ಕುಂದಾಪುರ: ಯುವಕ ನಾಪತ್ತೆ

ಉಡುಪಿ, ಮಾರ್ಚ್ 06: ಕುಂದಾಪುರ ತಾಲೂಕಿನ ಆಜ್ರಿ ಗಾಮದ ಯಡ್ನಾಳಿ ಹುಂತಿರ್ಕಿ ಮನೆ ನಿವಾಸಿ ಅಮರ್ (29) ಎಂಬ ಯುವಕನು ಮಾರ್ಚ್ 3 ರಂದು ಸಿದ್ದಾಪುರಕ್ಕೆ ಕೆಲಸಕ್ಕೆಂದು ಹೋದವರು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿರುತ್ತಾರೆ. 6 ಅಡಿ ಎತ್ತರ, ಗೋಧಿ ಮೈಬಣ್ಣ, ಸಪೂರ ಶರೀರ ಹೊಂದಿದ್ದು ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಶಂಕರನಾರಾಯಣ ಪೊಲೀಸ್ ಠಾಣೆ ದೂ.ಸಂ: 08259-280299, ಕುಂದಾಪುರ ಠಾಣೆ ದೂ.ಸಂ: 08254-230338, ಎಸ್.ಡಿ.ಪಿ.ಒ: 08254-232338, ಡಿ.ಪಿ.ಒ: […]
ಲೋಂಬಾರ್ಡ್ ಮೆಮೊರಿಯಲ್ ಮಿಷನ್ ಆಸ್ಪತ್ರೆಯ ಸ್ಕೂಲ್ ಆಫ್ ನರ್ಸಿಂಗ್: ಇಕೋ ಕ್ಲಬ್ ನಿರ್ವಹಣೆ ತರಬೇತಿ ಕಾರ್ಯಗಾರ

ಉಡುಪಿ: ಲೋಂಬಾರ್ಡ್ ಮೆಮೊರಿಯಲ್ ಮಿಷನ್ ಆಸ್ಪತ್ರೆಯ ಸ್ಕೂಲ್ ಆಫ್ ನರ್ಸಿಂಗ್, ಕಾಲೇಜ್ ಆಫ್ ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಗೆ ಇಕೋ ಕ್ಲಬ್ಬ್ ನ್ನು ಪ್ರಾರಂಭಿಸಲಾಗಿದ್ದು ಇದರ ಪ್ರಮುಖ ವಿದ್ಯಾರ್ಥಿಗಳಿಗೆ ಒಂದು ದಿನದ ಇಕೋ ಕ್ಲಬ್ ಯಾಕೆ ಬೇಕು ಮತ್ತು ಸದಸ್ಯರ ಪಾತ್ರರ ಬಗ್ಗೆ ಒಂದು ದಿನದ ಕಾರ್ಯಾಗಾರ ಮಿಷನ್ ಆಸ್ಪತ್ರೆಯ ಮಿನಿ ಹಾಲ್ ನಲ್ಲಿ ಜರಗಿತು. ಈ ಕಾರ್ಯಕ್ರಮದ ತರಬೇತುದಾರರಾಗಿ ವ್ಯಕ್ತಿತ್ವ ವಿಕಸನ ತರಬೇತಿದಾರ ರಾಘವೇಂದ್ರ ಪ್ರಭು ಕರ್ವಾಲು, ಡಾ ನವೀನ್ ಚಂದ್ರ, ಡಾ ಕೇವಿನ್ […]
ರಂಗಭೂಮಿ ಉಡುಪಿ 46ನೇ ವರ್ಷದ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯ ಬಹುಮಾನ ವಿತರಣೆ

ಉಡುಪಿ: ರಂಗಭೂಮಿ ಉಡುಪಿ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ರಂಗ ಶಿಕ್ಷಣ ತರಬೇತಿಯನ್ನು ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಸುಮಾರು 25 ಶಾಲೆಗಳಿಗೆ ವಿಸ್ತರಿಸುವ ಚಿಂತನೆ ನಡೆದಿದೆ. ಈ ಯೋಜನೆಗೆ ಸಂಘಸoಸ್ಥೆಗಳು ಹಾಗೂ ದಾನಿಗಳು ಕೈ ಜೋಡಿಸಬೇಕು ಎಂದು ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಗುರುವಾರ ಎಂಜಿಎo ಕಾಲೇಜಿನ ಮುದ್ದಣ ಮಂಟಪದಲ್ಲಿ ರಂಗಭೂಮಿ ಉಡುಪಿ ವತಿಯಿಂದ ನಡೆಯುತ್ತಿರುವ ರಂಗೋತ್ಸವ ಕಾರ್ಯಕ್ರಮದಲ್ಲಿ 2025ರ ಡಿ.4ರಿಂದ 15ರವರೆಗೆ ನಡೆದಿದ್ದ ದಿ. ಡಾ. ಟಿಎಂಎ ಪೈ, ದಿ.ಎಸ್. […]
ಉಡುಪಿ: ಆತ್ರಾಡಿಯಲ್ಲಿ ಬಾಲಾಜಿ ಟ್ರ್ಯಾಕ್ಟರ್ಸ್ ಮಾರಾಟ & ಸೇವಾ ಶೋ ರೂಮ್ ಆರಂಭ.

ಉಡುಪಿ: ಆತ್ರಾಡಿ ಮುಖ್ಯ ರಸ್ತೆಯ ಬಳಿ ಶ್ರೀಮತಿ ಮೈತ್ರಿ ಕೆ ಏನ್, ಚಂದ್ರಶೇಖರ್ ಹಾಗೂ ಶ್ರೀಮತಿ ಚೈತ್ರ ಮುರಳೀಧರ ಕೆ ಏನ್ ರವರ -ಮಾಲೀಕತ್ವದಲ್ಲಿ ಟ್ರ್ಯಾಕ್ಟರ್ ಮತ್ತು ಅದರ ಸೇವೆ, ಬಿಡಿ ಭಾಗಗಳ ಮಾರಾಟ ಶೋ ರೂಮ್ ಶ್ರೀ ಬಾಲಾಜಿ ಟ್ರ್ಯಾಕ್ಟರ್ಸ್ ಆರಂಭ ಗೊಂಡಿತು. ಶ್ರೀ ವಿನಯ ಗುರೂಜಿ ಗೌರಿ ಗದ್ದೆ ಯವರು ಆಗಮಿಸಿ ಆಶೀರ್ವಾಚನ ಮಾಡಿ ಸಂಸ್ಥೆ ಅಭಿವೃದ್ಧಿಯಾಗುವಂತೆ ದೇವರಲ್ಲಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಕಟ್ಟಡದ ಮಾಲೀಕ ಸತ್ಯಾನಂದ ನಾಯಕ್ ಆತ್ರಾಡಿ, ಮಹಿಂದ್ರಾ ಕಂಪನಿ ಏರಿಯಾ […]
ತ್ರಿಶಾ ಕ್ಲಾಸಸ್: ಸಿ ಎ ಫೈನಲ್ ಪರೀಕ್ಷೆಯಲ್ಲಿ ಕಲ್ಪಿತಾ ಎನ್ ಎಸ್ ಉತ್ತೀರ್ಣ

ಹೊಸದಿಲ್ಲಿಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ಜನವರಿ 2026 ರಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಕಲ್ಪಿತಾ ಎನ್ ಎಸ್ ಅವರು ಉತ್ತೀರ್ಣರಾಗಿದ್ದಾರೆ. ಇವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಟಿ. ಬಿ. ನಾರಾಯಣ್ ಹಾಗೂ ಕೆ. ಶೀಲಾವತಿ ದಂಪತಿಗಳ ಪುತ್ರಿಯಾಗಿದ್ದು ತಮ್ಮ ಆರ್ಟಿಕಲ್ ಶಿಪ್ ನ್ನು ಗಣೇಶ್ ಮತ್ತು ಸುಧೀರ್ ಚಾರ್ಟಡ್ ಅಕೌಂಟೆಂಟ್ಸ್ ಮಂಗಳೂರಿನಲ್ಲಿ ಪೂರೈಸಿಕೊಂಡಿದ್ದಾರೆ. ಸಿಎ ಇಂಟರ್ಮೀಡಿಯಟ್ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಹಾಗೂ ಪದವಿ ವಿದ್ಯಾಭ್ಯಾಸವನ್ನು ಮಂಗಳೂರಿನ ತ್ರಿಶಾ ಸಂಧ್ಯಾ ಕಾಲೇಜಿನಲ್ಲಿ ಪಡೆದುಕೊಂಡಿದ್ದಾರೆ.