ಉಡುಪಿ: InTouch ಮಾರ್ಕೆಟಿಂಗ್ ಸೊಲ್ಯೂಷನ್ ನಲ್ಲಿ ಉದ್ಯೋಗಾವಕಾಶ

ಉಡುಪಿ: ಉಡುಪಿಯಲ್ಲಿರುವ InTouch ಮಾರ್ಕೆಟಿಂಗ್ ಸೊಲ್ಯೂಷನ್ ನಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳು: * ಸೋಶಿಯಲ್ ಮೀಡಿಯಾ ಮ್ಯಾನೇಜರ್ * ಗ್ರಾಫಿಕ್ ಡಿಸೈನರ್ * ವಿಡಿಯೋ ಎಡಿಟರ್* ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಸಕ್ತರು ತಮ್ಮ CV’ಯನ್ನು ಕಳುಹಿಸಬಹುದು. ಮೊ: 8105732895

ಉಡುಪಿ: ಉದ್ಯಮಿ ಇನ್ನಾ, ಉದಯ ಶೆಟ್ಟಿ ನಿಧನ

ಉಡುಪಿ: ಬಿಜೆಪಿ ಮುಖಂಡ, ಉದ್ಯಮಿ ಇನ್ನಾ ಉದಯ ಶೆಟ್ಟಿ(50) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಸ್ವಗೃಹದಲ್ಲಿ ಇಂದು ನಿಧನರಾದರು. ಅವರು ಪತ್ನಿ ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ, ಪುತ್ರಿ ಹಾಗು ಅಪಾರ ಬಂಧು ಬಳಗವನ್ನು ಆಗಲಿದ್ದಾರೆ. ಲಯನ್ಸ್ ಕ್ಲಬ್ ಬೆಲ್ಮಣ್ ಇದರ ಮಾಜಿ ಅಧ್ಯಕ್ಷರಾಗಿದ್ದ ಉದಯ ಶೆಟ್ಟಿ ಅವರು ಪಡುಬಿದ್ರೆಯಲ್ಲಿ ಟಯರ್ ರಿಸೋಲ್ ಅಂಗಡಿಯನ್ನು ಹೊಂದಿದ್ದರು.

ಮಂಗಳೂರು: ಬಾಲಕಿ ನಾಪತ್ತೆ.

ಮಂಗಳೂರು: ಕೊಣಜೆ ಪೊಲೀಸ್ ಠಾಣಾ ವ್ಯಾಪ್ತಿಯ ಪಜೀರು ಅಡ್ಕದ ನಿವಾಸಿಯಾದ 16 ವರ್ಷದ ಬಾಲಕಿಯೊಬ್ಬಳು ಏಪ್ರಿಲ್ 12 ರಿಂದ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ನಾಪತ್ತೆಯಾದ ಬಾಲಕಿಯನ್ನು ಜಗದೀಶ್ ಪೂಜಾರಿ ಮತ್ತು ಗುಲಾಬಿ ದಂಪತಿಯ ಪುತ್ರಿ ಚೈತನ್ಯ ಎಂದು ಗುರುತಿಸಲಾಗಿದೆ. ಹರೇಕಳದ ರಾಮಕೃಷ್ಣ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಈಕೆ, ಇತ್ತೀಚೆಗಷ್ಟೇ ಪರೀಕ್ಷೆ ಮುಗಿಸಿ ಮನೆಯಲ್ಲಿದ್ದಳು. ಬಾಲಕಿಯ ತಾಯಿ ಗುಲಾಬಿ ಅವರು ನೀಡಿದ ದೂರಿನ ಪ್ರಕಾರ, ಏಪ್ರಿಲ್ 12 ರಂದು ಬೆಳಿಗ್ಗೆ ಸುಮಾರು 7:30 ಕ್ಕೆ ಸ್ನೇಹಿತರೊಂದಿಗೆ ಪೊಳಲಿ […]

ಉಡುಪಿ ಜ್ಞಾನಸುಧಾ: ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಉಡುಪಿ: ಪ್ರಥಮ ಪಿ.ಯು.ಸಿಯಲ್ಲಿ 100ಶೇಕಡಾ ಫಲಿತಾಂಶವನ್ನು ನೀಡಿಕೊಂಡು ದ್ವಿತೀಯ ಪಿ.ಯು.ಸಿಯಲ್ಲಿ ಶೇಕಡಾ 100 ಫಲಿತಾಂಶ ಬಂದಿರುವುದು ಜ್ಞಾನಸುಧಾದ ಹಿರಿಮೆ. ಅಂಕಗಳ ಜೊತೆಗೆ, ನಮಗೆ ಸರ್ವಸ್ವವನ್ನು ನೀಡುವ ಸಮಾಜ, ತಂದೆ ತಾಯಿ, ದೇಶವನ್ನು ಹೇಗೆ ಗೌರವಿಬೇಕು ಎಂಬುದನ್ನು ತಿಳಿದಿರಬೇಕು. ವಿದ್ಯಾರ್ಥಿಗಳನ್ನು ಈ ದೇಶದ ಆಸ್ತಿಯನ್ನಾಗಿ ಮಾಡುವ ನನ್ನ ಸಂಕಲ್ಪ ಶುದ್ಧವಾಗಿತ್ತು ಆದ್ದರಿಂದ ಅದು ಸಿದ್ಧಿಯಾಗಿದೆ ಎಂದು ಭಾವಿಸುತ್ತೇನೆ. ತಂದೆ ತಾಯಿಯರ ಪರಿಶ್ರಮದ ಬದುಕು ನನ್ನ ಸ್ವಯಂ ನಿಯಂತ್ರಣಕ್ಕೆ ಕಾರಣವಾಯಿತು ಎಂದು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷರಾದ ಡಾ. […]

ಆಳ್ವಾಸ್ ಸಿಬಿಎಸ್‌ಇ ಫಲಿತಾಂಶ 2026: ಆಳ್ವಾಸ್‌ನ 46 ವಿದ್ಯಾರ್ಥಿಗಳು 95% ಕ್ಕೂ ಹೆಚ್ಚು, 116 ವಿದ್ಯಾರ್ಥಿಗಳು 90% ಕ್ಕಿಂತ ಅಧಿಕ ಅoಕದ ಸಾಧನೆ

ಮೂಡುಬಿದಿರೆ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಈ ಬಾರಿಯ ಹತ್ತನೆ ತರಗತಿಯ ಫಲಿತಾಂಶ ಪ್ರಕಟಿಸಿದ್ದು ಸತತ ಆರನೇ ವರ್ಷ ಆಳ್ವಾಸ್ ಶಾಲೆಯು 100% ಫಲಿತಾಂಶ ದಾಖಲಿಸಿದೆ. ಆಳ್ವಾಸ್ ಶಾಲೆಯ 46 ವಿದ್ಯಾರ್ಥಿಗಳು 95%ಕ್ಕಿಂತ ಹೆಚ್ಚು ಅಂಕ ಪಡೆಯುವ ಮೂಲಕ ಶ್ರೇಷ್ಠ ಸಾಧನೆ ಮೆರೆದಿದ್ದಾರೆ. ಕರ್ನಾಟಕದಒಂದು ಶಾಲೆಯಿಂದ 95 ಶೇಕಡಾಕ್ಕಿಂತ ಹೆಚ್ಚು ಅಂಕ ಪಡೆದವರ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಆಳ್ವಾಸ್ ಪ್ರಥಮ ಸ್ಥಾನ ಪಡೆದಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಮಾತಾಡಿದ […]