ಉಡುಪಿಯ ಹೀರೋ ಶಕ್ತಿ ಮೋಟರ್ಸ್ ನಲ್ಲಿ ಉದ್ಯೋಗಾವಕಾಶಗಳು

ಉಡುಪಿ: Hero Shakti Motors ಉಡುಪಿ ಶಾಖೆಗೆ ವಿವಿಧ ಹುದ್ದೆಗಳಿಗಾಗಿ ಅನುಭವ ಹೊಂದಿದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಖಾಲಿ ಇರುವ ಹುದ್ದೆಗಳು:ಸೇಲ್ಸ್ CRE – 1ಸರ್ವಿಸ್ CRE – 1ಆಫೀಸ್ ಬಾಯ್ – 1ಮೆಕ್ಯಾನಿಕಸ್ – 2 ಅನುಭವ ಹೊಂದಿದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಆಯ್ಕೆಯಾದವರಿಗೆ ಆಕರ್ಷಕ ವೇತನದ ಜೊತೆಗೆ PF/ESI ಹಾಗೂ ಇನ್ಸೆಂಟಿವ್ ಸೌಲಭ್ಯವಿದೆ. ಆಸಕ್ತರು ತಮ್ಮ ರೆಸ್ಯೂಮ್ ಅನ್ನು [email protected] ಗೆ ಕಳುಹಿಸಬಹುದು.ಹೆಚ್ಚಿನ ಮಾಹಿತಿಗಾಗಿ: +91 7996210666 ಅನ್ನು ಸಂಪರ್ಕಿಸಬಹುದು.
ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 24ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ: ಮಾರ್ಚ್ 10’ರ ಒಳಗೆ ಹೆಸರು ನೊಂದಾಯಿಸಲು ಸೂಚನೆ.

ಬ್ರಹ್ಮಾವರ (ಉಡುಪಿ): ತಾಲ್ಲೂಕಿನ ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 24ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ ‘ಮಾಂಗಲ್ಯ ಭಾಗ್ಯ’ ಏಪ್ರಿಲ್ 8ರಂದು ನಡೆಯಲಿದೆ. ವಧುವಿಗೆ ಕರಿಮಣಿ ಸರ, ಧಾರೆ ಸೀರೆ ಮತ್ತು ವರನಿಗೆ ಕುರ್ತಾ ಪೈಜಾಮ, ಹೂವಿನ ಹಾರ ದೇವಸ್ಥಾನದ ವತಿಯಿಂದ ನೀಡಲಾಗುವುದು. ಜೋಡಿಗಳ ವಿವಾಹ ನೋಂದಣಿಗೆ ಮದುವೆ ದಿನವೇ ಕ್ರಮವಹಿಸಲಾಗುವುದು. ವಧು–ವರರು ರಾಜ್ಯ ಸರ್ಕಾರದ ಪ್ರೋತ್ಸಾಹಧನ ಪಡೆಯಲು ಅರ್ಹರಾಗಿರುತ್ತಾರೆ. ಆಸಕ್ತರು ದೇವಸ್ಥಾನದ ಕಚೇರಿಯಲ್ಲಿ ಮಾರ್ಚ್ 10ರೊಳಗೆ ಹೆಸರು ನೋಂದಾಯಿಸಬೇಕು ಎಂದು ದೇವಸ್ಥಾನದ ಅಧ್ಯಕ್ಷ ಎಚ್. ಧನಂಜಯ ಶೆಟ್ಟಿ, […]
ಕಾರ್ಕಳ: ಫುಡ್ ಪಾಯಿಸನ್‌ನಿಂದ ತೀವ್ರ ಅಸ್ವಸ್ಥಗೊಂಡಿದ್ದ ಮಹಿಳೆ ಮೃತ್ಯು.

ಕಾರ್ಕಳ: ಫುಡ್ ಪಾಯಿಸನ್‌ನಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿ ಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಕಾರ್ಕಳ ಉಚ್ಚಂಗಿ ನಗರದ ನಿವಾಸಿ ಮೋಹಿನಿ(32) ಎಂದು ಗುರುತಿಸಲಾಗಿದೆ. ಅಯ್ಯಪ್ಪನಗರದಲ್ಲಿರುವ ವಿಜೇತ ವಿಶೇಷ ಶಾಲೆಯಲ್ಲಿ ವಾಸವಾಗಿರುವ ಇವರಿಗೆ ಫೆ.21ರಂದು ಬೆಳಗ್ಗೆ ಪುಡ್ ಫಾಯಿಸನ್ ಆಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರು ವೆನ್ಲಾಕ್ ಆಸ್ಫತ್ರೆಗೆ ದಾಖಲಿಸ ಲಾಗಿತ್ತು. ಆದರೆ ಅವರು ಫೆ.24ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ […]
ಕ್ರಿಕೆಟ್ ವಿಚಾರಕ್ಕೆ ವಿದ್ಯಾರ್ಥಿ ಹತ್ಯೆಗೈದ 7 ಆರೋಪಿಗಳ ಬಂಧನ.!

ಶಿವಮೊಗ್ಗ: ನಗರದ ಊರಗಡೂರಿನಲ್ಲಿ ಸೋಮವಾರ ರಾತ್ರಿ ನಡೆದ ಎಸ್ಎಸ್ಎಲ್ಸಿ ವಿದ್ಯಾರ್ಥಿ ಸಂಕೇತ್(16) ಹತ್ಯೆಗೆ ಸಂಬಂಧಿಸಿದಂತೆ ಏಳು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳೆಲ್ಲರೂ ಅಪ್ರಾಪ್ತರಾಗಿದ್ದು, ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಸಂಕೇತ್ಗೆ ಚಿರಪರಿಚಿತರೇ ಆಗಿದ್ದಾರೆ.ಕ್ರಿಕೆಟ್ ಪಂದ್ಯಕ್ಕೆ ಸಂಬಂಧಿಸಿದಂತೆ ಉಂಟಾದ ವಿವಾದ ಹತ್ಯೆಯಲ್ಲಿ ಅಂತ್ಯಗೊಂಡಿದ್ದು, ಊರಗಡೂರಿನಲ್ಲಿ ಶೋಕ ಮಡುಗಟ್ಟಿದೆ. ಹಿಂದು-ಮುಸ್ಲಿಂ ಸಮುದಾಯದ ಪ್ರಮುಖರೆಲ್ಲರೂ ಮೃತ ಬಾಲಕನ ಕುಟುಂಬದ ಶೋಕದಲ್ಲಿ ಭಾಗಿಯಾಗಿದ್ದಾರೆ. ಸಂಕೇತ್ ಜತೆಗೆ ಆರೋಪಿಗಳು ಎರಡು ದಿನಗಳ ಹಿಂದೆಯೇ ಕ್ರಿಕೆಟ್ ಪಂದ್ಯದ ವಿಚಾರವಾಗಿ ಜಗಳವಾಡಿದ್ದರು. ಘಟನೆಯ ದಿನ ಆರೋಪಿಗಳೆಲ್ಲರೂ ಮತ್ತೋರ್ವ […]
ಮಣಿಪಾಲ: ಬೈಕ್ ಕಳ್ಳತನ ಪ್ರಕರಣ- ಇಬ್ಬರು ಕುಖ್ಯಾತ ಅಂತರ್ ಜಿಲ್ಲಾ ಕಳ್ಳರ ಬಂಧನ

ಉಡುಪಿ: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ 80 ಬಡಗುಬೆಟ್ಟು ಗ್ರಾಮದ ರಾಹುಲ್‌ನಗರದ ವೀರ ಮಾರುತಿ ಭಜನಾ ಮಂದಿರ ಬಳಿ ಪಾರ್ಕ್ ಮಾಡಿದ್ದ ಪಲ್ಸರ್ ಬೈಕ್ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಮಣಿಪಾಲ ಪೊಲೀಸರು ಕೇವಲ 11ಗಂಟೆಗಳಲ್ಲಿ ಇಬ್ಬರು ಕುಖ್ಯಾತ ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 80ಬಡಗುಬೆಟ್ಟು ಗ್ರಾಮದ ನೇತಾಜಿನಗರದ ನಿವಾಸಿಗಳಾದ ಶರತ್ (26) ಹಾಗೂ ಗಣೇಶ್ ( 31 ) ಬಂಧಿತ ಆರೋಪಿಗಳು. ಬಂಧಿತರಿಂದ ಪಲ್ಸರ್ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು […]