ಸರ್ಕಾರಿ ಅಧಿಕಾರಿ ಸಿಬ್ಬಂದಿಗಳಿಗೆ ಬೆದರಿಕೆ ಹಾಕಿದರೆ ಜಾಮೀನುರಹಿತ ಜೈಲು ಶಿಕ್ಷೆ: ಹೊಸ ಮುಸೂದೆ ಜಾರಿಗೆ ಮುಂದಾದ ಸರಕಾರ

ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ ಮೇಲೆ ನಡೆಯುತ್ತಿರುವ ಹಿಂಸಾಚಾರ ಮತ್ತು ಆಸ್ತಿಗಳಿಗೆ ಹಾನಿ ಉಂಟು ಮಾಡುವ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಇಂತಹ ದುಷ್ಕೃತ್ಯ ಎಸಗುವವರಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ₹50 ಸಾವಿರ ದಂಡ ವಿಧಿಸಲು ಅವಕಾಶ ಕಲ್ಪಿಸುವ ಕಾನೂನು ಜಾರಿಗೆ ತರಲು ಮುಂದಾಗಿದೆ. ಇಂತಹ ಕೃತ್ಯಗಳು ಜಾಮೀನುರಹಿತ ಅಪರಾಧ ಆಗಲಿವೆ. ಹಾನಿ ಮಾಡಿರುವ ಸರ್ಕಾರಿ ಆಸ್ತಿಯ ಖರೀದಿ ದರದ ಎರಡು ಪಟ್ಟು ದಂಡ ಹಾಗೂ ಈ ಅಪರಾಧದ […]

ಎಲ್ಲ ಸಾರಿಗೆಗೂ ಶಕ್ತಿ ಸ್ಮಾರ್ಟ್ ಕಾರ್ಡ್ ಬಳಕೆಗೆ ಅವಕಾಶ.!

ಬೆಂಗಳೂರು: ಕೆಎಸ್‌ಆರ್‌ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳಲ್ಲಿ ‘ಶಕ್ತಿ’ ಯೋಜನೆಯಡಿ ಸಂಚರಿಸುವ ಫಲಾನುಭವಿಗಳಿಗೆ ಸರ್ಕಾರ ನೀಡಲಿರುವ ಸ್ಮಾರ್ಟ್‌ಕಾರ್ಡ್‌ ಮೆಟ್ರೊ ಸಹಿತ ಬೇರೆ ಸಾರ್ವಜನಿಕ ಸಾರಿಗೆಗಳಲ್ಲಿಯೂ ಬಳಕೆಯಾಗಲಿದೆ. ಸ್ಮಾರ್ಟ್ ಕಾರ್ಡ್‌ ಅನ್ನು ಬಸ್‌ ನಿರ್ವಾಹಕರಿಗೆ ತೋರಿಸಿ ಟಿಕೆಟ್‌ ಪಡೆಯುವ ಬದಲು, ಇಟಿಎಂನಲ್ಲಿ ಸ್ವೈಪ್‌ ಮಾಡಿ ಟಿಕೆಟ್‌ ಪಡೆಯುವ ವ್ಯವಸ್ಥೆ ಇದಾಗಿದೆ. ‘ಶಕ್ತಿ’ ಸ್ಮಾರ್ಟ್‌ಕಾರ್ಡ್‌ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್‌ (ಎನ್‌ಸಿಎಂಸಿ) ಕೂಡಾ ಆಗಿರುತ್ತದೆ. ಇದರಲ್ಲಿ ಪ್ರಯಾಣಿಕರ ಮಾಹಿತಿ ಇರುವ ಚಿಪ್‌ ಅಳವಡಿಕೆಯಾಗಿರುತ್ತದೆ. ‘ಸ್ಮಾರ್ಟ್‌ ಚಿಪ್‌ನಲ್ಲಿ ಫಲಾನುಭವಿಗಳ ಇ–ಕೆವೈಸಿ ಮಾಡಲಾಗುತ್ತದೆ. […]

6 ಕೋಟಿ ರೂ. ವೆಚ್ಚದಲ್ಲಿ 9 ಆಯುಷ್ಮಾನ್ ಭಾರತ್ ಕಟ್ಟಡ ಮಂಜೂರು: ಸಂಸದ ಕೋಟ

ಕಾರ್ಕಳ: ಇಲ್ಲಿನ ವಿಧಾನಸಭಾ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದ ಹಣಕಾಸು ನೆರವಿನ ಮೂಲಕ ₹6 ಕೋಟಿ ವೆಚ್ಚದಲ್ಲಿ 9 ಆಯುಷ್ಮಾನ್ ಭಾರತ್ ಕಟ್ಟಡ ಮಂಜೂರಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.ತಾಲ್ಲೂಕಿನ ಕಡ್ತಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ ಆಯುಷ್ಮಾನ್ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿ, ಕೇಂದ್ರ ಸರ್ಕಾರದ ಹಲವಾರು ಯೋಜನೆಗಳು ಜನರಿಗೆ ತಲುಪಿಸಬೇಕಾದ ಹೊಣೆ ಜನಪ್ರತಿನಿಧಿಗಳಾದ ನಮ್ಮೆಲ್ಲರದ್ದು ಎಂದರು. 70 ವರ್ಷ ವಯಸ್ಸು ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರದ ನೆರವಿನ ಆಯುಷ್ಮಾನ್ ಭಾರತ್ ಯೋಜನೆಯನ್ನು ರಾಜ್ಯ […]

ಉಡುಪಿ: ಮಹಿಳೆ ನಾಪತ್ತೆ

ಮಲ್ಪೆ: ಮೂಡುತೋನ್ಸೆ ಗ್ರಾಮದ ಕೆಳನೇಜಾರು ನಿವಾಸಿ ವಿನಯ ಕುಮಾರಿ (31) ಎಂಬವರು ಫೆ.13ರಂದು ಮನೆಯಿಂದ ಕೆಲಸಕ್ಕೆಂದು ಹೋದವರು ಈವರೆಗೂ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಪು ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಕೆ.ಪಿ.ಆಚಾರ್ಯ ವಿಧಿವಶ

ಕಾಪು: ಕಾಪು ವಿದ್ಯಾನಿಕೇತನ ಸಮೂಹ ಸಂಸ್ಥೆಗಳ ಸ್ಥಾಪಕರಾದ ಕೆ. ಪಿ. ಆಚಾರ್ಯ (78) ಅವರು ಇಂದು (ಫೆ.16) ಮುಂಜಾನೆ ನಿಧನ ಹೊಂದಿದರು. ಕೆ. ಪಿ. ಆಚಾರ್ಯ ಅವರು 30 ವರ್ಷಗಳ ಹಿಂದೆ ಅನಂತರಾಜ ಚಾರಿಟೇಬಲ್ ಟ್ರಸ್ಟ್ ನ ಮೂಲಕವಾಗಿ ಕಾಪು ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಅನ್ನು ಸ್ಥಾಪಿಸಿದ್ದರು. ಕಾಪು ತಾಲೂಕಿನಲ್ಲಿ ಐಸಿಐಸಿಐ ಶಿಕ್ಷಣ ವ್ಯವಸ್ಥೆಯ ಪ್ರಥಮ ವಿದ್ಯಾಸಂಸ್ಥೆಯಾಗಿ ಸ್ಥಾಪನೆಗೊಂಡಿದ್ದ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಸಹಸ್ರಾರು ಮಂದಿ ವಿದ್ಯಾರ್ಥಿಗಳಿಗೆ ಬೆಳಕಾಗಿತ್ತು. ಶೇಕಡ 80ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ, […]