ಕೊಲ್ಲೂರು: ವಿಷ ಸೇವಿಸಿ ವಿದ್ಯಾರ್ಥಿ ಮೃತ್ಯು

ಕೊಲ್ಲೂರು: ಫೆ.16ರಂದು ಕಳೆನಾಶಕ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡು ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಕೊಳಲಗಿರಿ ಜಿಟಿಟಿಸಿ ಕಾಲೇಜಿನಲ್ಲಿ ಡಿಪ್ಲೋಮಾ ವಿದ್ಯಾಭ್ಯಾಸ ಮಾಡುತಿದ್ದ ಕೆರಾಡಿ ಹೊಸಮನೆಯ ಮಂಜುನಾಥ ಎಂಬವರ ಮಗ ಮನೀಷ್ (16) ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಮೃತಪಟ್ಟಿದ್ದಾನೆ.ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.