ರಾಜ್ಯದಲ್ಲಿ ಹೆಚ್ಚುತ್ತಿರುವ ಚಾರಣ ಅಪಘಾತಗಳನ್ನು ತಡೆಯಲು ಕರ್ನಾಟಕ ಸರ್ಕಾರ ಹೊಸ ಕಟ್ಟುನಿಟ್ಟಿನ ಪ್ರಮಾಣಿತ ಕಾರ್ಯಾಚರಣೆ ವಿಧಾನ (SOP) ಜಾರಿಗೆ ತಂದಿದೆ.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಬೆಂಗಳೂರಿನಲ್ಲಿ SOP ಬಿಡುಗಡೆ ಮಾಡಿ, ಸುರಕ್ಷಿತ ಚಾರಣಕ್ಕಾಗಿ ಹಲವು ಹೊಸ ನಿಯಮಗಳನ್ನು ಘೋಷಿಸಿದ್ದಾರೆ.
ಹೊಸ ನಿಯಮಗಳ ಪ್ರಮುಖ ಅಂಶಗಳು
- ಚಾರಣಕ್ಕೆ ಹೋಗಲು ಆನ್ಲೈನ್ ಬುಕ್ಕಿಂಗ್ ಕಡ್ಡಾಯ
- ಪ್ರತಿ 10 ಚಾರಣಿಗರಿಗೆ ಒಬ್ಬ ಗೈಡ್ ಕಡ್ಡಾಯ
- ಗೈಡ್ ಇಲ್ಲದೆ ಚಾರಣಕ್ಕೆ ಅವಕಾಶ ಇಲ್ಲ
- ಮೊಬೈಲ್ನಲ್ಲಿ ಟ್ರ್ಯಾಕಿಂಗ್ ಆಪ್ ಅಳವಡಿಕೆ ಕಡ್ಡಾಯ
- ಗೈಡ್ಗಳಿಗೆ GPS ಹೊಂದಿರುವ ವಾಕಿಟಾಕಿ ಸೌಲಭ್ಯ
ಸುರಕ್ಷತಾ ಕ್ರಮಗಳು
- ಪ್ರತಿ ಚಾರಣ ಸ್ಥಳದ ಕ್ಯಾರಿಂಗ್ ಕ್ಯಾಪಾಸಿಟಿ ನಿಯಂತ್ರಣ
- ಒಂದೇ ಬಾರಿ ಗರಿಷ್ಠ 150 ಜನರಿಗೆ ಮಾತ್ರ ಅವಕಾಶ
- ಒಂದು ತಂಡ ಹಿಂದಿರುಗಿದ ನಂತರವೇ ಮುಂದಿನ ತಂಡಕ್ಕೆ ಅವಕಾಶ
- ಟಾರ್ಚ್, ಹೆಡ್ಲ್ಯಾಂಪ್ ಸೇರಿದಂತೆ ಸುರಕ್ಷತಾ ಉಪಕರಣಗಳು ಕಡ್ಡಾಯ
ಸರ್ಕಾರದ ಉದ್ದೇಶ
ಕೊಡಗು ಮತ್ತು ಚಿಕ್ಕಮಗಳೂರು ಸೇರಿದಂತೆ ವಿವಿಧ ಚಾರಣ ಪ್ರದೇಶಗಳಲ್ಲಿ ಇತ್ತೀಚೆಗೆ ನಡೆದ ನಾಪತ್ತೆ ಪ್ರಕರಣಗಳು ಮತ್ತು ಅಪಘಾತಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಇನ್ನು ಮುಂದೆ ರಾಜ್ಯದ 44 ಚಾರಣ ಸ್ಥಳಗಳಲ್ಲಿ ನಿಯಮ ಉಲ್ಲಂಘನೆಗೆ ಅವಕಾಶ ಇಲ್ಲ. ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ಇಟ್ಟು ಸರ್ಕಾರ ಹೊಸ ವ್ಯವಸ್ಥೆ ಜಾರಿಗೆ ತಂದಿದೆ.

















