ಉಡುಪಿ ಶ್ರೀಕೃಷ್ಣಮಠದಲ್ಲಿ ಸಂಭ್ರಮದ ಚೂರ್ಣೋತ್ಸವ

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಅದ್ಧೂರಿ ಚೂರ್ಣೋತ್ಸವ (ಹಗಲು ತೇರು) ಗುರುವಾರ ನೆರವೇರುವುದರೊಂದಿಗೆ ವಾರ್ಷಿಕ ಸಪ್ತೋತ್ಸವ ಸಂಪನ್ನಗೊಂಡಿತು. ರಥಬೀದಿಯಲ್ಲಿ ಸೇರಿದ್ದ ಜನರು ಭಕ್ತಿಪರವಶತೆಯಿಂದ ರಥ ಎಳೆದು ಭಕ್ತಿ ಮೆರೆದರು. ವಿದೇಶಿಯರು ಸೇರಿದಂತೆ ಸಾವಿರಾರು ಮಂದಿ ಹಗಲು ರಥೋತ್ಸವವನ್ನು ಕಣ್ತುಂಬಿಕೊಂಡರು. ಕೃಷ್ಣನ ಉತ್ಸವ ಮೂರ್ತಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ತಂದು ಬ್ರಹ್ಮರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ದೇವರಿಗೆ ಪೂಜೆ, ನೈವೇದ್ಯ ಸಮರ್ಪಿಸಿ ಮಹಾ ಮಂಗಳಾರತಿ ನೇರವೇರಿಸಿದ ನಂತರ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಚಂಡೆ, ಮಂಗಳವಾದ್ಯ, ವೇದ ಘೋಷಗಳೊಂದಿಗೆ ಭಕ್ತರ ಜಯಘೋಷ ಮುಗಿಲು […]

2026–27ನೇ ಸಾಲಿನಿಂದ ಬಿಪಿಟಿ, ಬಿಒಟಿ ಕೋರ್ಸ್‌ಗಳಿಗೆ ನೀಟ್‌ ಕಡ್ಡಾಯ

ಬೆಂಗಳೂರು: ‘2026–27ನೇ ಸಾಲಿನಿಂದ ಬ್ಯಾಚುಲರ್ ಆಫ್ ಫಿಸಿಯೋ ಥೆರಪಿ (ಬಿಪಿಟಿ) ಮತ್ತು ಬ್ಯಾಚುಲರ್ ಆಫ್ ಆಕ್ಯುಪೇಷನಲ್ ಥೆರಪಿ (ಬಿಒಟಿ) ಕೋರ್ಸ್‌ಗಳಿಗೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಮೂಲಕ ಮಾತ್ರ ಪ್ರವೇಶ ನೀಡುವಂತೆ ರಾಷ್ಟ್ರೀಯ ಸಹಾಯಕ ಮತ್ತು ಆರೋಗ್ಯ ವೃತ್ತಿಗಳ ಆಯೋಗ ತಿಳಿಸಿದೆ’ ಎಂದು ರಾಜ್ಯ ಅಲೈಡ್ ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಯು.ಟಿ. ಇಫ್ತಿಕಾರ್ ಅಲಿ ತಿಳಿಸಿದ್ದಾರೆ. ‘ಇದೇ 9ರಂದು ಪತ್ರ ಬರೆದಿರುವ ಎನ್‌ಸಿಎಎಚ್‌ಪಿ, ಬಿಪಿಟಿ ಮತ್ತು ಬಿಒಟಿ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ […]

ಉಡುಪಿಯಲ್ಲಿ ಎಕ್ಸ್‌ಫಿನೊ ಸೆಂಟರ್ ಆಫ್ ಎಕ್ಸಲೆನ್ಸ್ ವಿಸ್ತರಣೆ: ‘ಸಿಲಿಕಾನ್ ತೀರ’ಕ್ಕೆ ಜಾಗತಿಕ ಮಾನ್ಯತೆ

ಉಡುಪಿ: ಕರ್ನಾಟಕದ ಕರಾವಳಿಯನ್ನು ಜಾಗತಿಕ ಪ್ರತಿಭಾ ಕೇಂದ್ರವಾಗಿ ರೂಪಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇರಿಸಿರುವ ಸ್ಪೆಷಲಿಸ್ಟ್ ಸ್ಟಾಫಿಂಗ್ ಸಂಸ್ಥೆ ‘ಎಕ್ಸ್‌ಫಿನೊ’ (Xpheno), ಉಡುಪಿಯಲ್ಲಿನ ತನ್ನ ಸೆಂಟರ್ ಆಫ್ ಎಕ್ಸಲೆನ್ಸ್ (CoE) ಅನ್ನು ವಿಸ್ತರಿಸುವುದಾಗಿ ಘೋಷಿಸಿದೆ. ಕೇವಲ ಒಂದು ವರ್ಷದ ಅವಧಿಯಲ್ಲಿ ಸಂಸ್ಥೆಯು ತನ್ನ ಕಾರ್ಯಾಚರಣಾ ಸಾಮರ್ಥ್ಯವನ್ನು ದ್ವಿಗುಣಗೊಳಿಸಿದ್ದು, ಈಗ 250 ಆಸನಗಳ ಬೃಹತ್ ಸೌಲಭ್ಯದೊಂದಿಗೆ ಸಜ್ಜಾಗಿದೆ. ಜಾಗತಿಕ ಸಾಮರ್ಥ್ಯ ಕೇಂದ್ರಗಳಿಂದ (GCC) ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಈ ವಿಸ್ತರಣೆ ಸಹಕಾರಿಯಾಗಿದೆ. 2024ರ ಸೆಪ್ಟೆಂಬರ್‌ನಲ್ಲಿ ಆರಂಭವಾದ ಈ ಕೇಂದ್ರವು […]

ಶೀರೂರು ಪರ್ಯಾಯ ಎಪಿಎಂಸಿ’ಯಿಂದ ಹೊರೆಕಾಣಿಕೆ.

ಉಡುಪಿ: ಶೀರೂರು ಪರ್ಯಾಯದ ಅಂಗವಾಗಿ ಎಪಿಎಂಸಿ ಮತ್ತು ಆಖಿಲ ಭಾರತ ವೀರಶೈವ ಮಹಾಸಭಾ ಉಡುಪಿ‌ ಜಿಲ್ಲೆ ಮತ್ತು ಇತರ ಸಮುದಾಯಗಳ ವತಿಯಿಂದ ಹೊರೆಕಾಣಿಕೆ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಎಪಿಎಂಸಿಯ ವಿವಿಧ ವಿಭಾಗಗಳ ಅಧಿಕಾರಿಗಳು ಮತ್ತು ವಿವಿಧ ಸಮುದಾಯಗಳ ಮುಖಂಡರು ಹಾಗೂ ಭಕ್ತರು ಹೊರೆಕಾಣಿಕೆ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಉಡುಪಿ ಶ್ರೀಕೃಷ್ಣಮಠದಲ್ಲಿ ಸಂಭ್ರಮದ ಮೂರುತೇರು ಉತ್ಸವ

ಉಡುಪಿ: ಪರ್ಯಾಯ ಪುತ್ತಿಗೆ ಮಠ ಆಶ್ರಯದಲ್ಲಿ ಶ್ರೀಕೃಷ್ಣ ಮಠದಲ್ಲಿ ಮಕರಸಂಕ್ರಾಂತಿ ಪ್ರಯುಕ್ತ ಬುಧವಾರ ಸಂಜೆ ಸಂಭ್ರಮದ ಬ್ರಹ್ಮರಥ ಸಹಿತ ಮೂರುತೇರು ಉತ್ಸವ ನಡೆಯಿತು. ಆಚಾರ‍್ಯ ಮಧ್ವರು ಮಕರ ಸಂಕ್ರಮಣದಂದು ಶ್ರೀಕೃಷ್ಣನ ಪ್ರತಿಷ್ಠಾಪನೆ ನಡೆಸಿದರು ಎಂಬ ಐತಿಹ್ಯದ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ಮಹಾಭಿಷೇಕ ಸಹಿತ ವಿಶೇಷ ಪೂಜೆಯನ್ನು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ನೆರವೇರಿಸಿದರು. ಏಕಾದಶಿ ಹಿನ್ನೆಲೆಯಲ್ಲಿ ಪ್ರಸಾದ ಭೋಜನ ವ್ಯವಸ್ಥೆ ಇರಲಿಲ್ಲ.ಸಂಜೆ ಪರ‍್ಯಾಯ ಪುತ್ತಿಗೆ ಶ್ರೀಪಾದರ ನೇತೃತ್ವದಲ್ಲಿ ಮುಹೂರ್ತ […]