ಸಿದ್ಧಾಂಥ್ ಫೌಂಡೇಶನ್ ವತಿಯಿಂದ ಏಪ್ರಿಲ್ 15 ರಿಂದ ರಾಜ್ಯಮಟ್ಟದ ಉಚಿತ ಬೇಸಿಗೆ ಶಿಬಿರ ‘ವಿಕಸನ’ ಆರಂಭ
ಉಡುಪಿ: ಕಳೆದ ಹಲವಾರು ವರ್ಷಗಳಿಂದ ಹತ್ತನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗುವಂತೆ ಉಡುಪಿ, ಮಂಗಳೂರು, ಶಿವಮೊಗ್ಗ, ತೀರ್ಥಹಳ್ಳಿ ಹಾಗೂ ರಾಜ್ಯದ ವಿವಿಧ ಕಡೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುವ ಸಿದ್ಧಾಂಥ್ ಫೌಂಡೇಶನ್ (ರಿ.) ವತಿಯಿಂದ ಈ ಬಾರಿ ‘ವಿಕಸನ’ ಎನ್ನುವ ರಾಜ್ಯಮಟ್ಟದ ಉಚಿತ ಬೇಸಿಗೆ ಶಿಬಿರವು ಏಪ್ರಿಲ್ 15 ರಿಂದ 10 ದಿನಗಳ ಕಾಲ ಉಡುಪಿಯ ಅಂಬಲಪಾಡಿಯ ಶ್ರೀ ಜನಾರ್ಧನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ಹಾಗೂ ಮಂಗಳೂರಿನ ಯೆಯ್ಯಾಡಿಯ ಶ್ರೀ ರಾಮಾಶ್ರಮ ಪದವಿ […]
ಪೆರ್ಡೂರು:14 ನೇ ಶತಮಾನದ ಶಾಸನ ಅಧ್ಯಯನ
ಹಿರಿಯಡಕ: ಉಡುಪಿ ತಾಲ್ಲೂಕಿನ ಪೆರ್ಡೂರು ಗ್ರಾಮದ ಗೊರೆಲ್-ನೆಲ್ಯಾರುಬೆಟ್ಟು ಇಲ್ಲಿನ ಗುಲಾಬಿ ಮರಕಾಲ್ತಿ ಅವರ ಗದ್ದೆಯಲ್ಲಿ ಇರುವ ಶಾಸನವನ್ನು ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರ, ಉಡುಪಿ ಇದರ ಅಧ್ಯಯನ ನಿರ್ದೇಶಕ ಪ್ರೊ ಎಸ್.ಎ. ಕೃಷ್ಣಯ್ಯ, ಯು. ಕಮಲಾಬಾಯಿ ಪ್ರೌಢಶಾಲೆಯ ನಿವೃತ್ತ ಅಧ್ಯಾಪಕ ಕೆ. ಶ್ರೀಧರ್ ಭಟ್ ಹಾಗೂ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಇವರ ಮಾರ್ಗದರ್ಶನದಲ್ಲಿ ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜಿನ ತೃತೀಯ ಬಿ.ಎ ವಿದ್ಯಾರ್ಥಿಗಳಾದ ವಿಶಾಲ್ ರೈ ಕೆ ಮತ್ತು ದಿಶಾಂತ್ ದೇವಾಡಿಗ ಅಧ್ಯಯನಕ್ಕೆ ಒಳಪಡಿಸಿದ್ದಾರೆ. […]
ರಾಜ್ಯದಲ್ಲೆ ಅತಿ ಹೆಚ್ಚು ಆದಾಯ ಹೊಂದಿರುವ ದೇವಸ್ಥಾನ ಕುಕ್ಕೆ ಸುಬ್ರಮಣ್ಯ: 146.01 ಕೋಟಿ ರೂ. ಆದಾಯ
ಬೆಳ್ತಂಗಡಿ: ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು 2023-24ನೇ ಆರ್ಥಿಕ ವರ್ಷದಲ್ಲಿ 146.01 ಕೋಟಿ ರೂ. ಆದಾಯ ಗಳಿಸಿದೆ ಎಂದು ದತ್ತಿ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ. ಈ ಮೂಲಕ ಸತತ 13ನೇ ವರ್ಷ ಆದಾಯದಲ್ಲಿ ರಾಜ್ಯದ ಮೊದಲ ದೇವಸ್ಥಾನವಾಗಿದೆ. ಕಳೆದ ವರ್ಷ ದೇವಳವು 123 ಕೋಟಿ ಆದಾಯ ಗಳಿಸಿತ್ತು. ರಾಜ್ಯ ಧರ್ಮದಾಯ ದತ್ತಿ ಇಲಾಖೆ ವ್ಯಾಪ್ತಿಯ ಕೊಲ್ಲೂರು ಮೂಕಾಂಬಿಕಾ ದೇವಳ 68.23 ಕೋಟಿ, ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ 30.73 ಕೋಟಿ, ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನ 25.80 ಕೋಟಿ, ಮಂದಾರ್ತಿ […]
ಗೃಹರಕ್ಷಕ ವಿಜಯ್ ಕುಮಾರ್ ಪೂಜಾರಿ ಇವರಿಗೆ ಬೆಳ್ಳಿ ಪದಕ
ಬ್ರಹ್ಮಾವರ: ಜಿಲ್ಲೆಯ ಬ್ರಹ್ಮಾವರ ಘಟಕದ ಗೃಹರಕ್ಷಕ ವಿಜಯ್ ಕುಮಾರ್ ಪೂಜಾರಿ ಅವರು ಏ. 1 ರಿಂದ 6 ರ ವರೆಗೆ ಬೆಂಗಳೂರಿನ ಗೃಹರಕ್ಷಕ ಮತ್ತು ಪೌರರಕ್ಷಣಾ ತರಬೇತಿ ಅಕಾಡೆಮಿ ಕೇಂದ್ರದಲ್ಲಿ ನಡೆದ ರಾಜ್ಯ ಮಟ್ಟದ ಗೃಹರಕ್ಷಕರ ನಿಸ್ತಂತು ಚಾಲನಾ ತರಬೇತಿಯಲ್ಲಿ ಬೆಳ್ಳಿಯ ಪದಕವನ್ನು ಪಡೆದಿರುತ್ತಾರೆ.