ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎ.ಎಸ್.ಎಂ.ಇ ವಿದ್ಯಾರ್ಥಿ ಘಟಕದ ಉದ್ಘಾಟನೆ

ಉಡುಪಿ: ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ “ದಿ ಅಮೇರಿಕನ್ ಸೊಸೈಟಿ ಆಫ್ ಮೆಕ್ಯಾನಿಕಲ್ ಇಂಜಿನಿಯರ್ಸ್ (ಎ.ಎಸ್.ಎಂ.ಇ) ವಿದ್ಯಾರ್ಥಿ ಘಟಕದ ಉದ್ಘಾಟನೆಯು ದಿನಾಂಕ 11 ಎಪ್ರಿಲ್ 2026ರಂದು ಸಂಸ್ಥೆಯ ಆವರಣದಲ್ಲಿ ನಡೆಯಿತು. ಈ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಹಿರಿಯ ಪ್ರಾಧ್ಯಾಪಕರಾದ ಡಾ ಸತ್ಯಶಂಕರ ಶರ್ಮಾ ಇವರು ಭಾಗವಹಿಸಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ. ರಾಧಾಕೃಷ್ಣ ಎಸ್ ಐತಾಳ್ಕಾರ್ಯಕ್ರಮದ […]
ಮೂಡ್ಲಕಟ್ಟೆಯಲ್ಲಿ ‘ಐಎಂಜೆಐಆರ್’ ಸಂಶೋಧನಾ ಸಂಸ್ಥೆ ಲೋಕಾರ್ಪಣೆ ಮತ್ತು ‘ಕ್ಯೂ-ಪಿಯರ್ 2026’ ರಾಷ್ಟ್ರೀಯ ಶೃಂಗಸಭೆ

ಕುಂದಾಪುರ: ತಾಂತ್ರಿಕ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿರುವ ಮೂಡ್ಲಕಟ್ಟೆಯ ಐಎಂಜೆ ಶಿಕ್ಷಣ ಸಂಸ್ಥೆಗಳ (IMJ Institutions) ಆವರಣದಲ್ಲಿ ಐಎಂಜೆ ಇನ್‌ಸ್ಟಿಟ್ಯೂಟ್ ಆಫ್ ರಿಸರ್ಚ್ (IMJIR) ನ ಉದ್ಘಾಟನಾ ಸಮಾರಂಭವು ಯಶಸ್ವಿಯಾಗಿ ಜರುಗಿತು. ಈ ಐತಿಹಾಸಿಕ ಸಂದರ್ಭದ ಅಂಗವಾಗಿ “ಕ್ವಾಂಟಮ್ ಕಂಪ್ಯೂಟೇಶನ್, ಪ್ರಿಸಿಶನ್ ಇನ್ಸ್ಟ್ರುಮೆಂಟೇಶನ್ ಮತ್ತು ಎಮರ್ಜಿಂಗ್ ರಿಸರ್ಚ್ ಇನ್ಫ್ರಾಸ್ಟ್ರಕ್ಚರ್ಸ್” (Q-PIER 2026) ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ಮಟ್ಟದ ಶೃಂಗಸಭೆಯನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಟಿಐಎಫ್‌ಆರ್ (TIFR) […]
ಕಮಲಶಿಲೆಯ ಬ್ರಾಹ್ಮಿ ದುರ್ಗಾಪರಮೇಶ್ವರಿ ಅಮ್ಮನ ಸನ್ನಿಧಿಯಲ್ಲಿ ಮಿಂದೆದ್ದ ಭಕ್ತ ಜನ: ವೈಭವದ ಜಾತ್ರಾಮಹೋತ್ಸವ

ಕುಂದಾಪುರ: ಕಮಲಶಿಲೆಯಲ್ಲಿ ನೆಲೆಗೊಂಡಿರುವ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಶ್ರೀ ಮನ್ಮಹಾರಥೋತ್ಸವವು ಏಪ್ರಿಲ್ 5ರಿಂದ 10 ರವರೆಗೆ ಭಕ್ತಿಭಾವದಿಂದ ನಡೆಯಿತು. ದೇವಾಲಯದ ಪ್ರಮುಖ ಉತ್ಸವವಾಗಿರುವ ಮಹಾರಥೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ವಿಧಿವಿಧಾನಗಳು, ಪೂಜೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬ್ರಾಹ್ಮಿ ದುರ್ಗಾಪರಮೇಶ್ವರಿ ಅಮ್ಮನ ಕೃಪೆಗೆ ಪಾತ್ರರಾದರು. ಮುಖ್ಯ ಆಕರ್ಷಣೆಯಾಗಿ ಏಪ್ರಿಲ್ 8ರಂದು ರಥೋತ್ಸವವು ಜರುಗಿದ್ದು, ಈ ದಿನ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾದರು. ವೈಭವೋಪೇತ ಕಾರ್ಯಕ್ರಮಗಳು […]
ಉಡುಪಿಯ ಆಶಾ ಜ್ಯುವೆಲ್ಲರ್ಸ್ ನಲ್ಲಿ ಉದ್ಯೋಗಾವಕಾಶ

ಉಡುಪಿಯ ಆಶಾ ಜ್ಯುವೆಲ್ಲರ್ಸ್ ನಲ್ಲಿ ಉದ್ಯೋಗಾವಕಾಶ ಸೇಲ್ಸ್ ಅಸೋಸಿಯೇಟ್ ಅರ್ಹತೆಗಳು : ಸ್ಟೋರ್ ಅಸಿಸ್ಟೆಂಟ್ ಅರ್ಹತೆಗಳು:ಜ್ಯುವೆಲರ್ಸ್ ಕ್ಷೇತ್ರದಲ್ಲಿ ಕನಿಷ್ಠ 1 ವರ್ಷದ ಅನುಭವದವರಿಗೆ ಆದ್ಯತೆಸ್ಟಾಕ್ ನಿರ್ವಹಣೆ, ಅಂಗಡಿ ಸಮನ್ವಯ ಮತ್ತು ಅಧಿಕೃತ ಕೆಲಸಗಳನ್ನು ಬೆಂಬಲಿಸುವ ಸಾಮರ್ಥ್ಯ. ಗಮನಿಸಿ: ದಯವಿಟ್ಟು ನಿಮ್ಮ ಸಿವಿ ಜೊತೆಗೆ ನಿಮ್ಮ ಆಧಾರ್ ಕಾರ್ಡ್‌ನ ಪ್ರತಿಯನ್ನು ತನ್ನಿ. ಕನಕದಾಸ ರಸ್ತೆ, ಸಂಸ್ಕೃತ ಕಾಲೇಜು ಬಳಿ, ಉಡುಪಿ 01-(KA); M: +91 6363-914186
ರಾಜ್ಯಕ್ಕೆ ಬಂತು ಮೊದಲ ‘ವಂದೇ ಭಾರತ್’ ಸ್ಲೀಪರ್ ರೈಲು- ಯಾವೆಲ್ಲಾ ಮಾರ್ಗದಲ್ಲಿ ಸಂಚರಿಸತ್ತೆ ಅನ್ನೋ ಮಾಹಿತಿ ಇಲ್ಲಿದೆ

ಬೆಂಗಳೂರು ಮತ್ತು ಮುಂಬೈ ನಡುವಿನ ಪ್ರಯಾಣವನ್ನು ವೇಗಗೊಳಿಸಲು ದೇಶದ ಎರಡನೇ ವಂದೇ ಭಾರತ್ ಸ್ಲೀಪರ್ ರೈಲು ಆರಂಭಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಆದರೆ ಈ ರೈಲು ಯಾವ ಮಾರ್ಗದಲ್ಲಿ ಸಂಚರಿಸಬೇಕು ಎಂಬ ಬಗ್ಗೆ ಈಗ ಚರ್ಚೆ ತೀವ್ರವಾಗಿದೆ. ಸಾಧ್ಯತೆಯಿರುವ ಮಾರ್ಗಗಳು ಯಾವುವು? ಪ್ರಯಾಣ ಸಮಯ ಹೋಲಿಕೆ ಸದ್ಯದ ಅಂದಾಜು ಪ್ರಕಾರ: ಹುಬ್ಬಳ್ಳಿ ಮಾರ್ಗ ಕಲಬುರಗಿ ಮಾರ್ಗ ಹುಬ್ಬಳ್ಳಿ ಮಾರ್ಗದ ಪ್ರಯೋಜನಗಳು ಕಲಬುರಗಿ ಮಾರ್ಗದ ಪ್ರಯೋಜನಗಳು ವೇಗದ ದೃಷ್ಟಿಯಿಂದ ಕಲಬುರಗಿ ಮಾರ್ಗ ಉತ್ತಮವಾಗಿದೆ. ಆದರೆ ಹೆಚ್ಚು ಜಿಲ್ಲೆಗಳ ಸಂಪರ್ಕದ […]