ಶ್ರೀ ಶಂಕರ ಜಯಂತಿ ಪ್ರಯುಕ್ತ ಲೋಕಶಂಕರ ರೂಪಕ ಪ್ರಸ್ತುತಿ

ಶ್ರೀ ಎಲ್ಲೂರು ಲಕ್ಷ್ಮೀನಾರಾಯಣರಾವ್ ಜ್ಯೋತಿಷ್ಕ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಹಾಗೂ ಶ್ರೀ ಸ್ಥಾನಿಕ ಬ್ರಾಹ್ಮಣ ಸಂಘ ಉಡುಪಿ ಹಾಗೂ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಶ್ರೀ ಶಾಂಕರ ತತ್ವ ಪ್ರಸಾರ ಸಮಿತಿ ಇವರ ಜಂಟಿ ಪ್ರಾಯೋಜಕತ್ವದಲ್ಲಿ ಉಡುಪಿ ಕುಂಜಿಬೆಟ್ಟಿನ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ತಾ 21-04-2006 ಮಂಗಳವಾರ ಸಂಜೆ 6:30 ರಿಂದ ಶ್ರೀ ಶಂಕರಾಚಾರ್ಯ ಜೀವನ ಚರಿತ್ರೆ ಆಧಾರಿತ ರೂಪಕ/ ನಾಟಕ ಪ್ರದರ್ಶನ ನಡೆಯಲಿದೆ. ಶ್ರೀ ಗಣೇಶ್ ಎಲ್ಲೂರು ಇವರ ನಿರ್ದೇಶನದಲ್ಲಿ ಹಾಗೂ ಶ್ರೀ ಇಂಚರ ಸರ್ಜಿಕಲ್ ಕ್ಲಿನಿಕ್ ಉಡುಪಿ ಇವರ ಸಹಕಾರದೊಂದಿಗೆ ಈ ಕಾರ್ಯಕ್ರಮವು ನೆರವೇರುತ್ತಿದೆ. ಸಂಜೆ 5:30 ರಿಂದ ಸಭಾ ಕಾರ್ಯಕ್ರಮ ವಿದ್ದು ಅದರಲ್ಲಿ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆಯು ನಡೆಯಲಿದೆ. ಸಾರ್ವಜನಿಕರೆಲ್ಲರಿಗೂ ಆದರದ ಸ್ವಾಗತವನ್ನು ಸಂಘಟಕರು ಕೋರಿರುತ್ತಾರೆ.