ಮಂಗಳೂರು ವಿಶ್ವವಿದ್ಯಾನಿಲಯ ಕಬಡ್ಡಿ: ಆಳ್ವಾಸ್ ಪುರುಷ, ಮಹಿಳಾ ತಂಡಗಳಿಗೆ ಚಾಂಪಿಯನ್ ಪಟ್ಟ ಮೂಡುಬಿದಿರೆ:

ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಕಬಡ್ಡಿ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜಿನ ಪುರುಷರ ಹಾಗೂ ಮಹಿಳೆಯರ ತಂಡ ಕ್ರಮವಾಗಿ 10 ಹಾಗೂ 17 ಬಾರಿ ಚಾಂಪಿಯನ್ಸ್ ಪಟ್ಟ ಪಡೆದುಕೊಂಡಿತು.ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಪುರುಷರ ಪಂದ್ಯಾಟದಲ್ಲಿ ಉಜಿರೆಯ ಎಸ್.ಡಿ.ಎಂ ಕಾಲೇಜಿನ ತಂಡವನ್ನು ಸೋಲಿಸಿ 10ನೇ ಬಾರಿ ರತ್ನವರ್ಮ ಹೆಗ್ಗಡೆ ರೋಲಿಂಗ್ ಟ್ರೋಪಿಯನ್ನು ತನ್ನದಾಗಿಸಿಕೊಂಡಿತು. ಆಳ್ವಾಸ್ ತಂಡದ ಧನುಷ್ ಉತ್ತಮ ಹಿಡಿತಗಾರ ಹಾಗೂ ಸಾಯಿ ಪ್ರಸಾದ ಉತ್ತಮ ದಾಳಿಗಾರ ವೈಯಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡರುಉಡುಪಿಯ […]

ಶ್ರೀ ಶಂಕರ ಜಯಂತಿ ಪ್ರಯುಕ್ತ ಲೋಕಶಂಕರ ರೂಪಕ ಪ್ರಸ್ತುತಿ

ಶ್ರೀ ಎಲ್ಲೂರು ಲಕ್ಷ್ಮೀನಾರಾಯಣರಾವ್ ಜ್ಯೋತಿಷ್ಕ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಹಾಗೂ ಶ್ರೀ ಸ್ಥಾನಿಕ ಬ್ರಾಹ್ಮಣ ಸಂಘ ಉಡುಪಿ ಹಾಗೂ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಶ್ರೀ ಶಾಂಕರ ತತ್ವ ಪ್ರಸಾರ ಸಮಿತಿ ಇವರ ಜಂಟಿ ಪ್ರಾಯೋಜಕತ್ವದಲ್ಲಿ ಉಡುಪಿ ಕುಂಜಿಬೆಟ್ಟಿನ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ತಾ 21-04-2006 ಮಂಗಳವಾರ ಸಂಜೆ 6:30 ರಿಂದ ಶ್ರೀ ಶಂಕರಾಚಾರ್ಯ ಜೀವನ ಚರಿತ್ರೆ ಆಧಾರಿತ ರೂಪಕ/ ನಾಟಕ ಪ್ರದರ್ಶನ ನಡೆಯಲಿದೆ. ಶ್ರೀ ಗಣೇಶ್ ಎಲ್ಲೂರು ಇವರ ನಿರ್ದೇಶನದಲ್ಲಿ ಹಾಗೂ […]

ದ್ವಿತೀಯ ಪಿ.ಯು.ಸಿ ಪರೀಕ್ಷೆ -2: ನೋಂದಣಿಗೆ ಅವಕಾಶ

ಉಡುಪಿ: 2026 ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆ-2 ಕ್ಕೆ ನೋಂದಣಿಯನ್ನು ಈಗಾಗಲೇ ಪ್ರಾರಂಭಿಸಲಾಗಿದ್ದು, ಏಪ್ರಿಲ್ 17 ರ ವರೆಗೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. 2026 ರಲ್ಲಿ ರೆಗ್ಯೂಲರ್ ವಿದ್ಯಾರ್ಥಿಗಳಾಗಿ ನೋಂದಾಯಿಸಿಕೊoಡು ಮತ್ತು ಮೊದಲನೇ ಪರೀಕ್ಷೆಯಲ್ಲಿ ಫಲಿತಾಂಶ ಪೂರ್ಣಗೊಳಿಸದ ವಿದ್ಯಾರ್ಥಿಗಳು ಯಾವುದೇ ಶುಲ್ಕ ಪಾವತಿಸದೇ ಆನ್‌ಲೈನ್ http://tinyurl.com/mvp9k6es ಲಿಂಕ್ ಮೂಲಕ ಅಥವಾ ಅಭ್ಯರ್ಥಿಗಳು ಸಂಬoಧಿಸಿದ ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸಿ PU EXAM PORTAL ನಲ್ಲಿ ಪರೀಕ್ಷೆ-2 ಕ್ಕೆ ನೋಂದಾಯಿಸಿಕೊಳ್ಳಬಹುದಾಗಿದೆ. ಸಂಬoಧಿಸಿದ ಕಾಲೇಜಿನ ಪ್ರಾಂಶುಪಾಲರುಗಳಿಗೆ 2026 ರಲ್ಲಿ ಮೊದಲನೆ […]

ಆಸ್ತಿ ತೆರಿಗೆ: ರಿಯಾಯಿತಿ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಲು ಸೂಚನೆ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಬರುವ ವಾಸ, ವಾಣಿಜ್ಯ, ಕೈಗಾರಿಕೆ, ಸಾರ್ವಜನಿಕ ಕಟ್ಟಡ ಹಾಗೂ ಖಾಸಗಿ ವಿದ್ಯಾ ಸಂಸ್ಥೆಗಳು ಮತ್ತು ಖಾಲಿ ನಿವೇಶನದ ಮಾಲೀಕರುಗಳು, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶನದಂತೆ ಪ್ರಸಕ್ತ ಸಾಲಿನ ಆಸ್ತಿ ತೆರಿಗೆಯಲ್ಲಿ ಶೇ.5 ರಷ್ಟು ರಿಯಾಯಿತಿಯನ್ನು 2026 ರ ಏಪ್ರಿಲ್ ತಿಂಗಳ ಅಂತ್ಯದ ಒಳಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಈ ಮೇಲಿನ ಎಲ್ಲಾ ಕಟ್ಟಡಗಳ / ಖಾಲಿ ನಿವೇಶನಗಳ ಮಾಲೀಕರು ತಮ್ಮ ಆಸ್ತಿ ತೆರಿಗೆಯನ್ನು ಏಪ್ರಿಲ್ 30 ರ ಅಂತ್ಯದೊಳಗೆ ಶೇ.5 ರ ರಿಯಾಯಿತಿಯ […]

ಸಣ್ಣ ಉದ್ದಿಮೆಗೆ ಸಹಾಯಧನ: ಅರ್ಜಿ ಆಹ್ವಾನ

ಉಡುಪಿ: ಉಡುಪಿ ನಗರಸಭೆಯ 2025-26 ನೇ ಸಾಲಿನ ಎಸ್.ಎಫ್.ಸಿ ಅನುದಾನದ ಶೇ. 7.25 ರ ಇತರೆ ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮದಡಿ ಹಾಗೂ ವ್ಯಕ್ತಿ ಸಂಬoಧಿತ ಕಾರ್ಯಕ್ರಮದಡಿ ಸಣ್ಣ ಉದ್ದಿಮೆಗೆ ಸಹಾಯಧನ ನೀಡುವ ಸಲುವಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ನಿಗದಿತ ಅರ್ಜಿಯೊಂದಿಗೆ ಪೂರಕ ದಾಖಲಾತಿಗಳನ್ನು ಸಲ್ಲಿಸಲು ಏಪ್ರಿಲ್ 21 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಡುಪಿ ನಗರಸಭೆಯ ಪೌರಾಯುಕ್ತರ ಕಚೇರಿಯನ್ನು ಸಂಪರ್ಕಿಸಬಹುಧಾಗಿದೆ ಎಂದು ಪ್ರಕಟಣೆ ತಿಳಿಸಿದೆ.