ಸಿದ್ಧಾಂಥ್ ಫೌಂಡೇಶನ್ ವತಿಯಿಂದ ಏಪ್ರಿಲ್ 15 ರಿಂದ ರಾಜ್ಯಮಟ್ಟದ ಉಚಿತ ಬೇಸಿಗೆ ಶಿಬಿರ ‘ವಿಕಸನ’ ಆರಂಭ

ಉಡುಪಿ: ಕಳೆದ ಹಲವಾರು ವರ್ಷಗಳಿಂದ ಹತ್ತನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗುವಂತೆ ಉಡುಪಿ, ಮಂಗಳೂರು, ಶಿವಮೊಗ್ಗ, ತೀರ್ಥಹಳ್ಳಿ ಹಾಗೂ ರಾಜ್ಯದ ವಿವಿಧ ಕಡೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುವ ಸಿದ್ಧಾಂಥ್ ಫೌಂಡೇಶನ್ (ರಿ.) ವತಿಯಿಂದ ಈ ಬಾರಿ ‘ವಿಕಸನ’ ಎನ್ನುವ ರಾಜ್ಯಮಟ್ಟದ ಉಚಿತ ಬೇಸಿಗೆ ಶಿಬಿರವು ಏಪ್ರಿಲ್ 15 ರಿಂದ 10 ದಿನಗಳ ಕಾಲ ಉಡುಪಿಯ ಅಂಬಲಪಾಡಿಯ ಶ್ರೀ ಜನಾರ್ಧನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ಹಾಗೂ ಮಂಗಳೂರಿನ ಯೆಯ್ಯಾಡಿಯ ಶ್ರೀ ರಾಮಾಶ್ರಮ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಹತ್ತನೇ ತರಗತಿ ಪರೀಕ್ಷೆ ನಂತರ ವಿದ್ಯಾರ್ಥಿಗಳಿಗೆ ಮುಂದಿನ ಅವಕಾಶ, ಆಸಕ್ತಿ, ಸ್ಪರ್ಧಾತ್ಮಕ ಜಗತ್ತಿನ ಮಾಹಿತಿ ನೀಡುವುದರೊಂದಿಗೆ ವಿಶಿಷ್ಟವಾಗಿ ಶಿಬಿರವು ಆಯೋಜನೆಯಾಗಿದೆ.

ಶಿಬಿರದ ವಿಶೇಷತೆ

  1. ಪ್ರಭಾವಿ ತಜ್ಞರಿಂದ ಆಯ್ದ ವಿಷಯಗಳ ಕುರಿತು ವಿಚಾರ ವಿನಿಮಯ.
  2. ಶೈಕ್ಷಣಿಕ ಕ್ಷೇತ್ರದಲ್ಲಿ ಕಲಿಕೆಯ ಹೊಸ ವಿಧಾನಗಳ ಪರಿಚಯ.
  3. ಹಾಡು, ನಾಟಕ ,ಚಿತ್ರಕಲೆ, ಕರಕುಶಲ ತರಬೇತಿ, ಮಾತುಗಾರಿಕೆ, ನಿರೂಪಣೆ, ಮುಂತಾದ ಲಲಿತ ಕಲೆಗಳ ಮುಖಾಂತರ ಬದುಕಿನ ಮೌಲ್ಯಗಳ ವೃದ್ಧಿ.
  4. ಹುಡುಗಿಯರು ಹಾಗೂ ಹುಡುಗರಿಗೆ ಪ್ರತ್ಯೇಕ ವಸತಿ ಸೌಲಭ್ಯ.
  5. ಚಾರಣ, ಸಮುದ್ರ ತೀರ ಬೇಟಿಯಂತಹ ಹೊರ ಜಗತ್ತಿನೊಂದಿಗೆ ಸಂಪರ್ಕ.
  6. ಚಟುವಟಿಕೆಗಳ ಮೂಲಕ ವಿಷಯಗಳ ಸಂಪೂರ್ಣ ಅರ್ಥೈಸುವಿಕೆ.

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯನ್ನು ಕೇಂದ್ರೀಕೃತವಾಗಿಸಿ ನಡೆಯುವ ಶಿಬಿರಕ್ಕೆ ಆಸಕ್ತ ವಿದ್ಯಾರ್ಥಿಗಳು http://tiny.cc/vikasana ಮೂಲಕ ನೋಂದಾಯಿಸಿಕೊಳ್ಳಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.