ಪಾದೂರಿನಲ್ಲಿ 18.3 ಮಿಲಿಯನ್ ಬ್ಯಾರೆಲ್‌ಗಳ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಸ್ಥಾಪಿಸಲು ಯೋಜನೆ

ನವದೆಹಲಿ: 2029-30ರ ವೇಳೆಗೆ ಭಾರತವು ತನ್ನ ಮೊದಲ ಖಾಸಗಿಯಾಗಿ ನಿರ್ವಹಿಸಲ್ಪಡುವ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ (SPR) ಅನ್ನು ನಿರ್ಮಿಸಲು ಯೋಜಿಸಿದ್ದು, ಇದು ಭಾರತದಲ್ಲಿ ಶೇಖರಿಸಿದ ಎಲ್ಲಾ ತೈಲವನ್ನು ವ್ಯಾಪಾರ ಮಾಡುವ ಸ್ವಾತಂತ್ರ್ಯವನ್ನು ನೀಡುತ್ತದೆ ಎಂದು ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ (ISPRL) ನ ಮುಖ್ಯ ಕಾರ್ಯನಿರ್ವಾಹಕರು ತಿಳಿಸಿದ್ದಾರೆ. ಕೊರತೆಯ ಸಂದರ್ಭದಲ್ಲಿ ತೈಲದ ಮೊದಲ ಹಕ್ಕನ್ನು ಸರ್ಕಾರ ಹೊಂದಿರುತ್ತದೆ ಎಂದು ಐಎಸ್‌ಪಿಆರ್‌ಎಲ್ ಮುಖ್ಯ ಕಾರ್ಯನಿರ್ವಾಹಕ ಎಲ್.ಆರ್. ಜೈನ್ ಹೇಳಿದ್ದಾರೆ. ಭಾರತವು ಎರಡು ಹೊಸ ಎಸ್‌ಪಿಆರ್‌ಗಳನ್ನು ನಿರ್ಮಿಸಲು ಯೋಜಿಸಿದೆ. […]

ಪರ್ಕಳ: ಮೀನು ಖಾದ್ಯ ಮತ್ತು ನಾಟಿ ಕೋಳಿ ಪ್ರೇಮಿಗಳಿಗಾಗಿ ‘ಹೋಟೆಲ್ ತುಳುನಾಡು’ ಶುಭಾರಂಭ

ಪರ್ಕಳ: ತುಳುನಾಡಿನ ಜನರಿಗೆ ಮೀನು ಹಾಗೂ ನಾಟಿ ಕೋಳಿ ಎಂದರೆ ಸಾಕು ಬಾಯಲ್ಲಿ ನೀರೂರುತ್ತದೆ. ಮೀನು-ಕೋಳಿ ಪ್ರಿಯರಿಗಾಗಿ ಪರ್ಕಳ ಬಸ್ ನಿಲ್ದಾಣದ ಬಳಿ ಏ.9 ರಂದು ಹೊಸದಾಗಿ ಪ್ರಾರಂಭವಾಗಲಿದೆ ‘ಹೋಟೆಲ್ ತುಳುನಾಡು’. ಬಾಳೆ ಎಲೆ ಮೀನು ಊಟ. ಶುದ್ದ ತೆಂಗಿನ ಎಣ್ಣೆಯಲ್ಲಿ ತಯಾರಿಸಲಾಗುವ ಅಡುಗೆ ಖಾದ್ಯಗಳು ಲಭ್ಯ. ಬೆಳಿಗ್ಗೆ 11 ರಿಂದ ಸಂಜೆ 4.30 ರವರೆಗೆ ತೆರೆದಿರುತ್ತದೆ. ಹೋಂ ಡೆಲಿವರಿ ಸೌಲಭ್ಯವಿದೆ. ಸಂಪರ್ಕ: 9606735984

ವಿಜಯಪುರ: ಕೊಳವೆ ಬಾವಿಗೆ ಬಿದ್ದಿದ್ದ ಎರಡು ವರ್ಷದ ಬಾಲಕನನ್ನು ಯಶಸ್ವಿಯಾಗಿ ಹೊರತೆಗೆದ ರಕ್ಷಣಾ ತಂಡ

ವಿಜಯಪುರ: ಆಟವಾಡುತ್ತಿದ್ದಾಗ ತೆರೆದ ಕೊಳವೆಬಾವಿಗೆ ಬಿದ್ದಿದ್ದ ಎರಡು ವರ್ಷದ ಮಗು ಸಾತ್ವಿಕ್ ಮುಜಗೊಂಡ್ ನನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. 16 ಅಡಿ ಆಳದ ಕೊಳವೆಬಾವಿಯಲ್ಲಿ 18 ಗಂಟೆಗೂ ಹೆಚ್ಚು ಕಾಲ ಮಗು ಸಿಲುಕಿಕೊಂಡಿತ್ತು. ಇಂಡಿ ತಾಲೂಕಿನ ಲಚಯ್ಯನ ಗ್ರಾಮದಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿತ್ತು. ಮಾಹಿತ ತಿಳಿದ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದರು ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿ ಪೈಪ್‌ಲೈನ್ ಮೂಲಕ ಪುಟ್ಟ ಮಗುವಿಗೆ ಆಮ್ಲಜನಕವನ್ನು ಪೂರೈಸಿದ್ದರು. ಕ್ಯಾಮೆರಾ ಮೂಲಕ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಯ […]

ಬಿಜೆಪಿ ಅಭ್ಯರ್ಥಿ ಬೃಜೇಶ್‌ಗೆ ದೇಣಿಗೆ ನೀಡಿದ ಮಹಿಳೆಯರು: ಗೆಲುವಿಗೆ ಹಾರೈಕೆ

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬೃಜೇಶ್ ಚೌಟ ಗುರುವಾರ ನಾಮಪತ್ರ ಸಲ್ಲಿಸಲಿದ್ದು, ನಗರದ ಕೆಲ ಮಹಿಳೆಯರು ಅವರಿಗೆ ದೇಣಿಗೆ ನೀಡಿ, ಬುಧವಾರ ಶುಭ ಹಾರೈಸಿದರು. ಹೂವಿನ ವ್ಯಾಪಾರಿ ಯಶೋದಾ ಪಂಪ್‌ವೆಲ್‌, ಮೀನು ಮಾರಾಟ ಮಾಡುವ ಲಲಿತಾ ಪುರುಷೋತ್ತಮ್, ಸ್ಟೇಟ್‌ಬ್ಯಾಂಕ್‌ನಲ್ಲಿ ಒಣಮೀನು ವ್ಯಾಪಾರ ಮಾಡುವ ಕಲಾವತಿ, ಅನಸೂಯ, ಪೂರ್ಣಿಮಾ, ಶಾಂಭವಿ, ಕಾರ್ಮಿಕರಾದ ರಾಧಾ, ಬೀದಿ ನಾಯಿಗಳಿಗೆ ಆಹಾರ ಹಾಕುವ ರಜನಿ ಶೆಟ್ಟಿ ಮುಂತಾದವರು ಪಕ್ಷದ ಚುನಾವಣಾ ಕಚೇರಿಯಲ್ಲಿ ಅಭ್ಯರ್ಥಿಗೆ ಆರತಿ ಬೆಳಗಿ, ತಿಲಕ ಇಟ್ಟು, […]

ಆಸ್ತಿ ವಿವರ ಬಹಿರಂಗ ಪಡಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ನವದೆಹಲಿ: ವಯನಾಡ್ ಸಂಸದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಬುಧವಾರದಂದು ಕೇರಳದ ವಯನಾಡ್ ಕ್ಷೇತ್ರದಿಂದ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದ್ದು, ತಮ್ಮ ಆಸ್ತಿ ವಿವರಗಳನ್ನು ಬಹಿರಂಗ ಪಡಿಸಿದ್ದಾರೆ. ರಾಹುಲ್ ಗಾಂಧಿ ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ರಾಹುಲ್ ಬಳಿ 4.3 ಕೋಟಿ ರೂ ಮೌಲ್ಯದ ಷೇರು ಮಾರುಕಟ್ಟೆ ಹೂಡಿಕೆ, 3.81 ಕೋಟಿ ರೂ ನ ಮ್ಯೂಚುವಲ್ ಫಂಡ್ ಠೇವಣಿ ಮತ್ತು ಬ್ಯಾಂಕ್ ಖಾತೆಯಲ್ಲಿ 26.25 ಲಕ್ಷ ರೂ. ಹೊಂದಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. 2022-23ರ […]