತದೆ. ಯುಜಿಸಿ ಮಾನ್ಯತೆ ಪಡೆದ ಪದವಿಯಾಗಿರುವುದರಿಂದ ಸರ್ಕಾರ ಹಾಗೂ ಖಾಸಗಿ ವಲಯಗಳಲ್ಲಿ ಉದ್ಯೋಗಾವಕಾಶಗಳು ಲಭ್ಯವಾಗಲಿವೆ. ಈ ಕೋರ್ಸ್‌ನಲ್ಲಿ ಮಾಸ್ಟರ್ ಕಾಸ್ಮೆಟಾಲಜಿ, ಮೇಕಪ್, ಕೂದಲು ಆರೈಕೆ, ನೇಲ್ ಆರ್ಟ್ ಸೇರಿದಂತೆ ಹಲವು […]
ಅಕ್ಷಯ ತೃತೀಯ ದಿನಕ್ಕೆ ಏಕಿಷ್ಟು ಪ್ರಾಮುಖ್ಯತೆ

ಅಕ್ಷಯ ತೃತೀಯ ಅಂದರೆ ಹೆಸರೇ ಹೇಳುವಂತೆ ಕ್ಷಯ ಇಲ್ಲದ ದಿನ. ಸಮುದ್ರ ಮಂಥನದ ಕಾಲದಿಂದಲೂ ಅಕ್ಷಯ ತೃತೀಯದ ವಿವರಣೆ ಇದೆ. ಅಷ್ಟೇ ಅಲ್ಲ, ಮಹಾಭಾರತದಲ್ಲೂ ಈ ಬಗ್ಗೆ ಪ್ರಸ್ತಾವ ಇದೆ. ಆದರೆ ನಮ್ಮೆಲ್ಲರಿಗೂ ಮೊದಲು ಗೊತ್ತಾಗಬೇಕಿದ್ದು ಏನೆಂದರೆ, ಈ ದಿನ ದಾನಕ್ಕೆ ಮಹತ್ವ ಹೆಚ್ಚು. ಆದ್ದರಿಂದ ನಿಮ್ಮಿಂದ ಅದೆಷ್ಟು ಸಣ್ಣ ಪ್ರಮಾಣದ ಚಿನ್ನವನ್ನಾದರೂ ಖರೀದಿಸಿ, ದಾನ ಮಾಡಿದರೆ ಅದರ ಫಲ ಅಧಿಕವಾಗುತ್ತದೆ. ನಿಮಗೆ ಪರಿಚಿತರು ಇದ್ದು ಅಥವಾ ಮದುವೆಗೋ ಅಥವಾ ಬೇರೆ ಯಾವುದೋ ಉದ್ದೇಶಕ್ಕೆ ಸ್ವಲ್ಪ ಪ್ರಮಾಣವಾದರೂ […]