ಉಡುಪಿ ಜಿಲ್ಲಾ ಮಟ್ಟದ ‘ಕಡಲ ತೀರ ವಲಯ ನಿರ್ವಹಣಾ ಸಮಿತಿ’ ಸದಸ್ಯರಾಗಿ ಕೆಪಿಸಿಸಿ ಸಂಘಟಕ ಎ.ಕೆ.ಅನ್ಸಾಫ್ ನೇಮಕ

ಮಂಗಳೂರು: ಕರ್ನಾಟಕ ರಾಜ್ಯದ ಕರಾವಳಿ ಜಿಲ್ಲೆಯಾದ ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಕಡಲ ತೀರ ವಲಯ ನಿರ್ವಹಣಾ ಸಮಿತಿಯನ್ನು ಪುನರ್ ರಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಉಡುಪಿ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುವ ಈ 13 ಮಂದಿಯ ನೇತೃತ್ವದ ಸಮಿತಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮಂಗಳೂರು ಮೂಲದ ಎ.ಕೆ. ಅನ್ಸಾಫ್ ಅವರನ್ನು ಅಧಿಕಾರೇತರ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಈ ಸಮಿತಿಗೆ ಉಡುಪಿ ಜಿಲ್ಲಾಧಿಕಾರಿ ಅವರು ಅಧ್ಯಕ್ಷರಾಗಿದ್ದು, ಉಡುಪಿ ಜಿಲ್ಲಾ […]

ಕಾರ್ಕಳ ಕ್ರೈಸ್ಟ್ಕಿಂಗ್: ಭಾವಗೀತೆ ಗಾಯನದಲ್ಲಿ ಸ್ಮೃತಿ ಮರಾಠೆ ರಾಜ್ಯಮಟ್ಟಕ್ಕೆ ಆಯ್ಕೆ

ಕಾರ್ಕಳ: ಪದವಿಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ ಇವರವತಿಯಿಂದ ಜಿಲ್ಲಾ ಪಂಚಾಯತ್ ಉಡುಪಿ ಹಾಗೂ ಜಿಲ್ಲಾ ಉಪ ನಿರ್ದೇಶಕರ ಕಛೇರಿ ಉಡುಪಿ ಇವರ ಸಹಯೋಗದಲ್ಲಿ ಉಡುಪಿಯ ಪೂರ್ಣಪ್ರಜ್ಞಾ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪದವಿಪೂರ್ವ ವಿಭಾಗದ ಮೈಸೂರು ವಿಭಾಗ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಭಾವಗೀತೆ ಗಾಯನ ಸ್ಪರ್ಧೆಯಲ್ಲಿ ಕಾರ್ಕಳದ ಕ್ರೈಸ್ಟ್ಕಿಂಗ್ ಪದವಿಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸ್ಮೃತಿ ಮರಾಠೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ಎಷ್ಟೇ ಪ್ರಯತ್ನ ಪಟ್ಟರೂ ಸರ್ಕಾರಿ ಕೆಲಸ ಸಿಗುತ್ತಿಲ್ಲ ಅಂತ ಮನನೊಂದು ಯುವಕ ಆತ್ಮಹತ್ಯೆ!

ದಾವಣಗೆರೆ: ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗುಡ್ಡದಲಿಂಗಣ್ಣನಹಳ್ಳಿಯಲ್ಲಿ ಯುವಕನೊಬ್ಬ ಸರ್ಕಾರಿ ಕೆಲಸ ಸಿಗದ ಹಿನ್ನೆಲೆ, ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ ಅಂಜಿನಪ್ಪ (26). ಈತ ಪದವಿ ಮುಗಿಸಿದಾಗಿನಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಿದ್ದ. ಅಲ್ಲದೇ ತನ್ನ ರೂಂನಲ್ಲಿ ನಿರಂತರವಾಗಿ ಓದುತ್ತಿದ್ದ. ಆದರೂ ತಾನು ಪಟ್ಟ ಶ್ರಮಕ್ಕೆ ಪ್ರತಿಫಲ ಸಿಗುತ್ತಿಲ್ಲ ಎಂದು ಮನ ನೊಂದಿದ್ದ. ಅಲ್ಲದೇ, ಕೊಠಡಿಯಲ್ಲಿ ಎಲ್ಲಿ ನೋಡಿದರೂ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳೇ ಇದ್ದವು. ಎಷ್ಟೇ ಪ್ರಯತ್ನ […]

ಜಿಲ್ಲೆಯಲ್ಲಿರುವ ಬಿಎಸ್ಎನ್ಎಲ್ ಟವರ್’ಗಳಿಗೆ ಬ್ಯಾಟರಿ ಹಾಗೂ ಸೋಲಾರ್ ಸ್ಥಾವರ ಮಂಜುೂರು: ಸಂಸದ ಕೋಟ ಶ್ರೀನಿವಾಸ್ ಪೂಜಾರಿ

ಉಡುಪಿ: ಜಿಲ್ಲೆಯಲ್ಲಿರುವ 71 ಬಿಎಸ್​ಎನ್​ಎಲ್​ ಟವರ್​ಗಳಿಗೆ ಕೇಂದ್ರ ಸರ್ಕಾರ ಹೊಸದಾಗಿ ಬ್ಯಾಟರಿ ಹಾಗೂ ಸೋಲಾರ್​ ಸ್ಥಾವರ ಮಂಜೂರು ಮಾಡಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ. ಕೇಂದ್ರ ಸಂಪರ್ಕ ಸಚಿವ ಜ್ಯೋತಿರಾಜ್​ ಸಿಂಧಿಯಾ ಅವರು ಈ ವಿಚಾರವಾಗಿ ನನಗೆ ಪತ್ರದ ಮೂಲಕ ತಿಳಿಸಿದ್ದು, 2026ರ ಜನವರಿ ತಿಂಗಳೊಳಗೆ ಬ್ಯಾಟರಿ ಸರಬರಾಜು ಮಾಡಲಾಗುವುದು. ತಮ್ಮ ಮನವಿಯಂತೆ 21 ಕಡೆಗಳಲ್ಲಿ ಸೋಲಾರ್​ ಸ್ಥಾವರವೂ ಮಂಜೂರಾಗಿದ್ದು, ಇದನ್ನು 2026ರ ಮಾರ್ಚ್​ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಉಡುಪಿಯ […]

ಡಿ.14 ರಂದು ಉಡುಪಿಯಲ್ಲಿ ‘ಧಾನ್ಯ ಮುಹೂರ್ತ’

ಉಡುಪಿ: ಶ್ರೀಮನ್ಮಧ್ವಾಚಾರ್ಯರು ಮತ್ತು ಭಾವೀಸಮೀರ ಶ್ರೀವಾದಿರಾಜರ ಸತ್ಸಂಪ್ರದಾಯ ಅನುಸಾರ ಶ್ರೀವಾಮನತೀರ್ಥ ಪರಂಪರೆಯ ಶಿರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಸರ್ವಜ್ಞ ಪೀಠಾರೋಹಣ ಮಹೋತ್ಸವ 2026ರ ಜ.18ರಂದು ನಡೆಯಲಿದೆ. ತನ್ನಿಮಿತ್ತ ಶ್ರೀಕೃಷ್ಣನ ಪೂಜಾ ದೀಕ್ಷೆ ಸ್ವೀಕರಿಸುವ ಪೂರ್ವಭಾವಿಯಾಗಿ ಡಿ.14ರಂದು ಬೆಳಗ್ಗೆ 7:45ಕ್ಕೆ ‘ಧಾನ್ಯ ಮುಹೂರ್ತ’ ನಡೆಯಲಿದೆ. ಪರ್ಯಾಯ ಪೂರ್ವಭಾವಿಯಾಗಿ ನಡೆಯುವ ಚತುರ್ಥ ಮುಹೂರ್ತ ಸಮಾರಂಭ ಇದಾಗಿದೆ. ಅಂದು ಬೆಳಗ್ಗೆ 6:15ಕ್ಕೆ ಶಿರೂರು ಮಠದಲ್ಲಿ ಶ್ರೀಗಳಿಂದ ದೇವತಾ ಪ್ರಾರ್ಥನೆ, ಚಂದ್ರೇಶ್ವರ, ಅನಂತಾಸನ, ಶ್ರೀಕೃಷ್ಣ-ಮುಖ್ಯಪ್ರಾಣ ದೇವರ ದರ್ಶನ ನಡೆಯಲಿದೆ. […]