ಉಡುಪಿ ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ: ಹಣಕ್ಕೆ ಬೇಡಿಕೆ!

ಉಡುಪಿ: ಫೇಸ್ ಬುಕ್, ವಾಟ್ಸಾಪ್ ಸಾಮಾಜಿಕ ಜಾಲತಾಣದಲ್ಲಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ವರದಿಯಾಗಿದೆ‌. ನಕಲಿ ಖಾತೆ ತೆರೆದು ಬೇರೆ ಬೇರೆ ಕಾರಣಗಳಿಗಾಗಿ ಹಣ ನೀಡುವಂತೆ ಸಂದೇಶ ಕಳುಹಿಸಲಾಗಿದೆ. ಈ ಬಗ್ಗೆ ಈಗಾಗಲೇ ಉಡುಪಿ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅದರೂ ಕೂಡ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ. ಯಾರೂ ಕೂಡ ಹಣ ನೀಡಬಾರದು. ಇಂತಹ ಸಂದೇಶಗಳಿಗೆ ಸ್ಪಂದಿಸದಿರುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿ ಕೇಂದ್ರಿತ ಮಹತ್ವದ ಸೌಲಭ್ಯಗಳ ಉದ್ಘಾಟನೆ

ಉಡುಪಿ, ಬಂಟಕಲ್: ಬಂಟಕಲ್‌ನ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿ ಕೇಂದ್ರಿತ ನಾಲ್ಕು ಮಹತ್ವದ ಹೊಸ ಸೌಲಭ್ಯಗಳಾದ ಇಮ್ಯಾಜಿನೇಟರ್ಸ್ ಗ್ಯಾಲರಿ, ಕ್ರಿಕೆಟ್ ನೆಟ್ ಅಭ್ಯಾಸ ಪಿಚ್, ಮೌಲ್ಯಮಾಪನ ಕೇಂದ್ರ ಮತ್ತು ಬಹು ನಿರೀಕ್ಷಿತ ವಿದ್ಯಾರ್ಥಿ ಚಟುವಟಿಕಾ ಕೇಂದ್ರವನ್ನು ಶ್ರೀ ಸೋದೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ದಿನಾಂಕ 13 ಜನವರಿ 2026 ರಂದು ಉದ್ಘಾಟಿಸಿದರು. ಇದು ಸಂಸ್ಥೆಯ ಬೆಳವಣಿಗೆಯ ಮೈಲುಗಲ್ಲಿನ ಭಾಗವಾಗಿದೆ. ಇಮ್ಯಾಜಿನೇಟರ್ಸ್ ಗ್ಯಾಲರಿಯು […]

ಕಾರ್ಕಳ: ಮೌಲ್ಯ ಸುಧಾ- 44 ಬದುಕನ್ನು ಸುಂದರವಾಗಿಸುವುದು ನಮ್ಮ ಗುರಿಯಾಗಬೇಕು : ಆರ್.ಜೆ ನಯನ

ಕಾರ್ಕಳ:ಮನುಷ್ಯನಿಗೆ ಬದುಕಿನಲ್ಲಿ ಉದ್ದೇಶವಿರಬೇಕು. ನಮ್ಮಸುತ್ತುಮುತ್ತಲಿರುವವರ ಬದುಕನ್ನು ಸುಂದರವಾಗಿಸುವುದು. ನಮಗೆಲ್ಲ ಗುರಿಯಾಗಬೇಕು ಎಂದು 92.7 ಬಿಗ್ ಎಫ್ ಎಂನ ಆರ್ ಜೆ ನಯನ ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಗಣಿತನಗರ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ವತಿಯಿಂದ ನಡೆಯುತ್ತಿರುವ ತಿಂಗಳ ಸರಣಿ ಕಾರ್ಯಕ್ರಮ ಮೌಲ್ಯಸುಧಾದ 44ನೇ ಸಂಚಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ‘ಯುವ ಮನಸುಗಳಿಗೆ ಒಂದಿಷ್ಟು ಮಾತು’ ಎಂಬ ವಿಷಯದ ಕುರಿತಂತೆ ಮಾತನಾಡಿದರು. ನಾವೇನು ಆಗಬೇಕು, ಯಾರ ಜೊತೆ ಬೆರೆಯಬೇಕು […]

ಮಂಗಳೂರು: ಜ.17, 18ರಂದು ಆಹಾರ ಮೇಳ ಪ್ರದರ್ಶನ, ಮನರಂಜನಾ ಕಾರ್ಯಕ್ರಮ

ಮಂಗಳೂರು: ಸಾಮಾಜಿಕ, ಶೈಕ್ಷಣಿಕ ಸಹಿತ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಶಕ್ತಿನಗರ ಪದವು ಫ್ರೆಂಡ್ಸ್ ಕ್ಲಬ್ ಇದೀಗ ಸ್ವರ್ಣ ಸಂಭ್ರಮದಲ್ಲಿದ್ದು, ಇದನ್ನು ವಿಶೇಷ ನೆಲೆಯಲ್ಲಿ ಆಚರಿಸುವ ಆಶಯದಿಂದ ಪಿಎಫ್ಸಿ ಪರ್ಬ ಎಂಬ ಆಹಾರ ಮೇಳ ಪ್ರದರ್ಶನ ಹಾಗೂ ಮನರಂಜನಾ ಕಾರ್ಯಕ್ರಮ ಶಕ್ತಿನಗರದ ಸರಕಾರಿ ಫ್ರೌಢಶಾಲಾ ಮೈದಾನದಲ್ಲಿ ಜ.17 ಹಾಗೂ ಜ.18ರಂದು ಆಯೋಜಿಸಲಾಗಿದೆ ಎಂದು ಪದವು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಕುಶಾಲ್ ಕುಮಾರ್ ಕೆ. ತಿಳಿಸಿದ್ದಾರೆ. ಪ್ರೆಸ್ ಕ್ಲಬ್‌ನಲ್ಲಿ ಬುಧವಾರ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯ ಸ್ವರ್ಣ ಸಂಭ್ರಮ ವಾರ್ಷಿಕೋತ್ಸವ […]

ಬ್ರಹ್ಮಾವರದಲ್ಲಿ HR ಎಕ್ಸಿಕ್ಯೂಟಿವ್ ಬೇಕಾಗಿದ್ದಾರೆ

ಉಡುಪಿ:ಬ್ರಹ್ಮಾವರದ ಹೆಸರಾಂತ ರಿಕ್ರೂಟ್ಮೆಂಟ್ ಮತ್ತು ಸ್ಟಾಫಿಂಗ್ ಸಂಸ್ಥೆಯಲ್ಲಿ HR ಎಕ್ಸಿಕ್ಯುಟಿವ್ (ಪುರುಷ)ಹುದ್ದೆಗೆ ನೇಮಕಾತಿ ನಡೆಯಲಿದೆ. ◾ರಿಕ್ರೂಟ್ಮೆಂಟ್ ನಲ್ಲಿ ಕನಿಷ್ಠ 3-5 ವರ್ಷ ಅನುಭವ ಹೊಂದಿರಬೇಕು. ◾ಉಡುಪಿ ಜಿಲ್ಲೆಯವರಿಗೆ ಮಾತ್ರ ಅವಕಾಶ. ◾HR Compliance ಮತ್ತು ಸ್ಟಾಫ್ಮ್ಯಾನೇಜೆಂಟ್ ಬಗ್ಗೆ ಅನುಭವ ಹೊಂದಿರಬೇಕು. ಆಸಕ್ತರು ಸಂಪರ್ಕಿಸಿ:📞8217292880