ಡಿ.14 ರಂದು ಉಡುಪಿಯಲ್ಲಿ ‘ಧಾನ್ಯ ಮುಹೂರ್ತ’

ಉಡುಪಿ: ಶ್ರೀಮನ್ಮಧ್ವಾಚಾರ್ಯರು ಮತ್ತು ಭಾವೀಸಮೀರ ಶ್ರೀವಾದಿರಾಜರ ಸತ್ಸಂಪ್ರದಾಯ ಅನುಸಾರ ಶ್ರೀವಾಮನತೀರ್ಥ ಪರಂಪರೆಯ ಶಿರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಸರ್ವಜ್ಞ ಪೀಠಾರೋಹಣ ಮಹೋತ್ಸವ 2026ರ ಜ.18ರಂದು ನಡೆಯಲಿದೆ. ತನ್ನಿಮಿತ್ತ ಶ್ರೀಕೃಷ್ಣನ ಪೂಜಾ ದೀಕ್ಷೆ ಸ್ವೀಕರಿಸುವ ಪೂರ್ವಭಾವಿಯಾಗಿ ಡಿ.14ರಂದು ಬೆಳಗ್ಗೆ 7:45ಕ್ಕೆ ‘ಧಾನ್ಯ ಮುಹೂರ್ತ’ ನಡೆಯಲಿದೆ.

ಪರ್ಯಾಯ ಪೂರ್ವಭಾವಿಯಾಗಿ ನಡೆಯುವ ಚತುರ್ಥ ಮುಹೂರ್ತ ಸಮಾರಂಭ ಇದಾಗಿದೆ. ಅಂದು ಬೆಳಗ್ಗೆ 6:15ಕ್ಕೆ ಶಿರೂರು ಮಠದಲ್ಲಿ ಶ್ರೀಗಳಿಂದ ದೇವತಾ ಪ್ರಾರ್ಥನೆ, ಚಂದ್ರೇಶ್ವರ, ಅನಂತಾಸನ, ಶ್ರೀಕೃಷ್ಣ-ಮುಖ್ಯಪ್ರಾಣ ದೇವರ ದರ್ಶನ ನಡೆಯಲಿದೆ.

ಬಳಿಕ ಧಾನ್ಯ ಮುಹೂರ್ತ ನಡೆಯಲಿದ್ದು, ತದನಂತರ ಮಧ್ವ ಸರೋವರದ ಬಳಿ ಕಟ್ಟಿಗೆ ರಥಕ್ಕೆ ಶಿಖರ ಪ್ರತಿಷ್ಠೆ ಕಾರ್ಯ ನಡೆಯಲಿದೆ. ಶ್ರೀಕೃಷ್ಣನ ಹಾಗೂ ಶಿರೂರು ಮಠದ ಸದ್ಭಕ್ತರು ಪಾಲ್ಗೊಳ್ಳುವಂತೆ ಮಠದ ದಿವಾನ ವಿದ್ವಾನ್​ ಡಾ. ಉದಯಕುಮಾರ ಸರಳತ್ತಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.