ಬ್ರಹ್ಮಾವರ: ಮರಕ್ಕೆ ಡಿಕ್ಕಿ‌ ಹೊಡೆದ ಟಿಪ್ಪರ್: ಚಾಲಕ ಸ್ಥಳದಲ್ಲೇ ಮೃತ್ಯು

ಉಡುಪಿ: ಚಾಲಕನ ನಿಯಂತ್ರಣ ತಪ್ಪಿದ ಟಿಪ್ಪರೊಂದು ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಚೇರ್ಕಾಡಿ ಗ್ರಾಮದ ಪೇತ್ರಿ-ಮಡಿ ರಸ್ತೆಯಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ.ಮೃತರನ್ನು ಟಿಪ್ಪರ್ ಚಾಲಕ ಶ್ರೀಕಾಂತ್(26) ಎಂದು ಗುರುತಿಸಲಾಗಿದೆ. ನಿಟ್ಟೂರಿನ ರಂಜನ್ ಶೆಟ್ಟಿ ಎಂಬವರ ಮಾಲಕತ್ವದ ಟಿಪ್ಪರ್‌ನ್ನು ಚಾಲಕ ಶ್ರೀಕಾಂತ್, ನಿಟ್ಟೂರಿನಿಂದ ಜೆಲ್ಲಿ ಲೋಡ್‌ಗಾಗಿ ಚಲಾಯಿಸಿಕೊಂಡು ಹೋಗಿದ್ದರು. ಚೇರ್ಕಾಡಿ ಗ್ರಾಮದ ಪೇತ್ರಿ-ಮಡಿ ರಸ್ತೆಯಲ್ಲಿ ಹೋಗುತ್ತಿದ್ದ ಟಿಪ್ಪರ್, ರಸ್ತೆಯ ತಿರುವಿನಲ್ಲಿರುವ ರಸ್ತೆ ಹೊಂಡಕ್ಕೆ ಬಿದ್ದಿದ್ದು, ಇದರಿಂದ ನಿಯಂತ್ರಣ ತಪ್ಪಿದ ಟಿಪ್ಪರ್, […]

ನಾಳೆ ಮಣಿಪಾಲದ MSDC ಯಲ್ಲಿ ಡಿಸೈನಿಂಗ್ ಕಾರ್ಯಗಾರ: ಭಾಗವಹಿಸಿ ಒಂದೊಳ್ಳೆಯ ಕೌಶಲ್ಯ ಪಡೆಯಿರಿ

ಮಣಿಪಾಲ: ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (PMA Pai Foundation‌ನ ಘಟಕ)MSDC ಮತ್ತು ಡಾವಿನ್ಸಿ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ಸಹಯೋಗದಲ್ಲಿ ಕ್ಯಾನ್ವಾ ಕುರಿತು ಒಂದು ದಿನದ ಕಾರ್ಯಾಗಾರ ಮಣಿಪಾಲದ MSDCಯಲ್ಲಿ ಡಿಸೆಂಬರ್ 11 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ. ಕಾರ್ಯಾಗಾರಕ್ಕೆ ₹ 500/ ಶುಲ್ಕ ನಿಗಧಿಪಡಿಸಲಾಗಿದ್ದು ಉಪಹಾರ/ತಿಂಡಿ ಕೂಡ ಇದರಲ್ಲಿ ಒಳಗೊಂಡಿದೆ. ಕಾರ್ಯಾಗಾರಕ್ಕೆ ನೀವು ನಿಮ್ಮದೇ ಲ್ಯಾಪ್‌ಟಾಪ್‌ನ್ನು ತರಬಹುದು. ಲ್ಯಾಪ್‌ಟಾಪ್ ಇಲ್ಲದಿದ್ದರೂ ಚಿಂತೆ ಬೇಡ ನಿಮಗೆ ಡೆಸ್ಕ್‌ಟಾಪ್ ವ್ಯವಸ್ಥೆ ಕೂಡ […]

ಡಿ.12,13ರಂದು ಮಣಿಪಾಲದಲ್ಲಿ “ಆಲ್ ಇಂಡಿಯಾ ಪ್ರಿಂಟ್ ಸಮ್ಮಿಟ್-2025”

ಉಡುಪಿ: ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘದ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಮುದ್ರಣ ಮಾಲಕರ ಸಂಘ, ಡಾ. ಟಿ.ಎಂ.ಎ ಪೈ ಪಾಲಿಟೆಕ್ನಿಕ್ ಮತ್ತು ಮಣಿಪಾಲ ಸ್ಕಿಲ್ ಡೆವೆಲಪ್ಮೆಂಟ್ ಸೆಂಟರ್ ಇವರ ಸಹಯೋಗದಲ್ಲಿ “ಆಲ್ ಇಂಡಿಯಾ ಪ್ರಿಂಟ್ ಸಮ್ಮಿಟ್-2025” ಅನ್ನು ಡಿ. 12ಮತ್ತು 13ರಂದು ಮಣಿಪಾಲ ಡಾ. ಟಿಎಂಎ ಪೈ ಪಾಲಿಟೆಕ್ನಿಕ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಾವೇಶದ ಗೌರವಾಧ್ಯಕ್ಷ ಯು. ಮೋಹನ್ ಉಪಾಧ್ಯ ಮತ್ತು ಕಾರ್ಯಾಧ್ಯಕ್ಷ ಎಂ. ಮಹೇಶ್ ಕುಮಾರ್ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ […]

ಕಾರ್ಕಳ: ನಲ್ಲೂರು ಅಕ್ರಮ ಕಸಾಯಿಖಾನೆ ಪ್ರಕರಣಕ್ಕೆ ಹೊಸ ಟ್ವಿಸ್ಟ್: ದನ- ಕರು‌ ಮಾರಾಟ ಮಾಡಿದ್ದ ಸಂಘ ಪರಿವಾರದ ಕಾರ್ಯಕರ್ತನ ಬಂಧನ!

ಉಡುಪಿ: ನಲ್ಲೂರಿನ ಮನೆಯೊಂದರಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಘಪರಿವಾರದ ಕಾರ್ಯಕರ್ತನೊಬ್ಬನನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನಲ್ಲೂರಿನ ಶಿವಪ್ರಸಾದ್ ಯಾನೆ ಅಣ್ಣೂ ಮಡಿವಾಳ (28) ಎಂದು ಗುರುತಿಸಲಾಗಿದೆ. ನ.12ರಂದು ನಲ್ಲೂರಿನ ಮನೆಯೊಂದಕ್ಕೆ ದಾಳಿ ನಡೆಸಿದ ಕಾರ್ಕಳ ಗ್ರಾಮಾಂತರ ಪೊಲೀಸರು ಅಕ್ರಮವಾಗಿ ಕಸಾಯಿಖಾನೆ ನಡೆಸುತ್ತಿದ್ದ ಆರೋಪದಲ್ಲಿ ಅಶ್ರಫ್ ಅಲಿ ಹಾಗೂ ಆತನ ಪತ್ನಿಯನ್ನು ಬಂಧಿಸಿದ್ದರು. ಈ ಬಗ್ಗೆ ವಿಶ್ವ ಹಿಂದು ಪರಿಷತ್, ಭಜರಂಗ ದಳದ ಕಾರ್ಯಕರ್ತರು ಪ್ರತಿಭಟನೆ […]

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ “ಅಸೋಸಿಯೇಶನ್ ಆಫ್ ಕಂಪ್ಯೂಟಿಂಗ್ ಮೆಶಿನರಿ” ವಿದ್ಯಾರ್ಥಿ ಸಂಘದ ಉದ್ಘಾಟನೆ

ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ“ಅಸೋಸಿಯೇಶನ್ ಆಫ್ ಕಂಪ್ಯೂಟಿಂಗ್ ಮೆಶಿನರಿ” (ಎ ಸಿ ಎಮ್) ಎಂಬ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ದಿನಾಂಕ 03 ಡಿಸೆಂಬರ್ 2025 ರಂದು ಕಾಲೇಜಿನ ಆವರಣದಲ್ಲಿ ಉದ್ಘಾಟಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಣಿಪಾಲ ತಾಂತ್ರಿಕಮಹಾ ವಿದ್ಯಾಲಯದ ಪ್ರೊಫೆಸರ್ ಮತ್ತು ಅಸೋಸಿಯೇಶನ್ ಆಫ್ಕಂಪ್ಯೂಟಿಂಗ್ ಮೆಶಿನರಿ ಇದರ ಫ್ಯಾಕಲ್ಟಿ ಸ್ಪಾನ್ಸರ್ ಆದ ಡಾ. ಶ್ರೀಕಾಂತ್ಪ್ರಭು ಇವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಡಾ.ರಾಧಾಕೃಷ್ಣ […]