ಉಡುಪಿ: ಅಂಬಾಗಿಲಿನಲ್ಲಿ ಬೈಕ್ ಗೆ ಖಾಸಗಿ ಬಸ್ ಡಿಕ್ಕಿ; ಸವಾರ ಸ್ಥಳದಲ್ಲೇ ಮೃತ್ಯು

ಉಡುಪಿ: ಬೈಕ್ ಗೆ ಬಸ್ ವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಅಂಬಾಗಿಲು ಜಂಕ್ಷನ್ ನಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.ಕುಂದಾಪುರದಿಂದ ಉಡುಪಿಯ ಕಡೆಗೆ ಸಂಚರಿಸುತ್ತಿದ್ದ ಎಕ್ಸ್‌ಪ್ರೆಸ್ ಬಸ್ ಬೈಕ್ ಗೆ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಸವಾರನನ್ನುಉಡುಪಿ ಪುತ್ತೂರಿನ ಸುಬ್ರಹ್ಮಣ್ಯ ನಗರದ ರವಿ ಪೂಜಾರಿ (44) ಎಂದು ಗುರುತಿಸಲಾಗಿದೆ. ಉಡುಪಿ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾರ್ಕಳದಲ್ಲಿ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನೂತನ ಶಾಖಾ ಕಛೇರಿಯ ಉದ್ಘಾಟನೆ.

ಉಡುಪಿ: ಸೌಹಾರ್ದ ಸಹಕಾರಿ ಸಂಘಗಳು ಜನಸಾಮಾನ್ಯರ ನೋವು ನಲಿವುಗಳಿಗೆ ಸ್ಪಂದಿಸುತ್ತದೆ. ಸಮಾಜಮುಖಿಯಾದ ಕೆಲಸಗಳನ್ನು ಮಾಡುವುದರ ಜೊತೆಗೆ ಆರ್ಥಿಕತೆಗೂ ಸಹಾಯ ಮಾಡುತ್ತದೆ. ಸವಿತಾ ಸಮಾಜ, ಭಂಡಾರಿ ಸಮಾಜದವರು ಯಾವ ಸಮಯದಲ್ಲೇ ಆಗಲಿ ತಮ್ಮ ಕರ್ತವ್ಯ ನಿಷ್ಠೆಯನ್ನು ಮರೆಯದೇ ಸಾಮಾಜಿಕವಾಗಿ ಸ್ಪಂದಿಸುವ ಸಮಾಜ ಎಂದು ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ಮುನಿಯಾಲು ಇದರ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಮುನಿಯಾಲು ಹೇಳಿದರು. ಕಾರ್ಕಳ ಮಾರಿಗುಡಿ ದೇವಸ್ಥಾನದ ಬಳಿಯ ಪ್ರೈಮ್ ಸಿಟಿ ಸೆಂಟರ್ ನಲ್ಲಿ ಅ.7 ರಂದು ಆರಂಭಗೊಂಡ ಸವಿತಾ ಸಮಾಜ […]
ಸಾಲ್ಮರದಲ್ಲಿ ರೆಸಿಡೆನ್ಶಿಯಲ್ Plot ಗಳು ಮಾರಾಟಕ್ಕಿದೆ

ಉಡುಪಿ:ಸಾಲ್ಮರದಲ್ಲಿ ರೆಸಿಡೆನ್ಶಿಯಲ್ Plot ಗಳು ಮಾರಾಟಕ್ಕಿದೆ.ನಿಮ್ಮ ಕನಸಿನ ಮನೆಯನ್ನು ಉತ್ತಮ ಸ್ಥಳದಲ್ಲಿ ನಿರ್ಮಿಸಿಕೊಳ್ಳಲು ಇಂದೇ ಭೇಟಿ. ಪ್ರತಿ ಸೆಂಟ್ಸ್ ನ ದರ 3 ಲಕ್ಷದಿಂದ ಪ್ರಾರಂಭ. ಈ ಸ್ಥಳವನ್ನು ಏಕೆ ಆರಿಸಬೇಕು? ▪️ಪ್ರಮುಖ ವಸತಿ ಸ್ಥಳ ಇದಾಗಿದೆ.▪️ಮುಖ್ಯ ಬಸ್ ಮಾರ್ಗಕ್ಕೆ ಹತ್ತಿರವಿದೆ.▪️9 ಸೆಂಟ್ಸ್ ಮತ್ತು 7 ಸೆಂಟ್ಸ್ ಪ್ಲಾಟ್‌ಗಳು ಲಭ್ಯವಿದೆ.▪️ಶಾಂತಿಯುತ ನೆರೆಹೊರೆ ಹೊಂದಿದೆ. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:+91 8197035017 ಸ್ಥಳ:ಉಪ್ಪೂರು ಪಂಚಾಯತ್ ಮತ್ತು ಉಪ್ಪೂರು ಸೊಸೈಟಿಯ ಬಳಿ ಓಂಕಾರ್ ಪೀಠೋಪಕರಣಗಳ ಎದುರು.
ಮನೆ ಮನೆ ಸಮೀಕ್ಷೆ: ಅಕ್ಟೋಬರ್ 18 ರ ವರೆಗೆ ಸರ್ಕಾರಿ, ಅನುದಾನಿತ ಶಾಲೆಗಳಿಗೆ ರಜೆ

ಸೆಪ್ಟೆಂಬರ್ 2 ರಿಂದ ರಾಜ್ಯದ ಜನರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಮೀಕ್ಷೆ ಶುರುವಾಗಿದೆ. ಸಮೀಕ್ಷೆ ಇವತ್ತು ಮುಗಿಯಬೇಕಿತ್ತು. ಕೆಲವು ಜಿಲ್ಲೆಗಳಲ್ಲಿ ಪೂರ್ತಿ ಆಗಿಲ್ಲ. ಕೊಪ್ಪಳ ಶೇ97 ಆಗಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ67 ರಷ್ಟು ಆಗಿದೆ. ಹೀಗೆ ವ್ಯತ್ಯಾಸಗಳಿವೆ. ಹೀಗಾಗಿ ಶಿಕ್ಷಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಆಯೋಗ ಚರ್ಚಿಸಿದ್ದಾರೆ. 1 ಲಕ್ಷ 20 ಸಾವಿರ ಶಿಕ್ಷಕರು ಸೇರಿ ಒಂದು ಲಕ್ಷ ಅರವತ್ತು ಸಾವಿರ ಸಿಬ್ಬಂದಿ ಸಮೀಕ್ಷೆಯಲ್ಲಿ ತೊಡಗಿದ್ದಾರೆ. ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಮತ್ತು ಶಿಕ್ಷಕರ […]
ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಧ್ಯಾಪಕರ ಅಭಿವೃದ್ಧಿ ಕಾರ್ಯಾಗಾರ

ಉಡುಪಿ,ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕಮಹಾವಿದ್ಯಾಲಯದ ಎಮ್‌ಬಿಎ ವಿಭಾಗವು ಅಖಿಲ ಭಾರತ ತಾಂತ್ರಿಕಶಿಕ್ಷಣ ಇಲಾಖೆಯ ಕಲಿಕೆ ಮತ್ತು ತರಬೇತಿ ಅಕಾಡೆಮಿಯಸಹಯೋಗದೊಂದಿಗೆ ಆರು ದಿನಗಳ ಅಧ್ಯಾಪಕರ ತರಬೇತಿಕಾರ್ಯಕ್ರಮವನ್ನು ಆಯೋಜಿಸಿದೆ. ಇದರ ಉದ್ಘಾಟನಾಸಮಾರಂಭವು ದಿನಾಂಕ 6 ಅಕ್ಟೋಬರ್ 2025 ರಂದು ಜರಗಿತು. ಈ ಅಭಿವೃದ್ಧಿ ಕಾರ್ಯಾಗಾರವು ಅಧ್ಯಾಪಕರ ಮತ್ತು ಸಂಶೋಧಕರನ್ನು ಅಗತ್ಯ ಪರಿಕರಗಳು ಮತ್ತು ತಂತ್ರಗಳೊಂದಿಗೆ ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ.ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಲಾಗಿಲ್ ಎಂಟರ್‌ಪ್ರೈಸಸ್ ಡಿಜಿಟಲ್ ಟ್ರಾನ್ಸ್ಫಾರ್ಮೇಷನ್ ಸಲಹೆಗಾರರಾದ ಸುಜಿತ್ ಸಾಹೂ ಭಾಗವಹಿಸಿ ಇಂದಿನ ವ್ಯವಹಾರ ವ್ಯವಸ್ಥೆಯಲ್ಲಿ […]