ವಿವಿಧ ಸೌಲಭ್ಯ: ವಿಕಲಚೇತನರಿಂದ ಅರ್ಜಿ ಆಹ್ವಾನ

ಉಡುಪಿ: ಉಡುಪಿ ನಗರಸಭೆಯ 2025-26 ನೇ ಸಾಲಿನ ನಗರಸಭಾ ನಿಧಿಯ ಶೇ. 5 ರ ವಿಕಲಚೇತನ ಕಲ್ಯಾಣ ಕಾರ್ಯಕ್ರಮದಡಿ ನಿವೇಶನ ಖರೀದಿ ಹಾಗೂ ಅಂಗವಿಕಲರಿಗೆ ಆರೋಗ್ಯ ವಿಮೆ ನೀಡುವ ಸಲುವಾಗಿ ಅರ್ಹ ವಿಕಲಚೇತನ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಪೂರಕ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು ಏಪ್ರಿಲ್ 21 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ನಗರಸಭೆ ಪೌರಾಯುಕ್ತರ ಕಚೇರಿ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಉಡುಪಿಯ ಬಲ್ಲಾಳ್ ಮೊಬೈಲ್ಸ್ ನಲ್ಲಿದೆ ಯುವ ಜನತೆಯ ಹಾಟ್ ಫೆವರೇಟ್ ಇನ್ಫಿನಿಕ್ಸ್ ಫೋನ್‌ಗಳು: ಅತ್ಯುತ್ತಮ ಬೆಲೆ, ಬೊಂಬಾಟ್ ಉಡುಗೊರೆ!

ಉಡುಪಿ: ಕರಾವಳಿಯಲ್ಲಿ ಜನಪ್ರಿಯತೆ ಪಡೆದಿರುವ ಮೊಬೈಲ್ ಮಾರಾಟ ಮಳಿಗೆಯಾದ ಬಲ್ಲಾಳ್ ಮೊಬೈಲ್ಸ್ ಇದೀಗ ತನ್ನ ಗ್ರಾಹಕರಿಗೆ ಹೊಸ ಸಂತಸದ ಸುದ್ದಿಯನ್ನು ನೀಡಿದೆ. ವೇಗವಾಗಿ ಬೆಳೆಯುತ್ತಿರುವ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಇನ್ಫಿನಿಕ್ಸ್ ಫೋನ್‌ಗಳು ಇದೀಗ ಇಲ್ಲಿ ಅಧಿಕೃತವಾಗಿ ಲಭ್ಯವಾಗುತ್ತಿವೆ. ಆಕರ್ಷಕ ಬೆಲೆಗೆ ಅತ್ಯುತ್ತಮ ಫೋನ್ಸ್:ಉಡುಪಿ ಜಿಲ್ಲೆಯ ಗ್ರಾಹಕರಿಗೆ ಹಲವು ವರ್ಷಗಳಿಂದ ವಿಶ್ವಾಸಾರ್ಹ ಸೇವೆಯನ್ನು ನೀಡುತ್ತಿರುವ ಬಲ್ಲಾಳ್ ಮೊಬೈಲ್ಸ್, ಇದೀಗ ಕಡಿಮೆ ಬೆಲೆಯಲ್ಲಿಯೇ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿರುವ ಇನ್ಫಿನಿಕ್ಸ್ ಮೊಬೈಲ್‌ಗಳನ್ನು ತನ್ನ ಮಳಿಗೆಯಲ್ಲಿ ಪರಿಚಯಿಸಿದೆ. ಇನ್ಫಿನಿಕ್ಸ್ ಫೋನ್‌ಗಳು ಉತ್ತಮ ಕ್ಯಾಮೆರಾ ಗುಣಮಟ್ಟ, […]

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ “HACK.ALGO” ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ

ಉಡುಪಿ: ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಶಿನ್ ಲರ್ನಿಂಗ್ ವಿಭಾಗದ ವಿದ್ಯಾರ್ಥಿಗಳಾದ ಚೇತನ್ ವಿ ಕೋಟ್ಯಾನ್, ಆಶ್ಲೇ ಫರ್ನಾಂಡಿಸ್, ಅಂಶಿಕಾ ಹಾಗೂ ಅನನ್ಯ ಭಟ್ ಅವರು ಪ್ರತಿಷ್ಠಿತ ರಾಷ್ಟ್ರೀಯ ಮಟ್ಟದ ಬ್ಲಾಕ್ ಚೈನ್ ಹ್ಯಾಕಥಾನ್ “HACK.ALGO” ನಲ್ಲಿ ದ್ವಿತೀಯ ಸ್ಥಾನದೊಂದಿಗೆ 200 ಅಮೆರಿಕನ್ ಡಾಲರ್ ನಗದು ಬಹುಮಾನವನ್ನು ಪಡೆದಿರುತ್ತಾರೆ.ಈ ಕಾರ್ಯಕ್ರಮವನ್ನು ಅಲ್ಗೋಭಾರತ್ ಸಂಸ್ಥೆ, ಗೂಗಲ್ ಡೆವಲಪರ್ ಗ್ರೂಪ್ ಮತ್ತು ರೇವಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ದಿನಾಂಕ 10 ಮತ್ತು 11 ಎಪ್ರಿಲ್ […]

“ಮಗ ನೋಡಲು ನನ್ನ ಹಾಗೆ ಇಲ್ಲ” ಎಂದು ಮಗನನ್ನೇ ಕೊಲೆಗೈದ ತಂದೆ

ವಿಜಯಪುರ: ಜಿಲ್ಲೆಯ ನಾಗಠಾಣ ಗ್ರಾಮದಲ್ಲಿ 6 ವರ್ಷದ ಬಾಲಕ ಸಿದ್ದಾರ್ಥ ಮಲ್ಲಿಕಾರ್ಜುನ ಅರಕೇರಿ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಮಗ ನೋಡಲು ತನ್ನಂತಿಲ್ಲ ಎಂಬ ಕಾರಣಕ್ಕೆ ತಂದೆ ಮಲ್ಲಿಕಾರ್ಜುನ ಅರಕೇರಿ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ. ಮಾರ್ಚ್ 16ರಂದು ಮಗನನ್ನು ಶಾಲೆಗೆ ಸೇರಿಸುವುದಾಗಿ ಹೇಳಿ ಕರೆದುಕೊಂಡು ಹೋಗಿದ್ದ ಆತ, ಮಹಾರಾಷ್ಟ್ರದ ಕರಾಡ್ ಜಿಲ್ಲೆಯ ವಡೋಲಿ ಬಳಿ ಕೃಷ್ಣಾ ನದಿಗೆ ತಳ್ಳಿ ಹತ್ಯೆ ಮಾಡಿದ್ದಾನೆ ಬಳಿಕ ಮಗ ಹಾಸ್ಟೆಲ್‌ನಲ್ಲಿ ಇದ್ದಾನೆ ಎಂದು ಕುಟುಂಬಕ್ಕೆ ಸುಳ್ಳು ಮಾಹಿತಿ ನೀಡಿದ್ದಾನೆ. ಏಪ್ರಿಲ್ […]

ಉಡುಪಿಯ ತುಳುನಾಡು ಪ್ರಾಪರ್ಟೀಸ್‌ ನ ಉದಯ ಕೆ ಶೆಟ್ಟಿ ಅವರಿಗೆ ಅಟಲ್ ಭಾರತ್ ಗೌರವ ಸಮ್ಮಾನ್

ಉಡುಪಿ: ಪ್ರತಿಷ್ಠಿತ ಅಟಲ್ ಭಾರತ್ ಗೌರವ ಸಮ್ಮಾನ್ ಗೆ ತುಳುನಾಡು ಪ್ರಾಪರ್ಟೀಸ್‌ ಉದಯ ಕೆ ಶೆಟ್ಟಿ ಅವರಿಗೆ ಸಂದಿದೆ. ಇದು ಭಾರತದ ಶ್ರೇಷ್ಠ ರಾಷ್ಟ್ರೀಯ ಗೌರವಗಳಲ್ಲಿ ಒಂದಾಗಿದ್ದು, ಅವಾರ್ಡ್ಸ್ ಟ್ರಸ್ಟ್ ಆಫ್ ಇಂಡಿಯಾ ಈ ಪ್ರಶಸ್ತಿಯನ್ನು ನೀಡುತ್ತದೆ. ತುಳುನಾಡು ಪ್ರಾಪರ್ಟೀಸ್‌ನ ಪ್ರಾಮಾಣಿಕ ಕೆಲಸ, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮಾಡಿದ ಉತ್ತಮ ಸಾಧನೆಗಳನ್ನು, ನಾಯಕತ್ವವನ್ನು, ಗಮನಿಸಿ, ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ತುಳುನಾಡು ಪ್ರಾಪರ್ಟೀಸ್ ಮಾಲೀಕ ಉದಯ ಕೆ. ಶೆಟ್ಟಿ ಅವರಿಗೆ ಗೋವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ […]