ಜಿಲ್ಲೆಯ ಪ್ರತಿಯೊಬ್ಬ ಅರ್ಹ ಮತದಾರರು ಮತದಾನ ಕೇಂದ್ರಕ್ಕೆ ತೆರಳಿ ಮತ ಚಲಾಯಿಸಲು ಅಗತ್ಯ ಕ್ರಮವಹಿಸಿ: ಸಿ.ಇ.ಓ ಪ್ರತೀಕ್ ಬಾಯಲ್

ಉಡುಪಿ: ಜಿಲ್ಲೆಯ ಪ್ರತಿಯೊಬ್ಬ ಅರ್ಹ ಮತದಾರರು ಮತದಾನ ಕೇಂದ್ರಕ್ಕೆ ಹೋಗಿ ಮತ ಚಲಾಯಿಸಲು ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಮತದಾನದಲ್ಲಿ ಭಾಗವಹಿಸಿ, ಮತದಾನ ಮಾಡಲು ಉತ್ತೇಜಿಸುವ ಸಲುವಾಗಿ ವಿವಿಧ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಪ್ರತೀಕ್ ಬಾಯಲ್ ಹೇಳಿದರು. ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ನ ಡಾ.ವಿ. ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಸ್ವೀಪ್ ಸಮಿತಿ ಸಭೆಯ […]

ಲೋಕಸಭಾ ಚುನಾವಣೆ: ಜಿಲ್ಲೆಯಲ್ಲಿ ಒಬ್ಬರು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಉಡುಪಿ: ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ಕ್ಕೆ ಸಂಬಂದಿಸಿದಾಂತೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಇಂದು ಪಕ್ಷೇತರ ಅಭ್ಯರ್ಥಿಯಾಗಿ ವಿಜಯಕುಮಾರ್ ಎಂ.ಜಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಲು ಏಪ್ರಿಲ್ 4 ಕೊನೆಯ ದಿನಾಂಕವಾಗಿದ್ದು, ಏಪ್ರಿಲ್ 5 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 8 ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದೆ.

ಮಣಿಪಾಲ: ಖಾಸಗಿ ಬಸ್ಸಿನ ಡ್ಯಾಶ್ ಬಾಕ್ಸ್ ನಲ್ಲಿದ್ದ 96,500 ರೂ. ನಗದು ಎಗರಿಸಿದ ಕ್ಲೀನರ್

ಮಣಿಪಾಲ: ಇಲ್ಲಿನ ಶಿವಳ್ಳಿ ಗ್ರಾಮದ ಖಾಸಗಿ ಬಸ್ಸಿನ ಡ್ಯಾಶ್ ಬಾಕ್ಸ್ ನಲ್ಲಿ ಡೀಸೆಲ್ ಗೆಂದು ಇಟ್ಟಿದ ಭಾರಿ ಮೊತ್ತದ ಹಣ ಕಳವಾದ ಪ್ರಕರಣ ಬೆಳಕಿಗೆ ಬಂದಿದೆ. ಏಪ್ರಿಲ್ 1 ರಂದು ಮದ್ಯಾಹ್ನದ ವೇಳೆ ಸುಮಾರು 2 ರಿಂದ 3 ಗಂಟೆಯ ಆಸುಪಾಸು ನಿಲ್ಲಿಸಿದ್ದ ಬಸ್ಸಿನ ಡ್ಯಾಶ್ ಬಾಕ್ಸ್ ನಲ್ಲಿದ ಸುಮಾರು 96,500 ರೂ. ನಗದು ಹಣವನ್ನು ಬಸ್ ನ ಕ್ಲೀನರ್ ಅರುಣ್ ಸಜ್ಜನ್ ರಾಜ್ ಕಳ್ಳತನ ಮಾಡಿರುವುದಾಗಿ ಶಿವಳ್ಳಿ ಗ್ರಾಮದ ಶ್ರೀಕಾಂತ್ ರಾವ್ ಮಣಿಪಾಲ ಠಾಣೆಯಲ್ಲಿ ದೂರು […]

ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಕಿಶನ್ ಹೆಗ್ಡೆ ಕೊಳ್ಕೆಬೈಲು ನೇಮಕ

ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಕಿಶನ್ ಹೆಗ್ಡೆ ಕೊಳ್ಕೆಬೈಲು ಅವರನ್ನು ನೇಮಿಸಿ ಅಖಿಲ ಭಾರತ ಕಾಂಗ್ರೆಸ್ ಪಕ್ಷ ಆದೇಶ ಹೊರಡಿಸಿದೆ. ಪಕ್ಷದ ಉಪಾಧ್ಯಕ್ಷರಾಗಿ ಸೇವೆಸಲ್ಲಿಸುತ್ತಿದ್ದ ಕಿಶನ್ ಹೆಗ್ಡೆ ಕಳೆದ ಒಂದು ವರ್ಷದ ಹಿಂದೆ ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದರು. ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವ ಸಮಯದಲ್ಲಿ ಕಾಂಗ್ರೆಸ್ ಪಕ್ಷವು ಹೊಸ ಅಧ್ಯಕ್ಷರನ್ನು ಘೋಷಣೆ ಮಾಡಿದ್ದು, ನೂತನ ಅಧ್ಯಕ್ಷರು ಪಕ್ಷವನ್ನು ಸಂಘಟಿಸಿ ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ.

ಹೆಬ್ರಿ: ಬರೋಬ್ಬರಿ 15 ಅಡಿ ಉದ್ದ 12.50 ಕೆಜಿ ತೂಕದ ಕಾಳಿಂಗ ಸರ್ಪ ಪತ್ತೆ; ಇದು ಕಾಳಿಂಗ ಸರ್ಪಗಳ ಸಂತಾನೋತ್ಪತ್ತಿ ಸಮಯ

ಹೆಬ್ರಿ: ಬರೋಬ್ಬರಿ 15 ಅಡಿ ಉದ್ದದ 12.5 ಕೆಜಿ ತೂಕದ ಕಾಳಿಗ ಸರ್ಪವೊಂದು ಹೆಬ್ರಿ ತಾಲೂಕಿನ ನಾಡ್ಪಾಲ್ ಗ್ರಾಮದಲ್ಲಿ ಕಾಣಸಿಕ್ಕಿದೆ. ಹೆಬ್ರಿಯ ಸೀತಾ ನದಿ ತೀರದಲ್ಲಿರುವ ಭಾಸ್ಕರ್​ ಶೆಟ್ಟಿ ಎಂಬವರ ಮನೆಯ ಸಮೀಪ ಕಾಳಿಂಗವೊಂದು ಪ್ರತ್ಯಕ್ಷವಾಗಿದೆ. ಇದರ ಬಗ್ಗೆ ಮಾಹಿತಿ ಪಡೆದ ಉರಗತಜ್ಞ ಡಾ.ಗೌರಿ ಶಂಕರ್ ತಮ್ಮ ಸಹೋದ್ಯೋಗಿಗಳ ಜೊತೆಗೆ ಸ್ಥಳಕ್ಕೆ ತೆರಳಿದ್ದಾರೆ. ತೋಡಿಗೆ ಹಾಕುವ ದೊಡ್ಡ ಪೈಪ್​ನಡಿಯಲ್ಲಿ ಕಾಳಿಂಗ ಪತ್ತೆಯಾಗಿದೆ. ಡಾ. ಗೌರಿ ಶಂಕರ್ ಆಗುಂಬೆಯ ಕಾಳಿಂಗ ಮನೆಯಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಕಾಳಿಂಗ ಸರ್ಪಗಳ ವಂಶಾವಳಿಯ […]