ಹಿರಿಯಡ್ಕ: ಕಾರು ಡಿಕ್ಕಿ; ಬೈಕ್ ಸವಾರನಿಗೆ ಗಾಯ
ಹಿರಿಯಡ್ಕ: ಕಾರು ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡ ಘಟನೆ ಆತ್ರಾಡಿ ಸಮೀಪದ ಸ್ವಾಗತ ಗೋಪುರ ಬಳಿ ಶನಿವಾರ ನಡೆದಿದೆ. ಉಡುಪಿ ಕಡೆಯಿಂದ ವೇಗವಾಗಿ ಚಲಿಸುತ್ತಿದ್ದ ಕಾರೊಂದು ಬೈಕ್ ಗೆ ಡಿಕ್ಕಿಹೊಡೆದ ಪರಿಣಾಮ ಮಂದಾರ್ತಿ ಮೂಲದ ಮಹಾಬಲ (60) ಎಂಬವರ ತಲೆ ಕುತ್ತಿಗೆ ಮತ್ತು ಕಾಲಿನ ಭಾಗಗಳಿಗೆ ಪೆಟ್ಟು ಬಿದ್ದಿದ್ದು, ಕೂಡಲೇ ಸ್ಥಳೀಯರು ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ: ‘ಸ್ಟಾರ್ ಮ್ಯೂಸಿಕ್ ಕೋಸ್ಟಲ್ ಸ್ಟುಡಿಯೋ’ ಉದ್ಘಾಟನೆ
ಉಡುಪಿ: ಸುಮಧುರ ಸಂಗೀತಕ್ಕೆ ಮನುಷ್ಯನ ಎಲ್ಲಾ ದುಃಖಗಳನ್ನು ದೂರ ಮಾಡುವ ಶಕ್ತಿ ಇದೆ. ಸಂಗೀತ ಅಭ್ಯಾಸದಿಂದ ಆರೋಗ್ಯ ವೃದ್ಧಿಯಾಗಿ ನೆಮ್ಮದಿ ದೊರೆಯುತ್ತದೆ. ಕಲೆಗಾರ ಬದುಕಿದರೆ ಕಲೆ ಉಳಿಯುತ್ತದೆ. ಯುವ ಬಾಲ ಪ್ರತಿಭೆಗಳನ್ನು ಸಂಸ್ಥೆ ಪೋಷಿಸಲಿ ಎಂದು ಉಡುಪಿ ಕಡಿಯಾಳಿಯಲ್ಲಿ ನೂತನವಾಗಿ ಆರಂಭಗೊಂಡ ಹವಾನಿಯಂತ್ರಿತ ‘ಸ್ಟಾರ್ ಮ್ಯೂಸಿಕ್ ಕೋಸ್ಟಲ್ ಸ್ಟುಡಿಯೋ’ ಉದ್ಘಾಟಿಸಿ ಕಿಶೋರ್ ಕುಮಾರ್ ಅಭಿಪ್ರಾಯಪಟ್ಟರು. ಸಂಗೀತ ವಿದ್ವಾನ್ ಗುರುದಾಸ್ ಶೆಣೈ ಮಾತನಾಡಿ, ಹಿಂದೂಸ್ತಾನಿ, ಕರ್ನಾಟಕ, ಶಾಸ್ತ್ರೀಯ ಸಂಗೀತದ ಕಲೆಯ ಬೆಳವಣಿಗೆಗೆ ಆಧುನಿಕ ಶೈಲಿಯ ಸ್ಟುಡಿಯೋದ ಅಗತ್ಯದ ಬಗ್ಗೆ […]
ತ್ರಿಶಾ ಕ್ಲಾಸಸ್: ಸಿ.ಎ ಇಂಟರ್ಮೀಡಿಯೇಟ್ ಪೂರ್ವಸಿದ್ಧತಾ ಪರೀಕ್ಷೆ ಹಾಗೂ ಸಿ.ಎ ಫೌಂಡೇಶನ್ ರಿವಿಶನ್ ತರಗತಿಗಳು ಆರಂಭ
ಉಡುಪಿ: ಕಾಮರ್ಸ್ ವಿಭಾಗದಲ್ಲಿ ವೃತ್ತಿಪರ ಶಿಕ್ಷಣಕ್ಕೆ ಹೆಸರಾದ ತ್ರಿಶಾ ಕ್ಲಾಸಸ್ ವತಿಯಿಂದ ಮೇ ತಿಂಗಳಲ್ಲಿ ಸಿ.ಎ ಇಂಟರ್ಮೀಡಿಯೇಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪೂರ್ವಸಿದ್ಧತಾ ಪರೀಕ್ಷೆಯು (Mock Test) ಏಪ್ರಿಲ್ 3 ರಿಂದ ಆರಂಭವಾಗಲಿದೆ. ಇಂಟರ್ಮೀಡಿಯೆಟ್ ನ ಎರಡೂ ಗ್ರೂಪ್ ನ ಪರೀಕ್ಷೆ ಬರೆಯಲು ಅವಕಾಶವಿದ್ದು ಐ.ಸಿ.ಎ.ಐ. ಮಾದರಿಯಲಿಯೇ ಪರೀಕ್ಷೆಗಳು ನಡೆಯಲಿದೆ.ಹಾಗೂ ಜೂನ್ ತಿಂಗಳಲ್ಲಿ ಸಿ. ಎ ಕೋರ್ಸ್ ನ ಮೊದಲ ಹಂತವಾದ ಸಿ.ಎ ಫೌಂಡೇಶನ್ ಪರೀಕ್ಷೆ ಬರೆಯತ್ತಿರುವ ವಿದ್ಯಾರ್ಥಿಗಳಿಗೆ ರಿವಿಷನ್ ತರಗತಿಗಳು (Crash Course) ಏಪ್ರಿಲ್ 12 […]
ಬಿಜೆಪಿಯಿಂದ ದೂರ ಸರಿಯುತ್ತಿರುವ ಶಿಕ್ಷಕರ-ಪದವೀಧರರ ಕ್ಷೇತ್ರಗಳು: ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಅವಲೋಕನ
ಉಡುಪಿ: ಒಂದುಕಾಲವಿತ್ತು, ವಿಧಾನಪರಿಷತ್ ನಲ್ಲಿ ಬಹುಮುಖ್ಯವಾಗಿ ಶಿಕ್ಷಕರ ಕ್ಷೇತ್ರ -ಪದವೀಧರರ ಕ್ಷೇತ್ರಗಳೆಂದರೆ ಬಿಜೆಪಿಯೇ ತುಂಬಿ ತುಳುಕುವ ಸದನವಾಗಿತ್ತು. ಬಿಜೆಪಿ ಬಿಟ್ಟರೆ ಜೆಡಿಎಸ್ ಆ ಸ್ಥಾನ ತುಂಬಿಸಿಕೊಳ್ಳುತ್ತಿತು. ಆದರೆ ಇತ್ತೀಚಿನ ಈ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹೆಚ್ಚಿನ ಬೇಡಿಕೆ ಇದೆ ಮಾತ್ರವಲ್ಲ ಗೆದ್ದು ಬರುವ ಅವಕಾಶ ಹೆಚ್ಚಾಗಿ ವೇದ್ಯವಾಗುವ ವಾತಾವರಣ ಸೃಷ್ಟಿಯಾಗುತ್ತಿದೆ. ಹಾಗಾಗಿ ರಾಜ್ಯ ವ್ಯಾಪಿಯಾಗಿ ಬಿಜೆಪಿ-ಜೆಡಿಎಸ್ ವಿಧಾನಪರಿಷತ್ ಸದಸ್ಯರು ರಾಜೀನಾಮೆ ನೀಡಿರುವುದು ಮಾತ್ರವಲ್ಲ ಅವರು ಕಾಂಗ್ರೆಸ್ ಪಕ್ಷವನ್ನೆ ಒಪ್ಪಿಕೊಳ್ಳುವ ಅಪ್ಪಿಕೊಳ್ಳುವ ಪರಿಸ್ಥಿತಿ ಯಾಕೆ ಬಂದಿದೆ ಅನ್ನುವುದನ್ನು […]
ಬಿಜೆಪಿ ಕಾಪು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರ ಪದಗ್ರಹಣ
ಕಾಪು: ಭಾರತೀಯ ಜನತಾ ಪಾರ್ಟಿ ಕಾಪು ವಿಧಾನಸಭಾ ಕ್ಷೇತ್ರದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಹಾಗೂ ಕಾಪು ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶ ಮಾ. 30 ರಂದು ಕಾಪು K1 ಹೋಟೆಲಿನಲ್ಲಿ ನಡೆಯಿತು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಿ ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ದಾಖಲೆಗಳ ಮತಗಳ ಅಂತರದಲ್ಲಿ ಗೆಲ್ಲಿಸಲು ಕರೆನೀಡಿದರು.