ಉಡುಪಿ: ಗೂಗಲ್ ಮ್ಯಾಪ್ ಯಡವಟ್ಟು: ಹೊಳೆ ಬಳಿ ಕಾರು ಡಿಕ್ಕಿ; ಅಪಾಯದಿಂದ ಪಾರಾದ ಕೇರಳದ ಕುಟುಂಬ.!

ಉಡುಪಿ: ಗೂಗಲ್ ಮ್ಯಾಪ್ ಸೂಚನೆಯ ಯಡವಟ್ಟಿನಿಂದ ಕಾರೊಂದು ಆವೆ ಮಣ್ಣಿನ ಹೊಂಡಕ್ಕಿ ಹೊಳೆಗೆ ಬೀಳುವ ಸ್ಥಿತಿಗೆ ತಲುಪಿದ ಘಟನೆ ಶುಕ್ರವಾರ ರಾತ್ರಿ ಕೋಟ ಸಾಹೇಬ್ರಕಟ್ಟೆ ಮುಖ್ಯ ರಸ್ತೆಯ ಉಪ್ಲಾಡಿಯಲ್ಲಿ ಬದಿಯಲ್ಲಿ ಸಂಭವಿಸಿದೆ. ಕೇರಳ ಮೂಲದ ಕುಟುಂಬವೊಂದು ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕಾಗಿ ಪ್ರಯಾಣಿಸುತ್ತಿದ್ದು, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನೇರವಾಗಿ ಸಂಚರಿಸುವ ಬದಲಿಗೆ ಗೂಗಲ್ ಮ್ಯಾಪ್‌ನಲ್ಲಿ ತೋರಿದ ಡೈವರ್ಶನ್ ಅನುಸರಿಸಿ ಬ್ರಹ್ಮಾವರ ಬಾರ್ಕೂರು ಮಾರ್ಗವಾಗಿ ಸಾಹೇಬ್ರಕಟ್ಟೆ ಮೂಲಕ ಕೋಟದತ್ತ ಸಾಗಿತ್ತು. ಉಪ್ಲಾಡಿ ಹೊಳೆ ಸಮೀಪ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ […]
ಪಡುಕುಡೂರು: ಗೋವು ಕಲ್ಲು ಮತ್ತು ಪ್ರಾಣಿ ಪಕ್ಷಿಗಳ ಬಾಯಾರಿಕೆ ನಿವಾರಣಾ ಕೇಂದ್ರ ಉದ್ಘಾಟನೆ.

ಪಡುಕುಡೂರು: ಮನೆ ಮನದಲ್ಲಿ ದೇವರು ಇದ್ದಾಗ ಮಾತೃ ನಮಗೆ ಜನರ ಸೇವೆ ಮಾಡುವ ಮನಸ್ಸು ಬರುತ್ತದೆ, ಹಿರಿಯರ ಸ್ಮರಣೆ ಇರುತ್ತದೆ. ಹಲವು ಕಡೆಗಳಲ್ಲಿ ಮನೆಗಳಲ್ಲಿ ದೇವರು ಇರುವುದಿಲ್ಲ. ಪಡುಪರ್ಕಳದ ಹರೀಶ ಶೆಟ್ಟಿಯವರ ಮನೆ ಮನದಲ್ಲಿ ದೇವರು ಇದ್ದಾರೆ ಎಂಬುದಕ್ಕೆ ಅವರ ಮನೆ ಮತ್ತು ಜನಸೇವೆಯ ಮನಸಾಕ್ಷಿಯೇ ಪ್ರಮುಖ ಕಾರಣವಾಗಿದೆ ಎಂದು ಮಧ್ವಾಚಾರ್ಯ ಮಹಾಸಂಸ್ಥಾನ ಉಡುಪಿ ಕಾಣಿಯೂರು ಮಠಾದೀಶ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ಇತ್ತೀಚೆಗೆ ಪಡುಕುಡೂರು ಪಡುಪರ್ಕಳದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ […]
ಬ್ರಹ್ಮಾವರ: ಕೊರಗ ಸಮುದಾಯದ 8 ಕುಟುಂಬಗಳಿಗೆ ಮನೆ ಹಸ್ತಾಂತರ

ಉಡುಪಿ: ದುರ್ಬಲ ಸಮುದಾಯದ ಏಳಿಗೆಗೆ ಶ್ರಮಿಸುವ ಕಾರ್ಯ ಭಗವಂತನಿಗೆ ಸಲ್ಲಿಸುವ ಭಕ್ತಿಯಷ್ಟೆ ಶ್ರೇಷ್ಠವಾದದ್ದು ಎಂದು ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದರು. ಕೋಟತಟ್ಟು ಗ್ರಾಮ ಪಂಚಾಯಿತಿ, ದಾನಿಗಳ ವತಿಯಿಂದ ಚಿಟ್ಟಿಬೆಟ್ಟಿನ ಕೊರಗ ಸಮುದಾಯದ 8 ಕುಟುಂಬಗಳಿಗೆ ನಿರ್ಮಿಸಿಕೊಟ್ಟ ಮನೆಗಳನ್ನು ಹಸ್ತಾಂತರಿಸಿ ಅವರು ಆಶೀರ್ವಚನ ನೀಡಿದರು. ಕುಲಕಸುಬು ಮಾಡಿ ಜೀವನ ಸಾಗಿಸುವ ಕೊರಗ ಸಮುದಾಯದ ಮುಗ್ಧ ಜೀವಗಳಿಗೆ ಆಸರೆ ನೀಡಿರುವುದು ಕೋಟತಟ್ಟು ಪಂಚಾಯಿತಿಯ ಶ್ರೇಷ್ಠ ಕಾರ್ಯ. ಈ ಕಾರ್ಯದಲ್ಲಿ ಕೈಜೋಡಿಸಿದ ದಾನಿಗಳ ಸಹಕಾರ ಶ್ಲಾಘನೀಯ ಎಂದು ಸ್ವಾಮೀಜಿ […]