ಮಂಗಳೂರು: ಯಕ್ಷಾಭಿನಯ ಬಳಗದ ವಾರ್ಷಿಕೋತ್ಸವ ಸಮಾರಂಭ

ಮಂಗಳೂರು: ಮಂಗಳೂರಿನಲ್ಲಿ ಬಡಗುತಿಟ್ಟು ಯಕ್ಷಗಾನ ಅಭ್ಯಾಸ ಮತ್ತು ಪ್ರದರ್ಶನಕ್ಕೆ ಯಕ್ಷಾಭಿನಯ ಬಳಗ ಆಸಕ್ತರಿಗೆ ವೇದಿಕೆ ಒದಗಿಸಿದೆ. ಕಳೆದ 5 ವರ್ಷಗಳ ಹಿಂದೆ ಶುರುವಾದ ಯಕ್ಷಾಭಿನಯ ಬಳಗವು ತನ್ನ ನಾಲ್ಕನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಫೆಬ್ರವರಿ 10 ರಂದು ವೀರಮಣಿ ಕಾಳಗ ಪ್ರಸಂಗವನ್ನು ಮಂಗಳೂರು ಪುರಭವನದಲ್ಲಿ ಪ್ರದರ್ಶನವನ್ನು ಏರ್ಪಡಿಸಿತ್ತು.

ಮುಖ್ಯ ಅತಿಥಿಗಳಾಗಿ ಹಿರಿಯ ಯಕ್ಷಗಾನ ಅರ್ಥಧಾರಿ, ವಿದ್ವಾಂಸ, ವಿಮರ್ಶಕ ಡಾ.ಪ್ರಭಾಕರ್ ಜೋಷಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್( ರಿ.) ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ,
ರಂಗಸ್ಥಳ (ರಿ.) ಮಂಗಳೂರು ಇದರ ಅಧ್ಯಕ್ಷ ದಿನೇಶ್ ವಿ. ಪೈ
ಮಮತಾ ಕುಲಾಲ್, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಕಾರ್ಯದರ್ಶಿ,
ಶೀಲಾವತಿ ಮುಖ್ಯೋಪಾಧ್ಯಾಯಿನಿ ದ. ಕ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ ಕಾಪಿಕಾಡು ಮಂಗಳೂರು, ಯಕ್ಷ ಗುರುಗಳಾದ ಐರೋಡಿ ಮಂಜುನಾಥ ಕುಲಾಲ್ ಹಾಗೂ
ಭಾಗವತರಾದ ಪ್ರಸಾದ್ ಕುಮಾರ್ ಮೊಗೆಬೆಟ್ಟು , ಯಕ್ಷಾಭಿನಯ ಬಳಗದ ಅಧ್ಯಕ್ಷ ಪ್ರಶಾಂತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಗುರು ಯಕ್ಷಶ್ರೀ ಐರೋಡಿ ಮಂಜುನಾಥ ಕುಲಾಲ್ ಇವರಿಗೆ ಗುರುವಂದನೆಯ ಜೊತೆಗೆ ಭಾಗವತರಾದ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರಿಗೆ ಯಕ್ಷಗಾನ ಕ್ಷೇತ್ರದಲ್ಲಿ 25 ವರುಷಗಳ ಕಲಾ ಸೇವೆಗಾಗಿ ಸನ್ಮಾನ ನಡೆಯಿತು.

ಯಕ್ಷಾಭಿನಯ ಬಳಗದ ರಾಮಕೃಷ್ಣ ಮರಾಟಿಸ್ವಾಗತಿಸಿದರು, ಅಧ್ಯಕ್ಷಪ್ರಶಾಂತ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ನಾಗರಾಜ್ ತಲ್ಲಂಜೆ ಕಾರ್ಯಕ್ರಮವನ್ನು ನಿರೂಪಿಸಿದರು.
ಮಂಜುನಾಥ ತೆಂಕಿಲ್ಲಾಯರು ವಂದಿಸಿದರು.

ವಾರ್ಷಿಕೋತ್ಸವದ ಅಂಗವಾಗಿ ಯಕ್ಷಾಭಿನಯ ಬಳಗದ ಸದಸ್ಯರಿಂದ ಗುರು ಮಂಜುನಾಥ್ ಕುಲಾಲ್ ಅವರ ನಿರ್ದೇಶನದಲ್ಲಿ ವೀರಮಣಿ ಕಾಳಗ ಪ್ರಸಂಗ ಪ್ರದರ್ಶನ‌ ನಡೆಯಿತು.‌