ಮಂಗಳೂರು: ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿ ಆತ್ಮಹತ್ಯೆಗೆ ಯತ್ನ
ಮಂಗಳೂರು: ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿಯೋರ್ವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು (ಎ. 2) ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಂಭವಿಸಿದೆ. ಆತ್ಮಹತ್ಯೆಗೆ ಯತ್ನಿಸಿದ ಸಿಬ್ಬಂದಿಯನ್ನು ಶ್ರೀಧರ್ ಹೆಗಡೆ ಎನ್ನಲಾಗಿದ್ದು. ನಗರದ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿರುವ ಏಕಗವಾಕ್ಷಿ ಪದ್ದತಿ ತಂಡದ ಸದಸ್ಯರಾಗಿದ್ದರು. 2019ರಿಂದ ಬೆಳ್ತಂಗಡಿಯ ಕಡಿರುದ್ಯಾವರ ಪಂಚಾಯಿತಿ ವ್ಯಾಪ್ತಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಇವರ ಜಾಗಕ್ಕೆ ಮತ್ತೊಬ್ಬರು ವರ್ಗಾವಣೆಯಾದ ಹಿನ್ನಲೆಯಲ್ಲಿ ಕಳೆದ ಫೆಬ್ರವರಿಯಿಂದ ಸ್ಥಳ ನಿರೀಕ್ಷಣೆಯಲ್ಲಿದ್ದರು. ವೈಯಕ್ತಿಕ ಕಾರಣಗಳಿಂದ ಇಂದು ಆತ್ಮಹತ್ಯೆಗೆ ಯತ್ನಿಸಿದ ಇವರನ್ನು ಕೂಡಲೇ ವೆನ್ […]
ಅಬಕಾರಿ ಹಗರಣ ಪ್ರಕರಣ: ತಿಹಾರ್ ಜೈಲು ನಂ 2 ರಲ್ಲಿ ಅರವಿಂದ್ ಕೇಜ್ರಿವಾಲ್; ಏ.15 ರವರೆಗೆ ನ್ಯಾಯಾಂಗ ಬಂಧನ
ದೆಹಲಿ: ಅಬಕಾರಿ ಹಗರಣದಲ್ಲಿ ಇಡಿ ಸಂಸ್ಥೆಯಿಂದ ಬಂಧನಕ್ಕೊಳಗಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ವಿಚಾರಣಾಧೀನ ಕೈದಿಯಾಗಿ ತಿಹಾರ್ ಜೈಲು ನಂ. 2 ರಲ್ಲಿ ಏ.15 ರವರೆಗೆ ನ್ಯಾಯಾಂಗ ಬಂಧನದಲ್ಲಿರಲಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜೈಲು ನಂ. 1 ರಲ್ಲಿ, ಇತರ ಸಚಿವರು ಜೈಲು ಸಂಖ್ಯೆ 7 ರಲ್ಲಿ, ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಜೈಲು ಸಂಖ್ಯೆ 5 ರಲ್ಲಿ ಅದಾಗಲೇ ಬಂಧನದಲ್ಲಿದ್ದಾರೆ. ಈ ಮಧ್ಯೆ ಕೇಜ್ರಿವಾಲ್ ಐದು ಬೇಡಿಕೆಗಳನ್ನಿಟ್ಟಿದ್ದಾರೆ. […]
ಮಧ್ವ ವಾದಿರಾಜ ಮಹಾವಿದ್ಯಾಲಯದಲ್ಲಿ ಮಾದಕ ವ್ಯಸನ ಮತ್ತು ಆ್ಯಂಟಿ ರ‍್ಯಾಗಿಂಗ್ ಕುರಿತು ಜಾಗೃತಿ ಕಾರ್ಯಾಗಾರ
ಉಡುಪಿ: ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕೌನ್ಸೆಲಿಂಗ್ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯು ಜಂಟಿಯಾಗಿ “ಮಾದಕ ವ್ಯಸನ ಮತ್ತು ಆ್ಯಂಟಿ ರ‍್ಯಾಗಿಂಗ್” ಕುರಿತು ಜಾಗೃತಿ ಕಾರ್ಯಾಗಾರವನ್ನು ಇತ್ತೀಚಿಗೆ ಕಾಲೇಜಿನ ಆವರಣದಲ್ಲಿ ಆಯೋಜಿಸಿತ್ತು. ಮಲ್ಪೆ ಅಪರಾಧ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ ಪ್ರಮೋದ್ ಕುಮಾರ್, ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ಮಾದಕ ವ್ಯಸನವು ವ್ಯಕ್ತಿಯ ಜೀವನವನ್ನು ಹೇಗೆ ನಾಶಪಡಿಸುತ್ತದೆ ಮತ್ತು ಮಾದಕ ವ್ಯಸನದಿಂದಾಗಿ ವ್ಯಕ್ತಿಗೆ ಮಾತ್ರವಲ್ಲದೆ ಸಮಾಜಕ್ಕೆ ಉಂಟಾಗಬಹುದಾದಂತ ದುಷ್ಪರಿಣಾಮದ ಬಗ್ಗೆ ಮಾಹಿತಿ ನೀಡಿದರು ಮತ್ತು […]
ಕರ್ನಾಟಕ ಜಲಸಾರಿಗೆ ಮಂಡಳಿ ವತಿಯಿಂದ ನಾಗರಾಜ ಆರ್ ಅವರಿಗೆ ಬಿಳ್ಕೋಡುಗೆ ಕಾರ್ಯಕ್ರಮ
ಉಡುಪಿ: ಕರ್ನಾಟಕ ಸರಕಾರ ಮೂಲ ಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಕರ್ನಾಟಕ ಜಲಸಾರಿಗೆ ಮಂಡಳಿ ಉಪ ವಿಭಾಗ ಉಡುಪಿ ಇದರ ವತಿಯಿಂದ ಕಾರ್ಯನಿರ್ವಾಹಕ ಇಂಜಿನಿಯರ್ ನಾಗರಾಜ ಆರ್ ಇವರ ಬಿಳ್ಕೋಡುಗೆ ಸಮಾರಂಭ ಶನಿವಾರ ಹೋಟೆಲ್ ಕಾರ್ತಿಕ್ ಎಸ್ಟೇಟ್ ಸಭಾಂಗಣದಲ್ಲಿ ಜರಗಿತು. ಮಂಗಳೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜೇಶ್, ಗುತ್ತಿಗೆದಾರ ಸಂಘದ ಶ್ರೀನಾಥ್ , ಸಹಾಯಕ ಇಂಜಿನಿಯರ್ ಭಾನುಪ್ರಕಾಶ್, ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು, ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು. ನಿಧಿ ಪೈ ನಿರೂಪಿಸಿದರು.
ಪುತ್ತೂರು: ಹರ್ಷ ಗೋದಾಮಿನಲ್ಲಿ ಆಕಸ್ಮಿಕ ಬೆಂಕಿ ಅವಘಡ; ಕೋಟ್ಯಂತರ ರೂ ನಷ್ಟ
ಪುತ್ತೂರು: ಇಲ್ಲಿನ ಹೆಸರಾಂತ ಗೃಹಪಯೋಗಿ ಉಪಕರಣ ಮಾರಾಟ ಮಳಿಗೆ ಹರ್ಷ ಶೋ ರೂಂ ನ ಗೋದಾಮಿನಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ಮಂಗಳವಾರ ನಸುಕಿನ ಜಾವ ದರ್ಭೆ ಎಂಬಲ್ಲಿ ನಡೆದಿದೆ. ಪುತ್ತೂರು – ದರ್ಭೆ ಮುಖ್ಯ ರಸ್ತೆಯಲ್ಲಿರುವ ಸಂತೃಪ್ತಿ ಹೋಟೇಲ್ ನ ಹಿಂಭಾಗ ಹರ್ಷಾ ಶೋ ರೂಂ ನ ಗೋದಾಮಿನಲ್ಲಿ ಕೋಟ್ಯಂತರ ಮೌಲ್ಯದ ಎಲೆಕ್ಟ್ರಾನಿಕ್ಸ್ ಹಾಗೂ ಗೃಹಪಯೋಗಿ ವಸ್ತುಗಳನ್ನು ಶೇಖರಿಸಿಡಲಾಗಿತ್ತು. ಇಂದು ನಸುಕಿನ ಜಾವ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಗೋದಾಮಿನ ಒಳಗಿದ್ದ ವಸ್ತುಗಳು ಹೊತ್ತಿ ಉರಿಯುತ್ತಿದ್ದ ತೀವ್ರತೆಗೆ […]