ಕಾರ್ಕಳ: ಫುಡ್ ಪಾಯಿಸನ್‌ನಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿ ಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಕಾರ್ಕಳ ಉಚ್ಚಂಗಿ ನಗರದ ನಿವಾಸಿ ಮೋಹಿನಿ(32) ಎಂದು ಗುರುತಿಸಲಾಗಿದೆ.
ಅಯ್ಯಪ್ಪನಗರದಲ್ಲಿರುವ ವಿಜೇತ ವಿಶೇಷ ಶಾಲೆಯಲ್ಲಿ ವಾಸವಾಗಿರುವ ಇವರಿಗೆ ಫೆ.21ರಂದು ಬೆಳಗ್ಗೆ ಪುಡ್ ಫಾಯಿಸನ್ ಆಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರು ವೆನ್ಲಾಕ್ ಆಸ್ಫತ್ರೆಗೆ ದಾಖಲಿಸ ಲಾಗಿತ್ತು. ಆದರೆ ಅವರು ಫೆ.24ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
















