“ಉಡುಪಿ – ವೃದ್ಧಿ ಚಾಪ್ಟರ್ ತನ್ನ ‘ಟರ್ಮ್ 2.0’ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉಡುಪಿಯ ಟೈಮ್ಸ್ ಸ್ಕ್ವೇರ್ ಓಷನ್ ಪರ್ಲ್ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ಆಚರಿಸಿತು. ಈ ಕಾರ್ಯಕ್ರಮದಲ್ಲಿ ಚಾಪ್ಟರ್‌ನ ಸದಸ್ಯರ ಗಮನಾರ್ಹ ಸಾಧನೆಗಳನ್ನು ಗುರುತಿಸಿ ಗೌರವಿಸಲಾಯಿತು”.

ಈ ಸಮಾರಂಭವು ಅಧ್ಯಕ್ಷರಾದ ಡಾ. ಸೈಯದ್ ಮೊಹಮ್ಮದ್ ಫೈಜ್, ಉಪಾಧ್ಯಕ್ಷರಾದ ಕೆ ಅಶ್ವಥ್ ರಾಯ್ ಮತ್ತು ಕಾರ್ಯದರ್ಶಿ/ಖಜಾಂಚಿ ಪ್ರಶ್ನಿತಾ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಗಣೇಶ ಎನ್. ಶರ್ಮಾ, ಸೀನಿಯರ್ ಡೈರೆಕ್ಟರ್ ಕನ್ಸಲ್ಟೆಂಟ್ ಪ್ರಹ್ಲಾದ್ ನಾಯಕ್ ಮತ್ತು ಸಪೋರ್ಟ್ ಡೈರೆಕ್ಟರ್ ಕನ್ಸಲ್ಟೆಂಟ್ ಸಮೀರ್ ಮೊಹಮ್ಮದ್ ಉಪಸ್ಥಿತರಿದ್ದರು. ಅತ್ಯುತ್ತಮ ಸಾಧಕರಿಗೆ ಪ್ರಶಸ್ತಿ ಗೌರವಸಂಘಟನೆಯ ಬೆಳವಣಿಗೆಗೆ ಶ್ರಮಿಸಿದ ಮತ್ತು ವ್ಯವಹಾರದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಈ ಕೆಳಗಿನ ಸದಸ್ಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು: […]
ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಳದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ವೈಭವದ ಹೊರೆ ಕಾಣಿಕೆ ಮೆರವಣಿಗೆ ಬುಧವಾರ ಸಂಪನ್ನಗೊoಡಿತು.

ಉಡುಪಿ: ನಗರದ ಜೋಡುಕಟ್ಟೆಯಿಂದ ಪ್ರಾರಂಭಗೊoಡ ಈ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆಗೆ ಸಾಂಪ್ರಾದಾಯಿಕ ರೀತಿಯಲ್ಲಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ಸಲಹೆಗಾರ ನಾಡೋಜ ಡಾ.ಜಿ.ಶಂಕರ್, ಉದ್ಯಮಿ ಪ್ರಸಾದ್‌ರಾಜ್ ಕಾಂಚನ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಸಂಚಾಲಕ ರಮೇಶ್ ಕಾಂಚನ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಮಾಧವ ಪೂಜಾರಿ, ಪ್ರಧಾನ ತಂತ್ರಿ ಪಿ.ಶಶಿಕಾಂತ ತಂತ್ರಿ, ಪ್ರಧಾನ ಅರ್ಚಕ ಪಿ.ವಾಸುದೇವ ಉಪಾಧ್ಯ, ಉದ್ಯಮಿ ಪುರುಷೋತ್ತಮ ಶೆಟ್ಟಿ, ಭುವನೇಂದ್ರ ಕಿದಿಯೂರು, ಪ್ರಮುಖರುಗಳಾದ ಹರಿಯಪ್ಪ ಕೋಟ್ಯಾನ್, […]
“ನಿಟ್ಟೆ ಕ್ಯಾಂಪಸ್ ನಲ್ಲಿ ನಡೆದ ಹೊನಲುಬೆಳಕಿನ ಫುಟ್ಬಾಲ್ ಪಂದ್ಯ”

ಕಾರ್ಕಳ: ನಿಟ್ಟೆ ಸಮೂಹ ವಿದ್ಯಾಸಂಸ್ಥೆಗಳ ಫುಟ್ಬಾಲ್ ಕ್ರೀಡಾಪಟುಗಳು ಹಾಗೂ ಮಣಿಪಾಲದ ವಿಕ್ಟೋರಿಯಾ ಫುಟ್ಬಾಲ್ ಕ್ಲಬ್ ನಡುವಿನ ಹೊನಲುಬೆಳಕಿನ ಫುಟ್ಬಾಲ್ ಪಂದ್ಯ ಏ.೧೪ ರಂದು ಬಿ.ಸಿ. ಆಳ್ವಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನ ಆರ್ಟಿಫಿಷಿಯಲ್ ಟರ್ಫ್ ಫುಟ್ಬಾಲ್ ಮೈದಾನದಲ್ಲಿ ಹೊಸದಾಗಿ ಸ್ಥಾಪಿಸಲಾದ ಫ್ಲಡ್ ಲೈಟ್ಗಳ ಅಡಿಯಲ್ಲಿ ನಡೆಸಲಾಯಿತು, ನಿಟ್ಟೆ ತಂಡವು ಮಣಿಪಾಲದ ವಿಕ್ಟೋರಿಯಾ ಫುಟ್ಬಾಲ್ ಕ್ಲಬ್ ವಿರುದ್ಧ ೩-೨ ಗೋಲುಗಳಿಂದ ಗೆಲುವು ಸಾಧಿಸಿತು.
ಎಸ್‌ಎಸ್‌ವಿಪಿ ಮಂಗಳೂರು ಸೆಂಟ್ರಲ್ ಕೌನ್ಸಿಲ್‌ನ ಅಧ್ಯಕ್ಷೆಯಾಗಿ ಮೊದಲ ಮಹಿಳೆ ಪ್ರಮಾಣ ವಚನ ಸ್ವೀಕಾರ:

ಸೇಂಟ್ ವಿನ್ಸೆಂಟ್ ಡಿ ಪೌಲ್ ಸೊಸೈಟಿ, ಮಂಗಳೂರು ಸೆಂಟ್ರಲ್ ಕೌನ್ಸಿಲ್ (SSVP), ತನ್ನ 66 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಸಮಾರಂಭದೊಂದಿಗೆ ಐತಿಹಾಸಿಕ ಮೈಲಿಗಲ್ಲನ್ನು ಆಚರಿಸಿತು. ಬೆಂದೂರು ಕಾನ್ಫರೆನ್ಸ್‌ಗೆ ಸೇರಿದ ಪ್ರೀತಾ ಲೋಬೊ ಅವರಿಗೆ ಆಧ್ಯಾತ್ಮಿಕ ಸಲಹೆಗಾರರಾದ ರೆ. ಫ್ಲೇವಿಯನ್ ಲೋಬೊ ಅವರು ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ಮಾಜಿ ಆಧ್ಯಾತ್ಮಿಕ ಸಲಹೆಗಾರ ರೆ. ಫ್ರಾನ್ಸಿಸ್ ಡಿಸೋಜಾ ಮತ್ತು ಬೆಂದೂರು ಚರ್ಚ್‌ನ ಧರ್ಮಗುರು ರೆ. ವಾಲ್ಟರ್ ಡಿಸೋಜಾ […]
ಆಳ್ವಾಸ್‌ನಲ್ಲಿ ಏರೋಡೈನಾಮಿಕ್ಸ್ನಿಂದ ಡಿಜಿಸಿಎ ಮಾನ್ಯತೆ ಪಡೆದ ಡ್ರೋನ್ ತರಬೇತಿ ಕೇಂದ್ರ ಉದ್ಘಾಟನೆ ಮೂಡುಬಿದಿರೆ:

ಏರೋಡೈನಾಮಿಕ್ಸ್ ಸಂಸ್ಥೆಯು ಆಳ್ವಾಸ್ ಕಾಲೇಜಿನಲ್ಲಿ ಪ್ರಾರಂಭಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಡಿಜಿಸಿಎ ಮಾನ್ಯತೆ ಪಡೆದ ಡ್ರೋನ್ ತರಬೇತಿ ಕೇಂದ್ರವನ್ನು ಮಂಗಳವಾರ ಕಾಲೇಜಿನ ಆವರಣದಲ್ಲಿ ಉದ್ಘಾಟಿಸಲಾಯಿತು.ಕರ್ನಾಟಕದ ಕೋಸ್ಟ್ ಗಾರ್ಡ್ನ ಉಪಮಹಾನಿರೀಕ್ಷಕ (ಡಿಐಜಿ) ಹಾಗೂ ಜಿಲ್ಲಾ ಕಮಾಂಡರ್ ಪಿ ಕೆ ಮಿಶ್ರಾ ಮಾತನಾಡಿ, ರಕ್ಷಣೆ ಹಾಗೂ ನಾಗರಿಕ ಕ್ಷೇತ್ರಗಳಲ್ಲಿ ಡ್ರೋನ್ ತಂತ್ರಜ್ಞಾನವು ವ್ಯಾಪಕವಾಗಿ ಬಳಸಲ್ಪಡುತ್ತಿರುವುದರಿಂದ ಇದರ ಮಹತ್ವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಡಿಮೆ ವೆಚ್ಚ, ನಿಖರತೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಬಳಸಬಹುದಾದ ಸಾಮರ್ಥ್ಯದಿಂದ ಡ್ರೋನ್‌ಗಳು ಕ್ರಾಂತಿಕಾರಿ ತಂತ್ರಜ್ಞಾನವಾಗಿ ಹೊರಹೊಮ್ಮುತ್ತಿವೆ […]