ಕಾರ್ಕಳ: ಸಾಂದೀಪನಿ ವಿದ್ಯಾ ಕೇಂದ್ರದಲ್ಲಿ ದಾಖಲಾತಿ ಪ್ರಾರಂಭ, ನವ ದಂಪತಿಗಳಿಗೆ ಸಮಾವೇಶ

ಕಾರ್ಕಳ: ವಸುದೈವ ಕುಟುಂಬಕಂ, ಸರ್ವೇಜನ: ಸುಖಿನೋ ಭವಂತು ಎಂದು ಜಗತ್ತಿಗೆ ಸಾರಿದ ದೇಶ ನಮ್ಮದು. ಸಂಸ್ಕೃತಿ, ಸಂಸ್ಕಾರ, ಸದ್ವಿಚಾರ, ಆಚಾರ, ವಿಚಾರಗಳನ್ನು ಒಳಗೊಂಡ ಬಹುಸಂಪನ್ನತೆಯ ಘನತೆ, ಗೌರವದ ನೆಲವಿದು. ಇಂತಹ ನೆಲದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯು ಅನುಕರಣೆ ಹೆಚ್ಚಾಗುತ್ತಿದೆ ಎಂಬುದು ಕಳವಳಕಾರಿ ಸಂಗತಿಯಾಗಿದೆ. ಇದರ ಪರಿಣಾಮ ಸಾಂಸಾರಿಕ ತಾಪತ್ರಯಗಳು, ಕೌಟುಂಬಿಕ ಕಲಹಗಳು ಗಣ್ಯವಾಗಿದ್ದು ಸಾಮರಸ್ಯದ ಬಾಂಧವ್ಯದ ನಡೆ-ನುಡಿಗಳು ನಗಣ್ಯವಾಗಿವೆ. ನಾವಿಂದು ಜಾಗೃತರಾಗ ಬೇಕಾಗಿದೆ. ಈ ನಿಟ್ಟಿನಲ್ಲಿ ಸಮರಸದ ಬಾಳನ್ನು ನಡೆಸುತ್ತಾ ರಾಷ್ಟ್ರ ಕಟ್ಟುವುದಕ್ಕಾಗಿ ಕೈ ಜೋಡಿಸುವಂತಹ ಮಾದರಿ ಕುಟುಂಬ ನಿರ್ಮಿಸಬೇಕಿದೆ.

ದಾಂಪತ್ಯ ಎನ್ನುವುದು ವೈಭವಕ್ಕಲ್ಲ, ವೈಭೋಗಕ್ಕೂ ಅಲ್ಲ. ಗದ್ದಲ, ಗುದ್ದಾಟಗಳಿಗೂ ಅಲ್ಲ. ದಾಂಪತ್ಯವೆಂಬುದು ಸರಸ, ವಿರಸ, ಸಮರಸದ ಬಾಳುವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳ ಬೇಕಾಗಿದೆ. ಆದರ್ಶ ದಾಂಪತ್ಯದ ಮೂಲಕ ಸುಖಿಪರಿವಾರವನ್ನು ಹುಟ್ಟು ಹಾಕಬೇಕೆಂಬ ಆಶಯ ಸರ್ವ ಬಂಧುಗಳದ್ದು.

ನವ-ಯುವ ದಂಪತಿಗಳ ಸಮಾವೇಶ ಗೃಹಸ್ಥಾಶ್ರಮದ ಜೀವನ ಪದ್ಧತಿಯ ಸಂಸ್ಕಾರ, ಸಾಮರಸ್ಯದ ಬದುಕನ್ನು ಪ್ರಸ್ತುತ ಪಡಿಸುವ ಯುವ- ನವ ದಂಪತಿಗಳ ಉಚಿತ ಸಮಾವೇಶವನ್ನು ಭಾರತಿ ಸೇವಾ
ಸಮಿತಿ ಕಾರ್ಕಳ ಹಾಗೂ ಕುಟುಂಬ ಪ್ರಬೋಧನ್ ಸಹಯೋಗದೊಂದಿಗೆ, ರಾಷ್ಟ್ರೀಯ ಸ್ವಯಂ ಸೇವಕ
ಸಂಘದ ಹಿರಿಯ ಪ್ರಚಾರಕ ಸು.ರಾಮಣ್ಣ ಇವರ ಮಾರ್ಗದರ್ಶನದಲ್ಲಿ ಕಾರ್ಕಳದ ಸಾಂದೀಪನಿ ವಿದ್ಯಾಕೇಂದ್ರದಲ್ಲಿ ಏ 7 ಆದಿತ್ಯವಾರದಂದು, ಬೆಳಗ್ಗೆ 9 ರಿಂದ ಮದ್ಯಾಹ್ನ 3 ಗಂಟೆಯವರೆಗೆ ಆಯೋಜಿಸಲಾಗಿದೆ. ಆಸಕ್ತ ದಂಪತಿಗಳು ಈ ಮುಂದಿನ ಸಂಪರ್ಕ ಸಂಖ್ಯೆಗೆ ಕರೆಮಾಡಿ ನೊಂದಾಯಿಸಿಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.

ಮಾಹಿತಿಗಾಗಿ: 9632381348, 8150059912 ಸಂಪರ್ಕಿಸಬಹುದು.

ದಾಖಲಾತಿ ಆಹ್ವಾನ: ಸೇವೆ, ಸಂಸ್ಕಾರ, ಶಿಕ್ಷಣ, ಸಾಮರಸ್ಯ, ಸಂಘಟನೆ ಎಂಬ ಧ್ಯೇಯದೊಂದಿಗೆ 1991ರಲ್ಲಿ ಕಾರ್ಕಳದಲ್ಲಿ ಪ್ರಾರಂಭಗೊಂಡ ಸಂಸ್ಥೆ ಭಾರತಿ ಸೇವಾ ಸಮಿತಿ (ರಿ). ಇವರ ಪ್ರಾಯೋಜಕತ್ವದಲ್ಲಿ ಪೆರ್ವಾಜೆ ಸಮೀಪದ ಭಾರತೀ ನಗರದಲ್ಲಿ ಸಾಂದೀಪನಿ ವಿದ್ಯಾ ಕೇಂದ್ರವು ಕಾರ್ಯಚರಿಸುತ್ತಾ ಬರುತ್ತಿದೆ. ಕಳೆದ 31 ವರ್ಷಗಳಿಂದ ಗುರುಕುಲ ಮಾದರಿಯಲ್ಲಿ ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ದೈಹಿಕ, ಬೌದ್ಧಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಜ್ಞಾನಧಾರೆಯನ್ನು ಬಾಲ-ಬಾಲೆಯರಿಗೆ ನೀಡುತ್ತಾ ಬರಲಾಗುತ್ತಿದೆ.

ಅತೀ ಕಡಿಮೆ ಶುಲ್ಕದಲ್ಲಿ ಮೂರು ವರ್ಷದ ಬಾಲ ಶಿಕ್ಷಣವನ್ನು ನೀಡುವ ಕಾರ್ಕಳ ಪರಿಸರದ ಏಕೈಕ
ಸಂಸ್ಥೆಯಾಗಿದೆ. ಇಲ್ಲಿ ಸಂಸ್ಕಾರದ ಜೊತೆಗೆ ಆಧುನಿಕ ಪ್ರಶಿಕ್ಷಣವನ್ನು ಒದಗಿಸುತ್ತಾ ಮಗುವಿನ
ಸರ್ವತೋಮುಖ ಬೆಳವಣಿಗೆಗೆ ಅಡಿಪಾಯ ನೀಡಲು ಕಂಕಣಬದ್ಧವಾಗಿದೆ. 2 ವರ್ಷ 10 ತಿಂಗಳ ಪ್ರಾಯದ ಮಗುವನ್ನು ಉಷಾ ತರಗತಿಗೂ, 3 ವರ್ಷ 10 ತಿಂಗಳ ಪ್ರಾಯದ ಮಗುವನ್ನು ಅರುಣ ತರಗತಿಗೂ (ಎಲ್.ಕೆ.ಜಿ), 4 ವರ್ಷ 10 ತಿಂಗಳ ಪ್ರಾಯದ ಮಗುವನ್ನು ಉದಯ (ಯು.ಕೆ.ಜಿ) ತರಗತಿಗೂ ದಾಖಲಾತಿ ಮಾಡಲಾಗುತ್ತದೆ. ಈ ವರ್ಷದ ದಾಖಲಾತಿ ಎಪ್ರಿಲ್ 1 ರಿಂದ ಪ್ರಾರಂಭಗೊಳ್ಳಲಿದೆ.

ಆಸಕ್ತರು ವಿವರಗಳಿಗಾಗಿ 9611838280, 9845438960 ಸಂಪರ್ಕಿಸಬಹುದು.