ಹೆಜಮಾಡಿ: ಏ.21 ರಂದು ಅಂಚನ್ ಮೂಲಸ್ಥಾನದ ವಾರ್ಷಿಕೋತ್ಸವ

ಹೆಜಮಾಡಿ: ಇಲ್ಲಿನ ಅಂಚನ್ ಮೂಲಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವವು ಏ.21 ರಂದು ಜರಗಲಿದೆ. ಆ ಪ್ರಯುಕ್ತ ಅಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಹನೆ, ಪ್ರಧಾನ ಹೋಮ, ಆಶ್ಲೇಷ ಬಲಿ, ನವಕ ಕಲಶಾಭಿಷೇಕ ನಡೆಯಲಿದೆ. ಬಳಿಕ ನಾಗದೇವರ ದರ್ಶನ, ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ಮೂಲಸ್ಥಾನದ ಪ್ರಕಟಣೆ ತಿಳಿಸಿದೆ.