ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 2025-26ನೇ ಶೈಕ್ಷಣಿಕ ವರ್ಷದ ವಾರ್ಷಿಕ ಸಮಾರಂಭ

ಉಡುಪಿ, ಬಂಟಕಲ್: ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 2025-26ನೇ ಸಾಲಿನ ವಾರ್ಷಿಕ ಸಮಾರಂಭಗಳು ಮಾರ್ಚ್ 11 ರಿಂದ 14ರವರೆಗೆ ಕಾಲೇಜಿನ ಆವರಣದಲ್ಲಿ ನಡೆಯಲಿದೆ. “ವರ್ಣೋತ್ಸವ- 2026” ಎಂಬ ರಾಷ್ಟ್ರೀಯ ಮಟ್ಟದ ಅಂತರ ಕಾಲೇಜು ತಾಂತ್ರಿಕ- ಸಾಂಸ್ಕೃತಿಕ ಹಬ್ಬವನ್ನು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ದಿನಾಂಕ 11 ಮತ್ತು 12 ಮಾರ್ಚ್ 2026 ರಂದು ಆಯೋಜಿಸಲಾಗಿದೆ. ಈ ಹಬ್ಬದಲ್ಲಿ ಇಂಜಿನಿಯರಿಂಗ್ ಹಾಗೂ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಫರ್ಧೆಗಳನ್ನು ಆಯೋಜಿಸಲಾಗಿದ್ದು, ನಂತರ ಮಾರ್ಚ್ 13 […]

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ತೃತೀಯ ಬಹುಮಾನ

ಉಡುಪಿ, ಬಂಟಕಲ್: ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಡಾಟಾ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಾದ ಭುಷಣ್ ಪೂಜಾರಿ, ಶ್ರೀ ಕಿರಣ್ ಭಟ್, ಅಮೃತ, ವಿಶೃತ, ಶ್ರೇಯಸ್ ಆಚಾರ್ಯ ಮತ್ತು ಪ್ರಜ್ವಲ್ ಗುಲ್ವಾಡಿ ಇವರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಮಂಡ್ಯ ಇಲ್ಲಿ ದಿನಾಂಕ 19 ಮತ್ತು 20 ಫೆಬ್ರವರಿ 2026 ರಂದು ನಡೆದ “ವಿಜ್ಞಾತಂ ಉತ್ಸವ 2026” ರಾಷ್ಟ್ರೀಯ ಮಟ್ಟದ ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಬಹುಮಾನವನ್ನು ಪಡೆದಿರುತ್ತಾರೆ. ಈ ಯೋಜನೆಯನ್ನು ಸೃಜನಶೀಲತೆ, ನಾವೀನ್ಯತೆ, ವೈಜ್ಞಾನಿಕ […]

ಕಾರ್ಕಳ:ಕರಾವಳಿಗರ ಬದುಕನ್ನು ಸಂಕಷ್ಠಕ್ಕೆ ದೂಡಿದ ಸರ್ಕಾರ

ಕಾರ್ಕಳ:ರಾಜ್ಯದ ಕಾಂಗ್ರೆಸ್ ಸರ್ಕಾರವು ಕರಾವಳಿ ಭಾಗದ ಮೇಲೆ ಸವಾರಿ ಮಾಡುತ್ತಿದ್ದು, ಮರಳು ಮತ್ತು ಕೆಂಪುಕಲ್ಲು, ಮಣ್ಣು  ಸಾಗಾಟದಂತಹ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸದೆ ಈ ಭಾಗದ ಬಡ ಕಾರ್ಮಿಕರ ಮತ್ತು ಉದ್ಯಮಿಗಳ ಬದುಕನ್ನು ಬೀದಿಗೆ ತಳ್ಳಿದೆ ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು. ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರ ಸಭೆ ಉದ್ದೇಶಿಸಿ ಮಾತನಾಡಿದ ಅವರು ಸರಕಾರವನ್ನು  ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಕರಾವಳಿಯ ಜೀವನಾಡಿಯಾಗಿರುವ ಮರಳುಗಾರಿಕೆ ಮತ್ತು ಕೆಂಪುಕಲ್ಲು ಸಾಗಾಟದ ಸಮಸ್ಯೆಯಿಂದಾಗಿ ಇಂದು ಸಾವಿರಾರು ಲಾರಿ […]

ಕಾರ್ಕಳ: ಡಾ.ಎನ್.ಎಸ್.ಎ.ಎಮ್. ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿ ರೋಸ್ ಡಿ’ಸಿಲ್ವಾ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣ.

ಕಾರ್ಕಳ: ಹೊಸದಿಲ್ಲಿ ಲೆಕ್ಕಪರಿಶೋಧಕರ ಸಂಸ್ಥೆ ಐಸಿಎಐ ಜನವರಿ 2026 ರಲ್ಲಿ ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಡಾ.ಎನ್.ಎಸ್.ಎ.ಎಮ್. ಪ್ರಥಮ ದರ್ಜೆ ಕಾಲೇಜಿನ ಹಳೆ ವಿದ್ಯಾರ್ಥಿನಿ ಕುಮಾರಿ ರೋಸ್ ಡಿ’ಸಿಲ್ವಾ ಅತ್ಯುತ್ತಮ ಅಂಕಗಳಿಸುವ ಮೂಲಕ ತೇರ್ಗಡೆಯಾಗಿದ್ದಾರೆ. ಇವರು ಕಾರ್ಕಳದ ಕರಿಯಕಲ್ಲಿನ ಶ್ರೀಮತಿ ಸಿಂಥಿಯಾ ಡಿ’ಸಿಲ್ವಾ ಮತ್ತು ಶ್ರೀ ಕ್ಯಾರೆಲ್ ಡಿ’ಸಿಲ್ವಾ ಅವರ ಪುತ್ರಿಯಾಗಿದ್ದಾರೆ. ಡಾ.ಎನ್.ಎಸ್.ಎ.ಎಮ್. ಪ್ರಥಮದರ್ಜೆ ಕಾಲೇಜಿನಲ್ಲಿ  2018 ರಿಂದ 2021ನೇ ಸಾಲಿನಲ್ಲಿ ಬಿಕಾಂ ಪದವಿ ಪೂರೈಸಿದ ಇವರು 2021 ರ ಎಪ್ರಿಲ್- ಮೇ ನಲ್ಲಿ ನಡೆದ ಮಂಗಳೂರು […]

ಕೊಲ್ಲೂರು: ವಿಷ ಸೇವಿಸಿ ವಿದ್ಯಾರ್ಥಿ ಮೃತ್ಯು

ಕೊಲ್ಲೂರು: ಫೆ.16ರಂದು ಕಳೆನಾಶಕ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡು ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಕೊಳಲಗಿರಿ ಜಿಟಿಟಿಸಿ ಕಾಲೇಜಿನಲ್ಲಿ ಡಿಪ್ಲೋಮಾ ವಿದ್ಯಾಭ್ಯಾಸ ಮಾಡುತಿದ್ದ ಕೆರಾಡಿ ಹೊಸಮನೆಯ ಮಂಜುನಾಥ ಎಂಬವರ ಮಗ ಮನೀಷ್ (16) ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಮೃತಪಟ್ಟಿದ್ದಾನೆ.ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.