ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ: ಫೆ.14ರಂದು ಶ್ರೀ ಮನ್ಮಹಾರಥೋತ್ಸವ
ಬ್ರಹ್ಮಾವರ: ಮಂದಾರ್ತಿ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಫೆಬ್ರವರಿ 13 ಕುಂಭ ಸಂಕ್ರಮಣದಂದು ರಾತ್ರಿ ಕೆಂಡೆಸೇವೆ, 14ರಂದು ಶ್ರೀ ಮನ್ಮಹಾರಥೋತ್ಸವ, 15ರಂದು ರಾತ್ರಿ ಕೆರೆ ದೀಪೋತ್ಸವ, ಪಲ್ಲಕ್ಕಿ ಉತ್ಸವ, ಅಷ್ಟವಧಾನ ಸೇವೆ ನಡೆಯಲಿದ್ದು, ಆನಂತರ ಐದು ಮೇಳಗಳಿಂದ ಸೇವೆ ಆಟ ನಡೆಯಲಿದೆ. ದೇವಸ್ಥಾನದಲ್ಲಿ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿ ಹೆಚ್ಚುತ್ತಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಕೆಂಡಸೇವೆ ಈ ಬಾರಿ ಮಾಮೂಲಿಗಿಂತ ಬೇಗನೆ ಪ್ರಾರಂಭಗೊಳ್ಳಲಿದೆ. ರಾತ್ರಿ 7ರಿಂದ ಸೇವಾ ಚೀಟಿ ನೀಡಲು ಪ್ರಾರಂಭವಾಗಲಿದ್ದು, ರಾತ್ರಿ 9ಕ್ಕೆ ದರ್ಶನ ಸೇವೆ ಮುಗಿದ […]
ಕಾರ್ಕಳ: ಛಾಯಾಗ್ರಾಹಕ ದೀಪಕ್ ಶೆಟ್ಟಿ ಹೃದಯಾಘಾತದಿಂದ ನಿಧನ
ಕಾರ್ಕಳ : ತೆಳ್ಳಾರು ನಿವಾಸಿ ಛಾಯಾಗ್ರಾಹಕ ದೀಪಕ್ ಶೆಟ್ಟಿ (45) ಹೃದಯಾಘಾತದಿಂದ ಫೆ. 12ರಂದು ನಿಧನ ಹೊಂದಿದ್ದಾರೆ. ಕಡ್ತಲ ಗ್ರಾಮ ಕುಕ್ಕುಜೆಯಲ್ಲಿ ಗೃಹಪ್ರವೇಶದ ವಿಡಿಯೋಗ್ರಫಿ ಮಾಡುತ್ತಿದ್ದ ಸಂದರ್ಭ ಕುಸಿದು ಬಿದ್ದಿದ್ದು ತಕ್ಷಣವೇ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಈ ವೇಳೆಗಾಗಲೇ ದೀಪಕ್ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಖಾಸಗಿ ಶಾಲಾ ಶಿಕ್ಷಕಿಯಿಂದ ಹಿಂದೂ ಧರ್ಮದ ಅವಹೇಳನ: ಜನಾಕ್ರೋಶಕ್ಕೆ ಮಣಿದ ಆಡಳಿತ ಮಂಡಳಿ; ಶಿಕ್ಷಕಿ ವಜಾ
ಮಂಗಳೂರು: ಹಿಂದೂ ಧರ್ಮ ದೇವರುಗಳ ಬಗ್ಗೆ ಅವಹೇಳನ ಮಾಡಿದ ಆರೋಪ ಎದುರಿಸುತ್ತಿರುವ ನಗರದ ವಲೆನ್ಸಿಯಾದ ಖಾಸಗಿ ಶಾಲೆಯ ಶಿಕ್ಷಕಿಯನ್ನು ಶಾಲಾಡಳಿತ ಮಂಡಳಿ ವಜಾಗೊಳಿಸಿದೆ. ಎರಡು ದಿನಗಳಿಂದ ಪೋಷಕರು ಮತ್ತು ಹಿಂದೂ ಸಂಘಟನೆಗಳ ಪ್ರತಿಭಟನೆಗೆ ಮಣಿದ ಆಡಳಿತ ಮಂಡಳಿ, ಶಿಕ್ಷಕಿ ಪ್ರಭಾ ಅವರನ್ನು ವಜಾ ಮಾಡಿ ಆದೇಶ ಹೊರಡಿಸಿದೆ. ಕೆಲವು ದಿನಗಳ ಹಿಂದೆ ಶಿಕ್ಷಕಿ ಪ್ರಭಾ “ವರ್ಕ್ ಈಸ್ ವರ್ಶಿಪ್’ ಪಾಠ ಮಾಡುವಾಗ ಹಿಂದೂ ಧರ್ಮ ಹಾಗೂ ಶ್ರೀರಾಮದೇವರನ್ನು ಅವಹೇಳನ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ತಮ್ಮ ಪೋಷಕರಲ್ಲಿ ತಿಳಿಸಿದ್ದರು. […]
ಮಂಗಳೂರು: ಯಕ್ಷಾಭಿನಯ ಬಳಗದ ವಾರ್ಷಿಕೋತ್ಸವ ಸಮಾರಂಭ
ಮಂಗಳೂರು: ಮಂಗಳೂರಿನಲ್ಲಿ ಬಡಗುತಿಟ್ಟು ಯಕ್ಷಗಾನ ಅಭ್ಯಾಸ ಮತ್ತು ಪ್ರದರ್ಶನಕ್ಕೆ ಯಕ್ಷಾಭಿನಯ ಬಳಗ ಆಸಕ್ತರಿಗೆ ವೇದಿಕೆ ಒದಗಿಸಿದೆ. ಕಳೆದ 5 ವರ್ಷಗಳ ಹಿಂದೆ ಶುರುವಾದ ಯಕ್ಷಾಭಿನಯ ಬಳಗವು ತನ್ನ ನಾಲ್ಕನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಫೆಬ್ರವರಿ 10 ರಂದು ವೀರಮಣಿ ಕಾಳಗ ಪ್ರಸಂಗವನ್ನು ಮಂಗಳೂರು ಪುರಭವನದಲ್ಲಿ ಪ್ರದರ್ಶನವನ್ನು ಏರ್ಪಡಿಸಿತ್ತು. ಮುಖ್ಯ ಅತಿಥಿಗಳಾಗಿ ಹಿರಿಯ ಯಕ್ಷಗಾನ ಅರ್ಥಧಾರಿ, ವಿದ್ವಾಂಸ, ವಿಮರ್ಶಕ ಡಾ.ಪ್ರಭಾಕರ್ ಜೋಷಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್( ರಿ.) ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ,ರಂಗಸ್ಥಳ (ರಿ.) […]
ಶ್ರೀ ಶಾರದಾಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ “ನಾರಿಶೃಂಗ”: ಪೂರ್ವ ಪ್ರಾಥಮಿಕ ಶಿಕ್ಷಕರ ಕಾರ್ಯಾಗಾರ ಸಂಪನ್ನ
ಮಣಿಪಾಲ: ಶ್ರೀ ಶಾರದಾಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಪೂರ್ವ ಪ್ರಾಥಮಿಕ/ಮಾಂಟೆಸ್ಸೆರಿ ಶಿಕ್ಷಕಿಯರಿಗೆ “ನಾರಿ ಶೃಂಗ” ಎಂಬ ಶೀರ್ಷಿಕೆಯ ಆಡಿಯಲ್ಲಿ ಮೂರು ದಿವಸಗಳ ಕಾರ್ಯಾಗಾರವನ್ನು ಆಸರೆ ಟ್ರಸ್ಟನ ಅಧ್ಯಕ್ಷ ಜೈವಿಠಲ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮಕ್ಕಳ ಪ್ರತಿಭೆಯನ್ನು ಗುರುತಿಸುವಲ್ಲಿ ಹಾಗೂ ವಿಶೇಷ ಚೇತನ ಮಕ್ಕಳ ಹೆತ್ತವರಿಗೆ ಉತ್ತಮ ಮಾರ್ಗದರ್ಶನ ನೀಡುವಲ್ಲಿ ಶಿಕ್ಷಕಿಯರ ಪಾತ್ರವನ್ನು ತಿಳಿಸಿದರು. ಮಣಿಪಾಲ ಠಾಣೆಯ ಪೊಲೀಸ್ ನಿರೀಕ್ಷಕ ದೇವರಾಜ್ ಟಿ.ವಿ. ಮಾತನಾಡಿ, ಇತ್ತೀಚೀನ ದಿನಗಳಲ್ಲಿ ಸೈಬರ್ ಕ್ರೈಂ ಹೆಚ್ಚುತ್ತಿದ್ದು, ಜನರು ಹೇಗೆ […]