ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ “ಅಸೋಸಿಯೇಶನ್ ಆಫ್ ಕಂಪ್ಯೂಟಿಂಗ್ ಮೆಶಿನರಿ” ವಿದ್ಯಾರ್ಥಿ ಸಂಘದ ಉದ್ಘಾಟನೆ

ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ
“ಅಸೋಸಿಯೇಶನ್ ಆಫ್ ಕಂಪ್ಯೂಟಿಂಗ್ ಮೆಶಿನರಿ” (ಎ ಸಿ ಎಮ್) ಎಂಬ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ದಿನಾಂಕ 03 ಡಿಸೆಂಬರ್ 2025 ರಂದು ಕಾಲೇಜಿನ ಆವರಣದಲ್ಲಿ ಉದ್ಘಾಟಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಣಿಪಾಲ ತಾಂತ್ರಿಕ
ಮಹಾ ವಿದ್ಯಾಲಯದ ಪ್ರೊಫೆಸರ್ ಮತ್ತು ಅಸೋಸಿಯೇಶನ್ ಆಫ್
ಕಂಪ್ಯೂಟಿಂಗ್ ಮೆಶಿನರಿ ಇದರ ಫ್ಯಾಕಲ್ಟಿ ಸ್ಪಾನ್ಸರ್ ಆದ ಡಾ. ಶ್ರೀಕಾಂತ್
ಪ್ರಭು ಇವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಡಾ.ರಾಧಾಕೃಷ್ಣ ಎಸ್ ಐತಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಅಸೋಸಿಯೇಶನ್ ಆಫ್ ಕಂಪ್ಯೂಟಿಂಗ್ ಮೆಶಿನರಿ ಇದರ
ಸಂಯೋಜಕರಾದ ಡಾ. ಭಾರತಿ ಪಂಜ್ವಾನಿ ಇವರು ಸಂಘದ ತಾಂತ್ರಿಕ
ಶ್ರೇಷ್ಠತೆಯನ್ನು ಉತ್ತೇಜಿಸುವ ಮಹತ್ವವನ್ನು ತಿಳಿಸಿದರು. ಈ
ಸಂದರ್ಭದಲ್ಲಿ ಹೊಸತಾಗಿ ಆಯ್ಕೆಯಾದ ವಿದ್ಯಾರ್ಥಿ ಘಟಕದ
ಸದಸ್ಯರು ಮುಖ್ಯ ಅತಿಥಿಯಿಂದ ಪ್ರಮಾಣವಚನ ಸ್ವೀಕರಿಸಿದರು.
ಮುಖ್ಯ ಅತಿಥಿಗಳಾದ ಡಾ. ಶ್ರೀಕಾಂತ್ ಪ್ರಭು ಇವರು ಮಾತನಾಡಿ
ವಿದ್ಯಾರ್ಥಿಗಳಿಗೆ ಪ್ರಾಮಾಣಿಕತೆ ಹಾಗೂ ಆಳವಾದ ಕಲಿಕೆಯ
ಮಹತ್ವವನ್ನು ತಿಳಿಸಿದರು ಮತ್ತು ಅಸೋಸಿಯೇಶನ್ ಆಫ್
ಕಂಪ್ಯೂಟಿಂಗ್ ಮೆಶಿನರಿ ಸಂಘವನ್ನು ಸಾಮಾಜಿಕ ಕಲ್ಯಾಣಕ್ಕಾಗಿ
ಬಳಸುವಂತೆ ತಿಳಿಸಿದರು.

ವಿದ್ಯಾರ್ಥಿಗಳಿಗೆ ಸಂಸ್ಥೆಯ ಪ್ರಾಂಶುಪಾಲರಾದ ಡಾ. ನಾಗರಾಜ ಭಟ್
ಇವರ ಪ್ರೇರಣಾದಾಯಕ ಮಾತುಗಳು ಮತ್ತು ಸಂಸ್ಥೆಗಳ
ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಡಾ. ರಾಧಾಕೃಷ್ಣ ಎಸ್ ಐತಾಳ್ ಇವರ ಅಧ್ಯಕ್ಷೀಯ ಮಾತುಗಳು ಸಂಸ್ಥೆಯ ಸಮಗ್ರ ಶಿಕ್ಷಣ,
ಜಾಗತಿಕ ಸಹಕಾರ ಹಾಗೂ ತಾಂತ್ರಿಕ ಪ್ರಗತಿಯ ಬದ್ಧತೆಯನ್ನು ತಿಳಿಸಿತು.