ಮಲ್ಪೆ ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ 70 ಟನ್ ಬೊಲ್ಲಾರ್ಡ್ ಟಗ್ (ಹಡಗು) ಲೋಕಾರ್ಪಣೆ

ಉಡುಪಿ: ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಿಂದ ಅದಾನಿ ಪೋರ್ಟ್ಸ್ ಮತ್ತು ಎಸ್‌ಇಝೆಡ್‌ನ ಅಂಗ ಸಂಸ್ಥೆಯಾದ ಓಷಿಯನ್ ಸ್ಪಾರ್ಕಲ್ ಲಿಮಿಟೆಡ್‌ಗಾಗಿ ನಿರ್ಮಿಸಲಾದ 70 ಟನ್ ಬೊಲ್ಲಾರ್ಡ್ ಫುಲ್ ಟಗ್(ಹಡಗು) ಮಲ್ಪೆಯ ಶಿಪ್ ಬಿಲ್ಡಿಂಗ್ ಯಾರ್ಡ್‌ನಲ್ಲಿ ಲೋಕಾರ್ಪಣೆಗೊಂಡಿತು. 60ಕೋಟಿ ರೂ. ವೆಚ್ಚದ ಈ ಹಡಗು 33 ಮೀಟರ್ ಉದ್ದ, 12.2 ಮೀಟರ್ ಅಗಲ ಮತ್ತು 4.2 ಮೀಟರ್ ಆಳ ಹೊಂದಿದ್ದು, ಎರಡು 1838 ಕಿಲೋವಾಟ್ ಸಾಮರ್ಥ್ಯದ ಎಂಜಿನ್‌ಗಳನ್ನು ಮತ್ತು 2.7 ಮೀಟರ್ ಪ್ರೊಪೆಲರ್‌ಗಳು ಹಾಗೂ ಡೆಕ್ ಉಪಕರಣಗಳನ್ನು ಹೊಂದಿವೆ.ಹಡಗನ್ನು ಉದ್ಘಾಟಿಸಿ […]
ಮಂಗಳೂರು:‘ಕರ್ನಾಟಕೀ ಮತ್ತು ಹಿಂದೂಸ್ತಾನೀ ಜುಗಲ್ ಬಂಧಿ’

ಮಂಗಳೂರು:ಮಂಗಳೂರಿನ ಸಂಗೀತ ಭಾರತಿ ಫೌಂಡೇಶನ್ (ರಿ)ಸಂಸ್ಥೆಯು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಪ್ರಾಯೋಜಕತ್ವದಲ್ಲಿ ‘ ‘ವಿಹಂಗಮ’’ ಎಂಬ ‘ ‘ಕರ್ನಾಟಕೀಮತ್ತು ಹಿಂದೂಸ್ತಾನೀ ಜುಗಲ್ ಬಂಧಿ’’ ಕಾರ್ಯಕ್ರಮವುಅ.5ರಂದು ಮಂಗಳೂರಿನ ಪುರಭವನದಲ್ಲಿ ಸಂಜೆ5.30 ಕ್ಕೆ ನಡೆಯಿತು. ‘ ‘ವಿಹಂಗಮ’’ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಇಬ್ಬರು ಕಲಾವಿದರಾದ ವಿದ್ವಾನ್ ಡಾ.ಮೈಸೂರು ಮಂಜುನಾಥ್ ಮತ್ತು ಉಸ್ತಾದ್ ರಫೀಕ್ ಖಾನ್ ಇವರಿಂದ ‘ವಯೋಲಿನ್-ಸಿತಾರ್ ಜುಗಲ್ ಬಂಧಿ’ ನಡೆಯಿತು. ಈ ಕಾರ್ಯಕ್ರಮಕ್ಕೆ ಮೃದಂಗದಲ್ಲಿ ಚೆನ್ನೈ ನ ವಿದ್ವಾನ್ ತಿರುವಾರೂರು ಭಕ್ತವತ್ಸಲಂ ಮತ್ತು ತಬ್ಲಾದಲ್ಲಿ ಮುಂಬೈನ ಶ್ರೀ ಓಜಸ್ ಅಧಿಯಾ […]
ಬಂಟಕಲ್:ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮ

ಉಡುಪಿ, ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕಮಹಾವಿದ್ಯಾಲಯದ ಪ್ರಸಕ್ತ ಸಾಲಿನ ಪ್ರಥಮ ವರ್ಷದ ಇಂಜಿನಿಯರಿಂಗ್ ಶಿಕ್ಷಣಕ್ಕೆ ಸೇರ್ಪಡೆಗೊಂಡ ವಿದ್ಯಾರ್ಥಿಗಳ ‘ಮಾರ್ಗದರ್ಶನ ಕಾರ್ಯಕ್ರಮ’ವು ದಿನಾಂಕ 05 ಅಕ್ಟೋಬರ್ 2025ರ ಭಾನುವಾರದಂದು ವಿದ್ಯಾಲಯದ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. ಉಡುಪಿ ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ದೀಪ ಬೆಳಗಿಸುವ ಮೂಲಕಕಾರ್ಯಕ್ರಮವನ್ನು ಉದ್ಘಾಟಿಸಿದರು ಮತ್ತು ಸಮಾರಂಭದಅಧ್ಯಕ್ಷತೆ ವಹಿಸಿದ್ದರು. ಅವರು ತಮ್ಮ ಆಶೀರ್ವಚನದಲ್ಲಿ ವಿದ್ಯಾರ್ಥಿಗಳುತಮ್ಮ ಆಸಕ್ತಿಯ ಕ್ಷೇತ್ರದ ಮೇಲೆ ಗಮನವನ್ನು ಕೇಂದ್ರೀಕರಿಸಿವೃತ್ತಿ ಜೀವನದಲ್ಲಿ ಶ್ರೇಷ್ಠತೆಯನ್ನು […]
ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ ಹೆಬ್ರಿ ಆರಕ್ಷಕ ಠಾಣೆಗೆ ಲ್ಯಾಪ್ಟಾಪ್ ಕೊಡುಗೆ.

ಹೆಬ್ರಿ: ಹೆಬ್ರಿಯ ಆರಕ್ಷಕ ಠಾಣೆಗೆ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ ಲ್ಯಾಪ್ಟಾಪನ್ನು ಅಧ್ಯಕ್ಷರಾದ ಎಚ್ ನಾಗರಾಜ್ ಶೆಟ್ಟಿ ಅವರು ಠಾಣೆಯ ಉಪನಿರೀಕ್ಷಕರಾದ ರವಿ ಬಿ.ಕೆ ಅವರಿಗೆ ನೀಡಿದರು. ಈ ಸಂದರ್ಭದಲ್ಲಿ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯವರಾದ ಸಪ್ನಾ.ಎನ್.ಶೆಟ್ಟಿ, ಹೆಬ್ರಿಯ ಖ್ಯಾತ ಉದ್ಯಮಿ ಸತೀಶ್ ಪೈ, ಹೆಬ್ರಿ ಪೊಲೀಸ್ ಠಾಣೆ ಉಪನಿರೀಕ್ಷಕರಾದ ಮಹಾಂತೇಶ್ ಜಾಬಗೌಡ ಮತ್ತು ಪೊಲೀಸ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಮಂಗಳೂರು: ಮೈಕಲ್ ಡಿ’ಸೋಜಾ ಮತ್ತು ಕುಟುಂಬ ಶಿಕ್ಷಣ ದತ್ತಿ ನಿಧಿ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ

ಮಂಗಳೂರು: ಮಂಗಳೂರು ಧರ್ಮಪ್ರಾಂತ್ಯದ ಸಿಓಡಿಪಿ ಸಂಸ್ಥೆಯು ನಿರ್ವಹಿಸುವ ಮೈಕೆಲ್ ಡಿ’ಸೋಜಾ ಮತ್ತು ಕುಟುಂಬ ಶಿಕ್ಷಣ ದತ್ತಿ ನಿಧಿಯ ಅಡಿಯಲ್ಲಿ ಆಯೋಜಿಸಲಾದ ಪ್ರೇರಣಾ ಕಾರ್ಯಕ್ರಮವು ಅಕ್ಟೋಬರ್ 5 ರ ಭಾನುವಾರದಂದು ಮಂಗಳೂರಿನ ರೊಸಾರಿಯೋ ಚರ್ಚ್ ಹಾಲ್‌ನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಪೌಲ್ ಸಲ್ಡಾನಾ ಅವರು , ಎಜುಕೇರ್ ಎಂಡೋಮೆಂಟ್ ಫಂಡ್‌ನ ದೃಷ್ಟಿಕೋನ, ಉದ್ದೇಶ ಮತ್ತು ಮಹತ್ವದ ಸಾಧನೆಗಳನ್ನು ವಿವರಿಸಿದರು. ಮೈಕೆಲ್ ಡಿ’ಸೋಜಾ ಮತ್ತು ಕುಟುಂಬದವರಿಗೆ ಶಿಕ್ಷಣದ ಮೇಲಿರುವ ಗೌರವ, […]