ಎಕ್ಸಿಟ್ ಪೋಲ್, ಅಭಿಪ್ರಾಯ ಸಂಗ್ರಹಣೆಗಿಲ್ಲ ಅವಕಾಶ: ಚುನಾವಣಾ ಆಯೋಗ ನಿರ್ದೇಶನ

ನವದೆಹಲಿ: ಲೋಕಸಭೆ ಹಾಗೂ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಏ.19ರ ಬೆಳಿಗ್ಗೆ 7 ರಿಂದ ಜೂ.1ರ ಸಂಜೆ 6.30ರವರೆಗೆ ಯಾವುದೇ ಚುನಾವಣೋತ್ತರ ಸಮೀಕ್ಷೆ(Exit Polls) ನಡೆಸುವುದಾಗಲಿ, ಪ್ರಕಟಿಸುವುದಾಗಲಿ ಮಾಡುವಂತಿಲ್ಲ ಎಂದು ಚುನಾವಣಾ ಆಯೋಗ ಆದೇಶ ನೀಡಿದೆ.

ಅಭಿಪ್ರಾಯ ಸಂಗ್ರಹಗಳು, ಚುನಾವಣಾ ಸಮೀಕ್ಷೆ ಫಲಿತಾಂಶ ಸೇರಿದಂತೆ ಯಾವುದೇ ಚುನಾವಣೆ ಸಂಬಂಧಿ ಮಾಹಿತಿಗಳನ್ನು ಚುನಾವಣೆ ಮುಗಿಯುವವರೆಗೆ ವಿದ್ಯುನ್ಮಾನ ಮಾಧ್ಯಮಗಳಲ್ಲಿನ ಪ್ರಸಾರಕ್ಕೆ ಜನಪ್ರತಿನಿಧಿಗಳ ಕಾಯ್ದೆ ಅನುಸಾರ ನಿರ್ಬಂಧಿಸಲಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.