ಕಾರ್ಕಳ: ಛಾಯಾಗ್ರಾಹಕ ದೀಪಕ್ ಶೆಟ್ಟಿ ಹೃದಯಾಘಾತದಿಂದ ನಿಧನ

ಕಾರ್ಕಳ : ತೆಳ್ಳಾರು ನಿವಾಸಿ ಛಾಯಾಗ್ರಾಹಕ ದೀಪಕ್ ಶೆಟ್ಟಿ (45) ಹೃದಯಾಘಾತದಿಂದ ಫೆ. 12ರಂದು ನಿಧನ ಹೊಂದಿದ್ದಾರೆ.

ಕಡ್ತಲ ಗ್ರಾಮ ಕುಕ್ಕುಜೆಯಲ್ಲಿ ಗೃಹಪ್ರವೇಶದ ವಿಡಿಯೋಗ್ರಫಿ ಮಾಡುತ್ತಿದ್ದ ಸಂದರ್ಭ ಕುಸಿದು ಬಿದ್ದಿದ್ದು ತಕ್ಷಣವೇ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಈ ವೇಳೆಗಾಗಲೇ ದೀಪಕ್ ಕೊನೆಯುಸಿರೆಳೆದಿದ್ದಾರೆ.

ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.