ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವರ ಆಪ್ತ ಕಾರ್ಯದರ್ಶಿ ಮನೆಯಲ್ಲಿ ಕಂತೆ ಕಂತೆ ನೋಟು! ಇಡಿ ಕಾರ್ಯಾಚರಣೆಯಲ್ಲಿ ಅಕ್ರಮ ಹಣ ಹೊರಬಂತು
ರಾಂಚಿ: ಜಾರ್ಖಂಡ್ ಸಚಿವ ಅಲಂಗೀರ್ ಆಲಂ ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ಅವರ ಮನೆ ಸೇರಿದಂತೆ ರಾಂಚಿಯ ಹಲವು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ಸೋಮವಾರ ದಾಳಿ ಆರಂಭಿಸಿದೆ. ಸಂಜೀವ್ ಲಾಲ್ ಅವರ ಮನೆಯಿಂದ 20 ರಿಂದ 30 ಕೋಟಿ ರೂಪಾಯಿ ಎಂದು ಅಂದಾಜಿಸಲಾದ ಬೃಹತ್ ಮೊತ್ತದ ನಗದು ಪತ್ತೆಯಾಗಿದೆ. ಎಣಿಕೆಯನ್ನು ಮುಂದುವರಿಸಲು ನಗದು ಯಂತ್ರಗಳನ್ನು ನಿಯೋಜಿಸಲಾಗುತ್ತಿರುವುದರಿಂದ ನಗದು ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಅಲಂಗೀರ್ ಆಲಂ ಜಾರ್ಖಂಡ್‌ನ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾರೆ. ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿನ ಕೆಲವು ಯೋಜನೆಗಳ […]
ಎಪಿಎಲ್ ಕಾರ್ಡ್ ವಿತರಣೆಗೆ ಚಾಲನೆ ನೀಡಲು ಆಹಾರ ಇಲಾಖೆ ನಿರ್ಧಾರ: ಜೂನ್ ನಿಂದ ಅರ್ಜಿ ಸಲ್ಲಿಕೆಗೆ ಅವಕಾಶ?
ಬೆಂಗಳೂರು: ಕಳೆದ ಒಂದೂವರೆ ವರ್ಷದಿಂದ ಸ್ಥಗಿತವಾಗಿದ್ದ ಎಪಿಎಲ್ ಕಾರ್ಡ್ ವಿತರಣೆಗೆ ಮರುಚಾಲನೆ ನೀಡಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರ್ಧರಿಸಿದೆ. ಜೂನ್ ತಿಂಗಳಲ್ಲಿ ಹೊಸ ಕಾರ್ಡ್‌ಗಳಿಗೆ ಅರ್ಜಿ ಆಹ್ವಾನಿಸಲು ಇಲಾಖೆ ತೀರ್ಮಾನಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಹೊಸ ಕಾರ್ಡ್‌ಗಾಗಿ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. ಅರ್ಜಿ ಸಲ್ಲಿಕೆಯ ವೆಬ್ ಪೋರ್ಟಲ್ ಅನ್ನು ಸುಮಾರು ಒಂದೂವರೆ ವರ್ಷದಿಂದಲೂ ಸ್ಥಗಿತಗೊಳಿಸಲಾಗಿತ್ತು. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಜೂನ್ ಮೊದಲ ವಾರದಲ್ಲಿ ವೆಬ್‌ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಕೆಗೆ ಅನುವು ಮಾಡಿಕೊಡಲಾಗುವುದು […]
ಮಂದಾರ್ತಿ: ನ್ಯೂ ಶ್ರೀ ಕಾಳಿಕಾಂಬಾ ಜ್ಯುವೆಲ್ಲರ್ಸ್ 20 ನೇ ವಾರ್ಷಿಕೋತ್ಸವ; ಪ್ರತಿ ಖರೀದಿ ಮೇಲೆ ಅತ್ಯಾಕರ್ಷಕ ಬಹುಮಾನಗಳು
ಮಂದಾರ್ತಿ: ಮಂದಾರ್ತಿ ನ್ಯೂ ಶ್ರೀ ಕಾಳಿಕಾಂಬಾ ಜ್ಯುವೆಲ್ಲರ್ಸ್ ತನ್ನ 20 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು, ಪ್ರತಿ ಖರೀದಿ ಮೇಲೆ ಅತ್ಯಾಕರ್ಷಕ ಬಹುಮಾನಗಳು ಲಭ್ಯ… ಬಂಪರ್ ಪ್ರೈಸ್: ಹೋಂಡಾ ಆಕ್ಟಿವಾ ಮೊದಲನೆ ಬಹುಮಾನ: 8 ಗ್ರಾಂ ಬಂಗಾರಎರಡನೇ ಬಹುಮಾನ: 4 ಗ್ರಾಂ ಬಂಗಾರಮೂರನೇ ಬಹುಮಾನ: 2 ಗ್ರಾಂ ಬಂಗಾರ 20 ಅತ್ಯಾಕರ್ಷಕ ಸಮಾಧಾನಕರ ಬಹುಮಾನಗಳು ಕೊಡುಗೆ ಮೇ 31 ರ ವರೆಗೆ ಮಾತ್ರ ಕರೆ: 9448296769/9900800537
ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳ ಮತದಾನಕ್ಕೆ ಕ್ಷಣಗಣನೆ: ಚುನಾವಣೆಯ ಬಿಸಿಯ ಜೊತೆಗೆ ಏರುತ್ತಿದೆ ಸೂರ್ಯನ ತಾಪ
ಬೆಂಗಳೂರು: ಒಂದೆಡೆ ಲೋಕಸಭಾ ಚುನಾವಣೆಯ (Loksabha Elections) ಬಿಸಿ ಮತ್ತೊಂದೆಡೆ ಬಿಸಿಯೇರುತ್ತಿರುವ ಭೂಮಿ ಇವೆರಡರ ಮಧ್ಯದಲ್ಲಿ ಹೈರಾಣಾಗಿರುವ ಜನರು. ನಾಳೆ ಮೂರನೇ ಹಂತದ ಮತದಾನ ನಡೆಯಲಿದ್ದು, ಮಂಗಳವಾರ ಬೆಳಿಗ್ಗೆ 7 ಗಂಟೆಯಿಂದ 14 ಕ್ಷೇತ್ರಗಳ ಮತದಾನ ಆರಂಭವಾಗುವ ಹಿನ್ನೆಲೆಯಲ್ಲಿ ಭಾನುವಾರ ಸಂಜೆ 6 ಗಂಟೆಯಿಂದ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಸೋಮವಾರ ಇಡೀ ದಿನ ಅಭ್ಯರ್ಥಿಗಳು ಮತ್ತು ಬೆಂಬಲಿಗರು ಮನೆ ಮನೆ ಪ್ರಚಾರ ನಡೆಸಲಿದ್ದಾರೆ. ಈ ಮಧ್ಯೆ ಮೇ 5 ರಿಂದ ಮೇ 7 ರ ಅವಧಿಯಲ್ಲಿ ಕರ್ನಾಟಕದ […]
ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್: ಯಾವುದೇ ಕ್ಷಣದಲ್ಲಿ ಶರಣಾಗತಿ ಸಾಧ್ಯತೆ
ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದ ತನಿಖೆಯ ನಡುವೆಯೇ ವಿದೇಶಕ್ಕೆ ಪಲಾಯನಗೈದಿರುವ ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಪೊಲೀಸರಿಗೆ ಶರಣಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. 33 ವರ್ಷದ ಪ್ರಜ್ವಲ್ ಭಾಗಿಯಾಗಿದ್ದಾರೆ ಎನ್ನಲಾದ ಸ್ಪಷ್ಟ ವಿಡಿಯೋ ತುಣುಕುಗಳು ಇತ್ತೀಚಿನ ದಿನಗಳಲ್ಲಿ ಹಾಸನದಲ್ಲಿ ಹರಿದಾಡುತ್ತಿದ್ದು, ಇದರ ಬೆನ್ನಲ್ಲೇ ಲೈಂಗಿಕ ದೌರ್ಜನ್ಯ ಆರೋಪಗಳ ತನಿಖೆ ಕುರಿತು ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ನಾವು ಕಾನೂನನ್ನು ನಂಬುತ್ತೇವೆ. […]