ಉಡುಪಿ: ನೋವೇಲ್ಟಿ ಜ್ಯುವೆಲ್ಲರಿಯಲ್ಲಿ ಅಕ್ಷಯಾ ತೃತೀಯಾಕ್ಕೆ ವಿಶೇಷ ಆಫರ್

ಉಡುಪಿ ಜಿಲ್ಲೆಯ ಪ್ರಪ್ರಥಮ ಜುವೆಲ್ಲರಿ ಎಂಬ ಹೆಮ್ಮೆಯೊಂದಿಗೆ 9ನೇ ದಶಕದತ್ತ ಕಾಲಿಡುತ್ತಿರುವ “ನೋವೆಲ್ಟಿ”ಯ ಸಹ ಸಂಸ್ಥೆಯಾಗಿರುವ ಉಡುಪಿಯ ರಥ ಬೀದಿಯಲ್ಲಿರುವ ನೋವೇಲ್ಟಿ ಜುವೆಲ್ಲರಿಯು ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ಮೊಟ್ಟ ಮೊದಲ ಬಾರಿಗೆ ನಮ್ಮಲ್ಲಿ ಖರೀದಿಸಿದ ಚಿನ್ನಾಭರಣಗಳಿಗೆ 1 ಗ್ರಾಂ.ಗೆ 1000 ರೂ. ಡಿಸ್ಕೌಂಟ್ ಇರುತ್ತದೆ ಹಾಗು ಬೆಳ್ಳಿ ಆಭರಣ ೧ ಕೆಜಿ ಗೆ 10,000ದಂತೆ ಸ್ಪೆಷಲ್ ಡಿಸ್ಕೌಂಟ್ .ಇದು ದಿನಾಂಕ 19-04-2026 ರಿಂದ 20-4-2026 ರವರೆಗೆ ಈ ಕೊಡುಗೆಗಳು ಇರಲಿದೆ.ಇದೇ ಬರುವ “ಅಕ್ಷಯ ತೃತೀಯಾ”ಕ್ಕೆ ತಮ್ಮೆಲ್ಲ ಗ್ರಾಹಕರನ್ನು […]
ಕಾರು–ಬಸ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತಕ್ಕೆ ಧಗಧಗನೆ ಹೊತ್ತಿ ಉರಿದ ಬೆಂಕಿ

ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರು ಮತ್ತು ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾದ ಬಳಿಕ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಈ ದುರಂತದಲ್ಲಿ ಕಾರಿನಲ್ಲಿದ್ದ ಆರು ಮಂದಿ ಸಜೀವ ದಹನಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕಾರು ಯಾದಗಿರಿಯಿಂದ ರಾಯಚೂರು ಕಡೆಗೆ ತೆರಳುತ್ತಿದ್ದರೆ, ಖಾಸಗಿ ಬಸ್ ಬೆಂಗಳೂರಿನಿಂದ ಕಲಬುರಗಿಗೆ ಬರುತ್ತಿತ್ತು. ಈ ವೇಳೆ ಎರಡು ವಾಹನಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಘಟನೆ ನಡೆದ ಸ್ಥಳಕ್ಕೆ […]
ಚಾರಣಕ್ಕೆ ಹೊಸ ಕಟ್ಟುನಿಟ್ಟಿನ ನಿಯಮ ಜಾರಿ: ಅರಣ್ಯ ಸಚಿವರು ರೂಲ್ಸ್ ಕುರಿತು ಮಾಹಿತಿ ನೀಡಿದ್ದಾರೆ

ರಾಜ್ಯದಲ್ಲಿ ಹೆಚ್ಚುತ್ತಿರುವ ಚಾರಣ ಅಪಘಾತಗಳನ್ನು ತಡೆಯಲು ಕರ್ನಾಟಕ ಸರ್ಕಾರ ಹೊಸ ಕಟ್ಟುನಿಟ್ಟಿನ ಪ್ರಮಾಣಿತ ಕಾರ್ಯಾಚರಣೆ ವಿಧಾನ (SOP) ಜಾರಿಗೆ ತಂದಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಬೆಂಗಳೂರಿನಲ್ಲಿ SOP ಬಿಡುಗಡೆ ಮಾಡಿ, ಸುರಕ್ಷಿತ ಚಾರಣಕ್ಕಾಗಿ ಹಲವು ಹೊಸ ನಿಯಮಗಳನ್ನು ಘೋಷಿಸಿದ್ದಾರೆ. ಹೊಸ ನಿಯಮಗಳ ಪ್ರಮುಖ ಅಂಶಗಳು ಸುರಕ್ಷತಾ ಕ್ರಮಗಳು ಸರ್ಕಾರದ ಉದ್ದೇಶ ಕೊಡಗು ಮತ್ತು ಚಿಕ್ಕಮಗಳೂರು ಸೇರಿದಂತೆ ವಿವಿಧ ಚಾರಣ ಪ್ರದೇಶಗಳಲ್ಲಿ ಇತ್ತೀಚೆಗೆ ನಡೆದ ನಾಪತ್ತೆ ಪ್ರಕರಣಗಳು ಮತ್ತು ಅಪಘಾತಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು […]
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಒಂದು ದಿನದ ‘ಸುಸ್ಥಿರ ಕೃಷಿಗಾಗಿ ಸಮಗ್ರ ಕೃಷಿ ಪದ್ಧತಿ’

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯು ಮೂಡುಬಿದಿರೆಯ ಕೃಷಿ ವಿಚಾರ ವಿನಿಮಯ ಕೇಂದ್ರ, ರೈತಜನ್ಯ ಫಾರ್ಮರ್ ಪ್ರೊಡ್ಯೂಸರ್ ಕಂಪನಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ತೋಟಗಾರಿಕೆ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು ಇವುಗಳ ಸಹಯೋಗದೊಂದಿಗೆ ಒಂದು ದಿನದ ರೈತ ವಿಜ್ಞಾನಿಗಳ ವಿಚಾರ ಸಂಕಿರಣ ‘ಸುಸ್ಥಿರ ಕೃಷಿಗಾಗಿ ಸಮಗ್ರ ಕೃಷಿ ಪದ್ಧತಿ’ ಎಪ್ರಿಲ್ 18ರಂದು ಮಿಜಾರಿನ ಇಂಜಿನಿಯರಿAಗ್ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದೆ.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾರತೀಯ […]
“ಸಾವನ್ನು ಮಲಗಿಸಬೇಡಿ – ಜೀವದಾನ ಮಾಡಿ – ಅಂಗ ದಾನಿಯಾಗಿರಿ”

ಅಂಗಾಂಗ ದಾನ – ದುರಂತವನ್ನು ವಿಜಯವನ್ನಾಗಿ ಪರಿವರ್ತಿಸುವುದು: ಆರ್.ಟಿ.ಎನ್ ಪಿ.ಎಚ್.ಎಫ್ ಡಾ. ರೋಹನ್ ಎಸ್. ಮೋನಿಸ್ ಅವರ ಚಿಂತನಶೀಲ ವಿಚಾರಗಳು;ಮಂಗಳೂರಿನಲ್ಲಿ ನಡೆದ ಭಾರತದ ಅತಿದೊಡ್ಡ ಫಿಸಿಯೋಥೆರಪಿ ಸಮ್ಮೇಳನದಲ್ಲಿ ಆರ್.ಟಿ.ಎನ್ ಪಿ.ಎಚ್.ಎಫ್ ಡಾ. ರೋಹನ್ ಎಸ್. ಮೋನಿಸ್ ಅವರು ‘ಅಂಗಾಂಗ ದಾನ – ದುರಂತವನ್ನು ವಿಜಯವನ್ನಾಗಿ ಪರಿವರ್ತಿಸುವುದು’ ಎಂಬ ವಿಷಯದ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡರು.ಮಂಗಳೂರು ಫಿಸಿಯೋಕಾನ್ – 2026: ಏಪ್ರಿಲ್ 11 ಮತ್ತು 12, 2026 ರಂದು ಮಂಗಳೂರಿನ ಟಿ.ಎಂ.ಎ ಪೈ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅಂತರಾಷ್ಟ್ರೀಯ […]