ಪಶ್ಚಿಮ ಬಂಗಾಳದಲ್ಲಿ ಹಠಾತ್ ಚಂಡಮಾರುತಕ್ಕೆ 5 ಬಲಿ; 300 ಕ್ಕೂ ಹೆಚ್ಚು ಜನ ಗಾಯಾಳು

ಪಶ್ಚಿಮ ಬಂಗಾಳದಲ್ಲಿ ಹಠಾತ್ ಚಂಡಮಾರುತಕ್ಕೆ 5 ಬಲಿ; 300 ಕ್ಕೂ ಹೆಚ್ಚು ಜನ ಗಾಯಾಳು ಕೊಲ್ಕತ್ತಾ: ಉತ್ತರ ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಗೆ ಭಾನುವಾರ ಅಪ್ಪಳಿಸಿದ ಹಠಾತ್ ಚಂಡಮಾರುತದಲ್ಲಿ ಕನಿಷ್ಠ 5 ಸಾವನ್ನಪ್ಪಿದ್ದಾರೆ ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮನೆಗಳು ಹಾಗೂ ಕಟ್ಟಡಗಳಿಗೂ ಹಾನಿಯಾಗಿರುವ ವರದಿಯಾಗಿದೆ. ಆಸ್ಪತ್ರೆಗೆ ದಾಖಲಾಗಿರುವ 42 ಮಂದಿಯಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಬಂಗಾಳದ ಗವರ್ನರ್ ಸಿವಿ ಆನಂದ ಬೋಸ್ ಅವರು ಸೋಮವಾರ ಚಂಡಮಾರುತ ಪೀಡಿತ ಪ್ರದೇಶಕ್ಕೆ […]

ಕಾಪು ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಆತ್ಮಹತ್ಯೆ ಪ್ರಕರಣ: ಪತಿ ಬಂಧನ

ಕಾಪು: ಕಾಪು ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಜ್ಯೋತಿ(32) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ರವಿ ಕುಮಾರ್(35) ಬಂಧಿತ ವ್ಯಕ್ತಿ. ಈತ ಕೆಎಸ್‌ಆರ್‌ಟಿಸಿಯಲ್ಲಿ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, 2017ರಲ್ಲಿ ತನ್ನದೇ ಊರಿನ ಜ್ಯೋತಿಯನ್ನು ಮದುವೆಯಾಗಿದ್ದ. ಜ್ಯೋತಿ ಕಾಪು ಠಾಣಾ ಸಿಬ್ಬಂದಿಯಾಗಿರುವುದರಿಂದ ಠಾಣೆಯ ಸಮೀಪದಲ್ಲೇ ಇರುವ ಪೊಲೀಸ್ ವಸತಿಗೃಹದಲ್ಲಿ ವಾಸವಾಗಿದ್ದರು. ಜ್ಯೋತಿ ಆತ್ಮಹತ್ಯೆ ಮಾಡಿಕೊಂಡ ರೂಮಿನಲ್ಲಿ ಒಂದು ಡೈರಿ ಸಿಕ್ಕಿದ್ದು, ಅದರಲ್ಲಿ ತನ್ನ ಸಾವಿಗೆ ತನ್ನ ಗಂಡನ […]

ಮಂಗಳೂರು: ರಸ್ತೆಯಲ್ಲಿ ಇಫ್ತಾರ್ ಆಯೋಜನೆ; ಆಯೋಜಕರಿಗೆ ಚುನಾವಣಾ ಆಯೋಗ ನೋಟಿಸ್

ಮಂಗಳೂರು: ಮಡಿಪು ಜಂಕ್ಷನ್ ರಸ್ತೆಯಲ್ಲಿ ಇಫ್ತಾರ್ ಕೂಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆಯೋಜಕರ ವಿರುದ್ದ ಕಾರಣ ಕೇಳಿ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ. ಮಾರ್ಚ್ 29 ರಂದು ಮುಡಿಪು ಜಂಕ್ಷನ್ ನಲ್ಲಿ ಅಬೂಬಕ್ಕರ್ ಸಿದ್ಧೀಕ್ ಎಂಬುವರು ಸಾರ್ವಜನಿಕ ರಸ್ತೆಯ ಮಧ್ಯದಲ್ಲೇ ಇಫ್ತಾರ್ ಕೂಟ ಆಯೋಜನೆ ಮಾಡಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿರುವ ಚುನಾವಣಾ ಆಯೋಗ, ರಸ್ತೆಯಲ್ಲಿ ಇಫ್ತಾರ್ ಕೂಟ […]

ಡಾ. ತಲ್ಲಾಣಿ ಸೂಪರ್ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್ ನಲ್ಲಿ ತಜ್ಞ ವೈದ್ಯರ ಸೇವೆ ಲಭ್ಯ

ಉಡುಪಿ: ಇಲ್ಲಿನ ಹಳೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ, ಆಲ್ವಿನ್ ಬೇಕರಿ ಎದುರುಗಡೆ ಮಾ.17 ರಂದು ನೂತನವಾಗಿ ಪ್ರಾರಂಭವಾದ ಡಾ.ತಲ್ಲಾಣಿ ಸೂಪರ್ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್ ನಲ್ಲಿ ಸೇವೆ ಪ್ರಾರಂಭವಾಗಿದ್ದು ಡಾ. ಸಚಿನ್ ತಲ್ಲಾಣಿ ಹಾಗೂ ಇತರ ತಜ್ಞರು ಬೆಳಿಗ್ಗೆ 9 ರಿಂದ ರಾತ್ರಿ 8 ರವರೆಗೆ ಸೇವೆಗೆ ಲಭ್ಯರಿರುತ್ತಾರೆ. ಅಪಾಯಿಂಟ್ಮೆಂಟ್ಗಳಿಗಾಗಿ ಸಂಪರ್ಕಿಸಿ: 9901008538

ಕೋಟ: ಹಣಕಾಸಿನ ವಿಚಾರಕ್ಕೆ ಹಲ್ಲೆ; ಪ್ರಕರಣ ದಾಖಲು

ಕೋಟ: ಹಣಕಾಸಿನ ವಿಚಾರಕ್ಕೆ ಇಬ್ಬರ ಮಧ್ಯೆ ವಾಗ್ವಾದ ನಡೆದಿದ್ದು, ಹಲ್ಲೆ ಪ್ರಕರಣ ನಡೆದಿದೆ. ಕುಂಭಾಶಿಯ ಪುರಂದರ (44) ಎನ್ನುವ ವ್ಯಕ್ತಿ ತಮ್ಮ ಮನೆಯಲ್ಲಿದ್ದ ಸಮಯದಲ್ಲಿ ಆರೋಪಿ ಸಾಗರ್ ಎನ್ನುವ ವ್ಯಕ್ತಿ ಬೆಳಿಗ್ಗೆ ದೂರುದಾರರ ಮನೆಗೆ ಬಂದು ಅವರನ್ನು ಅಡ್ಡಗಟ್ಟಿ ಬಡ್ಡಿ ಕಾಸಿನ ಹಣದ ವಿಚಾರದಲ್ಲಿ ಜಗಳ ಮಾಡಿದ್ದಾರೆ. ಅಲ್ಲಿಂದ ತೆಕ್ಕಟ್ಟೆಯಲ್ಲಿರುವ ಆರೋಪಿಯ ಮನೆಗೆ ಕರೆದುಕೊಂಡು ಹೋಗಿದ್ದು, ಆರೋಪಿಯ ಮನೆಯ ಅಂಗಳಲ್ಲಿ ಬಾರುಗೋಲಿನಲ್ಲಿ ದೂರುದಾರರಿಗೆ ಹೊಡೆದು ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಪುರಂದರ ನೀಡಿದ ದೂರಿನಂತೆ […]