ಫೂಟ್‌ ಪ್ರಿಂಟ್ಸ್ 2024 – ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಈಶಾನ್ಯ ಭಾರತ ಮತ್ತು ಟಿಬೆಟ್‌ನ ಶ್ರೀಮಂತ ಸಂಸ್ಕೃತಿಗಳ ಆಚರಣೆ

ಬೆಂಗಳೂರು: ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಈಶಾನ್ಯ ಭಾರತ ಮತ್ತು ಟಿಬೆಟಿಯನ್ವಿದ್ಯಾರ್ಥಿಗಳ ವೇದಿಕೆ (NETSF) ಏಪ್ರಿಲ್ 13, 2024 ರಂದು ಭಾರತದ ಈಶಾನ್ಯ ಪ್ರದೇಶಮತ್ತು ಟಿಬೆಟ್‌ನ ಶ್ರೀಮಂತ ಮತ್ತು ವೈವಿಧ್ಯಮಯ ಸಂಸ್ಕೃತಿಗಳನ್ನು ವಾರ್ಷಿಕ ಕಾರ್ಯಕ್ರಮವಾದ ಫೂಟ್‌ಪ್ರಿಂಟ್ಸ್ 2024 ಮೂಲಕ ಆಯೋಜಿಸಿತ್ತು. ಕಾರ್ಯಕ್ರಮವು ಬ್ಯಾಂಡ್ ಬಾಯ್ಸ್ ಓವರ್ ಫ್ಲವರ್ಸ್ ಅವರ ಪ್ರದರ್ಶನದೊಂದಿಗೆಪ್ರಾರಂಭವಾಯಿತು, ನಂತರ ನಾಗಾಲ್ಯಾಂಡ್‌ನ ಮಿನೋಲಿ ಅವರ ಸೋಲೋ; ಕಿಕ್ಯೊಇರೋ ಬ್ಯಾಂಡ್‌ನ ಪ್ರದರ್ಶನ; ಸಿಕ್ಕಿಂ ಮತ್ತು ಡಾರ್ಜಿಲಿಂಗ್‌ನ ವಿದ್ಯಾರ್ಥಿಗಳ ಝ್ಯಾವ್ರೆ;ಟಿಬೆಟ್, ಲಡಾಖ್ ಮತ್ತು ಮಿಜೋರಾಂನ ವಿದ್ಯಾರ್ಥಿಗಳ ಸಾಂಪ್ರದಾಯಿಕ ಆಮ್ಡೋ, ತ್ಸಿ […]

ಹೆಜಮಾಡಿ: ಏ.21 ರಂದು ಅಂಚನ್ ಮೂಲಸ್ಥಾನದ ವಾರ್ಷಿಕೋತ್ಸವ

ಹೆಜಮಾಡಿ: ಇಲ್ಲಿನ ಅಂಚನ್ ಮೂಲಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವವು ಏ.21 ರಂದು ಜರಗಲಿದೆ. ಆ ಪ್ರಯುಕ್ತ ಅಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಹನೆ, ಪ್ರಧಾನ ಹೋಮ, ಆಶ್ಲೇಷ ಬಲಿ, ನವಕ ಕಲಶಾಭಿಷೇಕ ನಡೆಯಲಿದೆ. ಬಳಿಕ ನಾಗದೇವರ ದರ್ಶನ, ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ಮೂಲಸ್ಥಾನದ ಪ್ರಕಟಣೆ ತಿಳಿಸಿದೆ.

ಮತದಾನ ಜಾಗೃತಿ ಕುರಿತು ಸೋಷಿಯಲ್ ಮೀಡಿಯಾ ರೀಲ್ಸ್ ನಿರ್ಮಾಣ ಸ್ಪರ್ಧೆ

ಉಡುಪಿ: ಸಾರ್ವತ್ರಿಕ ಲೋಕಸಭಾ ಚುನಾವಣೆ -2024 ರ ಅಂಗವಾಗಿ ಮತದಾನ ಜಾಗೃತಿಯ ಕುರಿತು ಸೋಷಿಯಲ್ ಮೀಡಿಯಾ ರೀಲ್ಸ್ ನಿರ್ಮಾಣ ಸ್ಪರ್ಧೆ ಆಯೋಜಿಸಲಾಗಿದ್ದು, ಜಿಲ್ಲೆಯ ಆಸಕ್ತರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿರುತ್ತದೆ. ಸ್ಪರ್ಧೆಯು ಏಪ್ರಿಲ್ 19 ರಂದು ಬೆಳಗ್ಗೆ 10 ಗಂಟೆಗೆ ಆರಂಭವಾಗಿ ಮೇ 6 ರಂದು ಸಂಜೆ 5 ಗಂಟೆಗೆ ಮುಕ್ತಾಯಗೊಳ್ಳಲಿದೆ. ರೀಲ್ಸ್ ನಅವಧಿಯು ಕನಿಷ್ಠ 30 ಸೆಕೆಂಡ್‌ಗಳಿಂದ ಗರಿಷ್ಠ 1 ನಿಮಿಷದ ಒಳಗೆ ಇರಬೇಕು. ಒಬ್ಬ ಸ್ಪರ್ಧಿಗೆ ಒಂದು ರೀಲ್ಸಿಗೆ ಮಾತ್ರ ಅವಕಾಶವಿದ್ದು, ರೀಲ್ಸ್ […]

ಉಡುಪಿ: ಪುತ್ತೂರು ಗ್ರಾಮದ ಮಹಿಳೆ ನಾಪತ್ತೆ

ಉಡುಪಿ: ಉಡುಪಿ ತಾಲೂಕು ಪುತ್ತೂರು ಗ್ರಾಮದ ಸುಬ್ರಮಣ್ಯ ನಗರ ನಿವಾಸಿ ಮಹಾದೇವಿ (36) ಎಂಬ ಮಹಿಳೆಯು ಏಪ್ರಿಲ್ 12 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 135 ಸೆಂ.ಮೀ ಎತ್ತರ, ಸಾಧಾರಣ ಶರೀರ, ದುಂಡು ಮುಖ ಹೊಂದಿದ್ದು, ಕನ್ನಡ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.