ಮಣಿಪಾಲ: ಅ.9 ರಂದು MSDC ಓರೇನ್ ಇಂಟರ್ನ್ಯಾಷನಲ್ ನಲ್ಲಿ ‘KOBIDO ಫೇಶಿಯಲ್ ಮಸಾಜ್’ ನೋಡಿ, ಕಲಿಯಿರಿ ಕಾರ್ಯಾಗಾರ

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ(MSDC) ಓರೇನ್ ಇಂಟರ್ನ್ಯಾಷನಲ್ ನಲ್ಲಿ ಅಕ್ಟೋಬರ್ 9 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 12ಯ ವರೆಗೆ ‘KOBIDO ಫೇಶಿಯಲ್ ಮಸಾಜ್’ ನೋಡಿ, ಕಲಿಯಿರಿ ಕಾರ್ಯಾಗಾರ ನಡೆಯಲಿದೆ. ಕೇವಲ ರೂ.499/- ಮಾತ್ರ. ನಿಮ್ಮ ಆಸನಗಳನ್ನು ದೃಢೀಕರಿಸಲು ಕರೆ ಮಾಡಿ ಮತ್ತು ನೋಂದಾಯಿಸಿ. MSDC ಕಟ್ಟಡ, 3ನೇ ಮಹಡಿ, ಓರೇನ್ ಇಂಟರ್ನ್ಯಾಷನಲ್ದೂರವಾಣಿ ಸಂಖ್ಯೆ: 8123165068

ಬಾಸ್ಕೆಟ್ ಬಾಲ್ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾದ ಗ್ರೀಷ್ಮಾ ಎಸ್ ರಾಷ್ಟ್ರಮಟ್ಟಕ್ಕೆ ಆಯ್ಕೆ

ಗಣಿತನಗರ : ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ಬೆಂಗಳೂರು ಗ್ರಾಮಾಂತರ ಹಾಗೂ ಸಂತ ಕ್ಲಾರೆಟ್ ಪದವಿ ಪೂರ್ವ ಕಾಲೇಜು ಜಾಲಹಳ್ಳಿ ಇವರ ಜಂಟಿ ಆಶ್ರಯದಲ್ಲಿ ಜರುಗಿದ ರಾಜ್ಯಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಬಾಸ್ಕೆಟ್ ಬಾಲ್ ಪಂದ್ಯಾಟದಲ್ಲಿ ಉಡುಪಿ ಜಿಲ್ಲೆಯ ತಂಡವನ್ನು ಪ್ರತಿನಿಧಿಸಿದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಕು.ಗ್ರೀಷ್ಮಾ ಎಸ್ ರಾಷ್ಟ್ರಮಟ್ಟಕ್ಕೆಆಯ್ಕೆಗೊಂಡಿರುತ್ತಾರೆ. ಮುಂಬರುವ ಪಂದ್ಯಾಟದಲ್ಲಿ ಕರ್ನಾಟಕತಂಡವನ್ನು ಪ್ರತಿನಿಧಿಸಲಿದ್ದಾರೆ. ಈಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರಾದ ಡಾ.ಕೆ.ಸತೀಶ್ ಹಾಗೂ ಶ್ರೀಮತಿ […]

ಮೂಡುಬಿದಿರೆ:ಆಳ್ವಾಸ್ ಫಾರ್ಮಾಸಿ: ಅಭಿವಿನ್ಯಾಸ ಕಾರ್ಯಕ್ರಮ

ಮೂಡುಬಿದಿರೆ: ಫಾರ್ಮಾಸಿಸ್ಟ್ಗಳು ಸಮಾಜದ ಆರೋಗ್ಯದ ರಕ್ಷಕರು ಹಾಗೂ ವೈದ್ಯಕೀಯ ವ್ಯವಸ್ಥೆಯ ಶ್ರದ್ಧಾವಂತ ಯೋಧರು ಎಂದುಮಾಹೆ ಮಣಿಪಾಲ ಫಾರ್ಮಸೂಟಿಕಲ್ ಸೈನ್ಸ್ಸ್ ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀನಿವಾಸ್ ಮುತಾಲಿಕ್ ನುಡಿದರು. ಅವರು ಆಳ್ವಾಸ್ ಫಾರ್ಮಾಸಿ ಕಾಲೇಜಿನ ವತಿಯಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅಭಿವಿನ್ಯಾಸ ಕಾರ‍್ಯಕ್ರಮದಲ್ಲಿ ಮಾತನಾಡಿದರು. ವಿಶ್ವದಲ್ಲಿ ಔಷಧೋದ್ಯಮ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದೆ. ಔಷಧ ತಯಾರಿಕೆ, ಗುಣಮಟ್ಟದ ಪರಿಶೀಲನೆ, ಸಂಶೋಧನೆ, ಲಸಿಕಾ ಅಭಿವೃದ್ಧಿ ಮತ್ತು ಕ್ಲಿನಿಕಲ್ ರಿಸರ್ಚ್ನಲ್ಲಿ ಫಾರ್ಮಾಸಿಸ್ಟ್ಗಳ ಬೇಡಿಕೆ ಹೆಚ್ಚುತ್ತಿದೆ. ಇಂದಿನ ಸ್ಪರ್ಧಾತ್ಮಕ ಪರಿಸರದಲ್ಲಿ ದೇಶದ ಆರೋಗ್ಯ […]

ಅ.11,12 ರಂದು ಉಡುಪಿಯಲ್ಲಿ ಕೆನರಾ ರಿಟೈಲ್ ಮೇಳ: ದೀಪಾವಳಿಗೆ ಕೆನರಾ ಬ್ಯಾಂಕ್ ನೀಡ್ತಿದೆ ಈ ಭರ್ಜರಿ ಆಫರ್

ಉಡುಪಿ:ದೀಪಾವಳಿ ಹಬ್ಬದ ಪ್ರಯುಕ್ತ ಏರ್ಪಡಿಸುತ್ತಿರುವಕೆನರಾ ರಿಟೈಲ್ ಮೇಳ – 2025 ಅ. 11 & 12 ರಂದು, ಬೆಳಿಗ್ಗೆ 9.30 ರಿಂದ ಸಂಜೆ 6.30 ರವರೆಗೆ ಎಮ್.ಜಿ.ಎಮ್. ಕಾಲೇಜು ಗ್ರೌಂಡ್, ಉಡುಪಿ ಇಲ್ಲಿ ನಡೆಯಲಿರುವುದು. ಸೌಲಭ್ಯಗಳು: ▪️ಯಾವುದೇ ಪ್ರವೇಶ ಶುಲ್ಕ ಇಲ್ಲ.▪️ಯಾವುದೇ ಪೂರ್ವಪಾಪತಿ ಪೆನಾಲ್ಟಿ ಇಲ್ಲ.▪️ ಆಕರ್ಷಕ ದರದಲ್ಲಿ ಸುಲಭ ಸಾಲ.▪️ ವಾಹನ ಸಾಲಕ್ಕೆ ಕೇವಲ 10% ಪಾವತಿಸಿ, ಉಳಿದ ಹಣವನ್ನು ಮಾಸಿಕ 84 ಕಂತುಗಳಲ್ಲಿ ಮರುಪಾವತಿಸಿ.▪️ಸಂಸ್ಕರಣಾ ಶುಲ್ಕ ಇಲ್ಲ.▪️ಯಾವುದೇ ಜಾಮೀನು ಇಲ್ಲ.▪️ಆದಾಯ ತೆರಿಗೆ ವಿನಾಯಿತಿ.▪️ಗೃಹ ಸಾಲಕ್ಕೆ […]

ವಿಷ ಸೇವಿಸಿ ಯುವ ದಂಪತಿ ಆತ್ಮಹತ್ಯೆ.

ಕಾಸರಗೋಡು: ಮಂಜೇಶ್ವರ ಠಾಣಾ ವ್ಯಾಪ್ತಿಯ ಕಡಂಬಾರ್ ಎಂಬಲ್ಲಿ ಯುವ ದಂಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತಪಟ್ಟವರು ಕಡಂಬಾರಿನ ಅಜಿತ್ ( 35) ಮತ್ತು ಪತ್ನಿ ಶ್ವೇತಾ ( 27). ಅಜಿತ್ ಪೈಂಟಿಂಗ್ ಕಾರ್ಮಿಕ ರಾಗಿದ್ದು , ಶ್ವೇತಾ ವರ್ಕಾಡಿ ಬೇಕರಿ ಜಂಕ್ಷನ್ ನ ಖಾಸಗಿ ಶಾಲಾ ಶಿಕ್ಷಕಿ ಯಾಗಿದ್ದರು. ಸೋಮವಾರ ಘಟನೆ ನಡೆದಿದ್ದು, ಗಂಭೀರ ಸ್ಥಿತಿಯಲ್ಲಿ ಇದ್ದ ಇಬ್ಬರನ್ನು ದೇರಳ ಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಜಿತ್ ರಾತ್ರಿ ಹಾಗೂ ಶ್ವೇತಾ ಇಂದು ಬೆಳಿಗ್ಗೆ […]