ಕೊಲ್ಲೂರು: ಕೆಲಸಕ್ಕೆ ಹೋದ ಯುವಕ ನಾಪತ್ತೆ

ಕೊಲ್ಲೂರು: ಬೆಳ್ಳಾಲ ಗ್ರಾಮದ ಮೋರ್ಟು ನಿವಾಸಿಯಾದ ನರಸಿಂಹ ಅವರ ಪುತ್ರ ಸುದರ್ಶನ್ (18) ಫೆ. 28 ರಂದು ನಾಪತ್ತೆಯಾಗಿದ್ದಾರೆ. ಅಂದು ಬೆಳಿಗ್ಗೆ ಇಲೆಕ್ಟ್ರಿಶಿಯನ್ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರ ಹೋದವರು ಸಂಜೆಯಾದರೂ ತಿರುಗಿ ಮನೆಗೆ ಬರದ್ದನ್ನು ಕಂಡು ಅಕ್ಕ ಪಕ್ಕದ ಹಾಗೂ ಸಂಬಂಧಿಕರ ಮನೆಯಲ್ಲಿ ವಿಚಾರಿಸಿದ್ದು, ಯಾವುದೇ ಸುಳಿವು ಸಿಕ್ಕಿಲ್ಲ. ಯುವಕನ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದ್ದು ಹತ್ತಿರದ ಕೊಲ್ಲೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮುನಿಯಾಲು ಉದಯ ಶೆಟ್ಟಿಯವರ ತೇಜೋವಧೆಗೆ ಬಿಜೆಪಿ ವ್ಯರ್ಥ ಪ್ರಯತ್ನ – ಕಾರ್ಕಳ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಶೆಟ್ಟಿ ಬಜಗೋಳಿ ಖಂಡನೆ.

ಕಾರ್ಕಳ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೂದಲೆಳೆಯ ಅಂತರದಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಯು ಈ ಕ್ಷೇತ್ರದ ಜನಾಕ್ರೋಶಕ್ಕೆ ತುತ್ತಾಗಿದ್ದು, ಏಪ್ರಿಲ್ 26 ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ಜನರ ಗಮನವನ್ನು ಬೇರೆಡೆ ಸೆಳೆಯಲು ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುನಿಯಾಲು ಉದಯ ಶೆಟ್ಟಿ ಅವರ ಮೇಲೆ ಸುಳ್ಳು ದೂರು ದಾಖಲು ಮಾಡಿರುವುದು ಕಾರ್ಕಳ ಬಿಜೆಪಿಗರ ಹತಾಶೆಯ ಪ್ರತೀಕವಾಗಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರ ಗೆಲುವಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಉದಯ ಶೆಟ್ಟಿಯವರ ತೇಜೊವಧೆಗೆ ಬಿಜೆಪಿಯವರು […]

ಕಾರ್ಕಳ: ಸಾಂದೀಪನಿ ವಿದ್ಯಾ ಕೇಂದ್ರದಲ್ಲಿ ದಾಖಲಾತಿ ಪ್ರಾರಂಭ, ನವ ದಂಪತಿಗಳಿಗೆ ಸಮಾವೇಶ

ಕಾರ್ಕಳ: ವಸುದೈವ ಕುಟುಂಬಕಂ, ಸರ್ವೇಜನ: ಸುಖಿನೋ ಭವಂತು ಎಂದು ಜಗತ್ತಿಗೆ ಸಾರಿದ ದೇಶ ನಮ್ಮದು. ಸಂಸ್ಕೃತಿ, ಸಂಸ್ಕಾರ, ಸದ್ವಿಚಾರ, ಆಚಾರ, ವಿಚಾರಗಳನ್ನು ಒಳಗೊಂಡ ಬಹುಸಂಪನ್ನತೆಯ ಘನತೆ, ಗೌರವದ ನೆಲವಿದು. ಇಂತಹ ನೆಲದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯು ಅನುಕರಣೆ ಹೆಚ್ಚಾಗುತ್ತಿದೆ ಎಂಬುದು ಕಳವಳಕಾರಿ ಸಂಗತಿಯಾಗಿದೆ. ಇದರ ಪರಿಣಾಮ ಸಾಂಸಾರಿಕ ತಾಪತ್ರಯಗಳು, ಕೌಟುಂಬಿಕ ಕಲಹಗಳು ಗಣ್ಯವಾಗಿದ್ದು ಸಾಮರಸ್ಯದ ಬಾಂಧವ್ಯದ ನಡೆ-ನುಡಿಗಳು ನಗಣ್ಯವಾಗಿವೆ. ನಾವಿಂದು ಜಾಗೃತರಾಗ ಬೇಕಾಗಿದೆ. ಈ ನಿಟ್ಟಿನಲ್ಲಿ ಸಮರಸದ ಬಾಳನ್ನು ನಡೆಸುತ್ತಾ ರಾಷ್ಟ್ರ ಕಟ್ಟುವುದಕ್ಕಾಗಿ ಕೈ ಜೋಡಿಸುವಂತಹ ಮಾದರಿ ಕುಟುಂಬ […]

ಚುನಾವಣಾ ಅಕ್ರಮದ ದೂರುಗಳನ್ನು ಸಿ-ವಿಜಿಲ್‌ನಲ್ಲಿ ಆ್ಯಪ್‌ ನಲ್ಲಿ ದಾಖಲಿಸಿ

ಉಡುಪಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ತಮ್ಮ ನಾಯಕರನ್ನು ಆಯ್ಕೆ ಮಾಡುವ ಅವಕಾಶವಿದೆ. ಮತದಾನ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ, ನ್ಯಾಯಸಮ್ಮತ, ಮುಕ್ತಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಯಲು ಸಾರ್ವಜನಿಕರ ಪಾತ್ರ ಬಹುಮುಖ್ಯವಾಗಿದೆ. ಚುನಾವಣಾ ಅಕ್ರಮಗಳನ್ನು ತಡೆಯಲು ಮಾದರಿ ನೀತಿ ಸಂಹಿತೆ ತಂಡ, ಸೆಕ್ಟರ್ ಅಧಿಕಾರಿಗಳ ತಂಡ, ಪೊಲೀಸ್ ತಂಡ, ಫ್ಲೈಂಯಿಂಗ್ ಸ್ಕ್ವಾಡ್ ತಂಡ, ವೀಡಿಯೋ ವೀಕ್ಷಣಾ ತಂಡ ಸೇರಿದಂತೆ ಅನೇಕ ತಂಡಗಳನ್ನು ರಚಿಸಿದೆ. ಇದರ ಜೊತೆಗೆ ಚುನಾವಣಾ ಆಯೋಗವು ಸಿ-ವಿಜಿಲ್ (C-Vigil) ಆ್ಯಪ್‌ರೂಪಿಸಿದೆ. ಚುನಾವಣೆಗೆ ಸಂಬಂಧಿಸಿದಂತೆ ಯಾವುದಾದರೂ ದೂರುಗಳು ಇದ್ದಲ್ಲಿ […]

ಎಕ್ಸಿಟ್ ಪೋಲ್, ಅಭಿಪ್ರಾಯ ಸಂಗ್ರಹಣೆಗಿಲ್ಲ ಅವಕಾಶ: ಚುನಾವಣಾ ಆಯೋಗ ನಿರ್ದೇಶನ

ನವದೆಹಲಿ: ಲೋಕಸಭೆ ಹಾಗೂ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಏ.19ರ ಬೆಳಿಗ್ಗೆ 7 ರಿಂದ ಜೂ.1ರ ಸಂಜೆ 6.30ರವರೆಗೆ ಯಾವುದೇ ಚುನಾವಣೋತ್ತರ ಸಮೀಕ್ಷೆ(Exit Polls) ನಡೆಸುವುದಾಗಲಿ, ಪ್ರಕಟಿಸುವುದಾಗಲಿ ಮಾಡುವಂತಿಲ್ಲ ಎಂದು ಚುನಾವಣಾ ಆಯೋಗ ಆದೇಶ ನೀಡಿದೆ. ಅಭಿಪ್ರಾಯ ಸಂಗ್ರಹಗಳು, ಚುನಾವಣಾ ಸಮೀಕ್ಷೆ ಫಲಿತಾಂಶ ಸೇರಿದಂತೆ ಯಾವುದೇ ಚುನಾವಣೆ ಸಂಬಂಧಿ ಮಾಹಿತಿಗಳನ್ನು ಚುನಾವಣೆ ಮುಗಿಯುವವರೆಗೆ ವಿದ್ಯುನ್ಮಾನ ಮಾಧ್ಯಮಗಳಲ್ಲಿನ ಪ್ರಸಾರಕ್ಕೆ ಜನಪ್ರತಿನಿಧಿಗಳ ಕಾಯ್ದೆ ಅನುಸಾರ ನಿರ್ಬಂಧಿಸಲಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.